ಮಂಚಿಕೇರಿ ಭೂಮಿಯಲ್ಲಿ ಬಿರುಕು- ಆತಂಕದಲ್ಲಿ ನಾಗರಿಕರು

ಉಡುಪಿ – ಮುಂಗಾರು ಮಳೆ ನಗರಕ್ಕೆ ಪ್ರವೇಶಿಸುವ ಮೊದಲೇ ನಗರದಲ್ಲಿ ಅಲ್ಲಲ್ಲಿ ಸಮಸ್ಯೆಗಳು ತಲೆದೋರುತ್ತಿದೆ , ನಗರದ ಹೊರವಲಯದ ಮಂಚಿಕೇರಿ ಎಂಬಲ್ಲಿ ಭೂಮಿ ಬಿರುಕು ಬಿಟ್ಟಿದ್ದು ನಾಗರಿಕರಲ್ಲಿ ಆತಂಕ ಮನೆ ಮಾಡಿದೆ .

ಮಣಿಪಾಲದ ಮಂಚಿಕೇರಿ ಎಂಬಲ್ಲಿ ಕಳೆದ ೫ ವರ್ಷಗಳ ಹಿಂದೆ ಭೂಮಿ ಬಿರುಕುಗೊಂಡಿತ್ತು ಆ ನಂತರದ ದಿನಗಳಲ್ಲಿ ಆ ಭಾಗದಲ್ಲಿ ನೀರಿನ ಮಟ್ಟ ಏರಿತ್ತು, ಮಾತ್ರವಲ್ಲದೆ ಭೂಮಿಯು ಭೂಕಂಪದ ಸಮಯದಲ್ಲಿ ಆಗುವ ಬಿರುಕಿನಂತೆ ಬಿರುಕುಗೊಂಡಿತ್ತು , ಇಂದು ಈ ಪ್ರದೇಶದಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.

2014 ಘಟನೆ ನಡೆದಾಗ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಬಂದು ಭೇಟಿನೀಡಿ ವರದಿಯನ್ನ ಜಿಲ್ಲಾಡಳಿತಕ್ಕೆ ನೀಡಲಾಗಿತ್ತು . ಈ ವರದಿಯಲ್ಲಿ ಮಲ್ಪೆಯಿಂದ ಉಪ್ಪೂರು, ಮಣಿಪಾಲ,ಪರ್ಕಳ ಪ್ರದೇಶಗಳಲ್ಲಿ ಭೂಮಿಯ ತಳಭಾಗದಲ್ಲಿ ವಾತವರಣದ ಉಷ್ಣತೆಯಿಂದಾಗಿ ಭೂಮಿಯ ತಳಭಾಗದಲ್ಲಿ ಬಿರುಕು ಕಾಣಿಸುತ್ತದೆ ಎಂಬುದಾಗಿ ವರದಿಯಲ್ಲಿತ್ತು  ಎಂಬುದಾಗಿ ಸ್ಥಳೀಯ ನಿವಾಸಿ ಸುಧೀರ್ ನಾಯಕ್ ಉಡುಪಿ ಟೈಮ್ಸ್‌ಗೆ ತಿಳಿಸಿದರು. ಆದಷ್ಟು ಬೇಗ ಸಂಬಂಧಪಟ್ಟವರು ಇತ್ತ ಗಮನಹರಿಸಿ ಮುಂದೆಆಗಬಹುದಾದ ದೊಡ್ಡ ಆನಾಹುತವನ್ನ ತಪ್ಪಸಬೇಕಾಗಿ ಸ್ಥಳೀಯರು ಅಗ್ರಹಿಸಿದ್ದಾರೆ

 ಆದಷ್ಟು ಬೇಗ ಸಂಬಂಧಪಟ್ಟವರು ಇತ್ತ ಗಮನಹರಿಸಿ ಮುಂದೆಆಗಬಹುದಾದ ದೊಡ್ಡ ಆನಾಹುತವನ್ನ ತಪ್ಪಸಬೇಕಾಗಿ ಸ್ಥಳೀಯರು ಅಗ್ರಹಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!