ಅದಮಾರು ಶ್ರೀಗಳ ಪ್ರವಚನ ಪುಸ್ತಕ ಬಿಡುಗಡೆ

ಶ್ರೀ ಕೃಷ್ಣ ಮಠದದಲ್ಲಿ  ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ವಿರಾಟಪರ್ವಪ್ರವಚನಮಂಗಲ ಮತ್ತು ಷಷ್ಠಿಪೂರ್ತಿ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ “ವಿಶ್ವಾರ್ಪಣಂ” ಅನ್ನು  ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಯೋಜಿಸಿದ್ದು

ಇದರ ಅಂಗವಾಗಿ ರಾಜಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅದಮಾರು ಶ್ರೀಪಾದರು ಈ ತನಕ ರಾಘವೇಂದ್ರ ವಿಜಯ,ಶ್ರೀಕೃಷ್ಣ ಲೀಲಾಮೃತ ವಿಷಯಗಳ ಬಗ್ಗೆ ನೀಡಿದ ಪ್ರವಚನಗಳನ್ನು ಸಂಗ್ರಹಿಸಿ ತತ್ವ ಸಂಶೋಧನಾ ಸಂಸತ್ ನಿಂದ ಪ್ರಕಾಶಿಸಲ್ಪಟ್ಟ 2   ಕೃತಿಗಳು ,ಶ್ರೀಪಾದರ ಸಂಸ್ಥೆಗಳ, 60 ವರ್ಷಗಳ ಸಾಧನೆಗಳ ಚಿತ್ರಗಳು ಮತ್ತು ವಿದ್ವಾಂಸರ,ಅಭಿಮಾನಿಗಳ ಲೇಖನವಿರುವ ಸ್ಮರಣಾಸಂಚಿಕೆ ಪುಸ್ತಕಗಳನ್ನು ಬಿಡುಗಡೆ ಮಾಡಿದರು.

ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಸಭಾಸೀನರಾಗಿದ್ದು ಆಶೀರ್ವಚನ ನೀಡಿದರು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ,ಉಡುಪಿಯ ಶಾಸಕರಾದ ರಘುಪತಿ ಭಟ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!