ಐಎಂಎ ಹಗರಣ ಉಡುಪಿಯಲ್ಲಿ ಮೊದಲ ದೂರು ದಾಖಲು
ಉಡುಪಿ: ಗುಜ್ಜರ್ ಬೆಟ್ಟು ನಿವಾಸಿ ಎಸ್.ಕೆ. ನಾಹಿದಾ (30) ಎಂಬಾಕೆ IMA ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲೀ. ಬೆಂಗಳೂರು ಇದರಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಸಲು ಮೊತ್ತದ ಜೊತೆ ತಿಂಗಳಿಗೆ 3.1% ಬಡ್ಡಿ/ಲಾಭಾಂಶ ನೀಡುವುದಾಗಿ ತಿಳಿದ ಈಕೆ 31/12/2018 ರಂದು ಪಾಲು ಬಂಡವಾಳದ (ಶೇರ್) ಮೊತ್ತ ರೂಪಾಯಿ 1000/- ಹಾಗೂ ಡೆಪೋಸಿಟ್ ಆಗಿ ರೂಪಾಯಿ 30,000/- ಮತ್ತು 20,000/- ನ್ನು NEFT ಮುಖಾಂತರ ಹೂಡಿಕೆ ಮಾಡಿದ್ದು, ಈ ಬಗ್ಗೆ ಶೇರ್ ಸರ್ಟಿಫಿಕೇಟ್ ಮತ್ತು ಪಾಸ್ ಬುಕ್ ಅಂಚೆ ಮುಖೇನ ಬಂದಿದ್ದು, ಅಲ್ಲದೇ ದಿನಾಂಕ 31/01/2019 ರಂದು ರೂಪಾಯಿ 1,250/- ಹಾಗೂ ದಿನಾಂಕ 28/02/2019 ರಂದು ರೂಪಾಯಿ 1,278.13 ಬಡ್ಡಿ/ಲಾಭಾಂಶ ಜಮಾ ಆಗಿರುತ್ತದೆ. ಆದರೆ ನಂತರದ ದಿನಗಳಲ್ಲಿ ಆರೋಪಿಗಳಾದ 1) ಮನ್ಸೂರ್ ಖಾನ್, ಸಿ.ಇ.ಓ, IMA ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲೀ. ಬೆಂಗಳೂರು ಮತ್ತು ಇದರ ನಿರ್ದೇಶಕರು ಯಾವುದೇ ಬಡ್ಡಿ/ಲಾಭಾಂಶ ನೀಡದೇ ಮತ್ತು ಅಸಲು ಹೂಡಿಕೆಯ ಹಣ ಹಿಂದಿರುಗಿಸದೇ ಮೋಸ ಮಾಡಿರುವುದಾಗಿ ಎಸ್.ಕೆ. ನಾಹಿದಾ ರವರು ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ