ಅನೈತಿಕ ಸಂಬಂಧ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿ: ಪತ್ನಿಯಿಂದ ಇಬ್ಬರಿಗೂ ಚಪ್ಪಲಿಯಿಂದ ಥಳಿತ!

ಹೈದರಾಬಾದ್: ಮಹಿಳೆಯೊಬ್ಬಳು ಪತಿ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಜೊತೆ ಇದ್ದಾಗ ರೆಡ್ ಹ್ಯಾಂಡಾಗಿ ಹಿಡಿದಿದ್ದು, ಇಬ್ಬರಿಗೂ ಚಪ್ಪಲಿಯಿಂದ ಥಳಿಸಿರುವ ಘಟನೆ ತೆಲಂಗಾಣದ ಕುಕತ್ಪಲ್ಲಿಯಲ್ಲಿ ನಡೆದಿದೆ.

ಲಕ್ಷ್ಮಣ್ ಮತ್ತು ಈತನ ಪ್ರಿಯತಮೆ ಅನುಷಾ ಇಬ್ಬರಿಗೆ ಲಕ್ಷ್ಮಣ್ ಪತ್ನಿ ಸೌಜನ್ಯ ಚಪ್ಪಲಿಯಿಂದ ಹೊಡೆದಿದ್ದಾಳೆ. ತನ್ನ ಅನೈತಿಕ ಸಂಬಂಧಕ್ಕಾಗಿ ಅವನು ಮಕ್ಕಳನ್ನು ನಿರ್ಲಕ್ಷಿಸುತ್ತಿದ್ದನೆಂದು ಪತ್ನಿ ಆರೋಪಿಸಿದ್ದಾಳೆ.

ಏನಿದು ಪ್ರಕರಣ?
ಮಂಚೇರಿಯಲ್ ಜಿಲ್ಲೆಯ ಕೋಥಾ ಕಮ್ಮಗುಡೆಂ ನಿವಾಸಿ ಲಕ್ಷ್ಮಣ್ 2010ರಲ್ಲಿ ಸೌಜನ್ಯಾಳನ್ನು ಮದುವೆಯಾಗಿದ್ದನು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ಕೆಲವು ತಿಂಗಳ ಹಿಂದೆ ಲಕ್ಷ್ಮಣನು ಕರೀಂನಗರದ ವೆಂಕಟ್ರಾಪೇಟೆಯಲ್ಲಿ ಅನುಷಾಳನ್ನು ಪರಿಚಯ ಮಾಡಿಕೊಂಡಿದ್ದಾನೆ. ಸ್ವಲ್ಪ ದಿನದಲ್ಲಿಯೇ ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದಾರೆ.

ಇತ್ತ ಅನುಷಾಳಿಗೂ 2013 ರಲ್ಲಿ ಕೋಲಾ ರವಿಕಾಂತ್ ಜೊತೆಗೆ ವಿವಾಹವಾಗಿ ಒಂದು ಮಗು ಕೂಡ ಇದೆ. ಆದರೆ ಲಕ್ಷ್ಮಣ್‍ನ ಪ್ರೀತಿಯಲ್ಲಿ ಬಿದ್ದ ಅನುಷಾ ತನ್ನ ಪತಿಯನ್ನು ಬಿಟ್ಟು ಕುಕತ್ಪಲ್ಲಿಯ ಪ್ರಗತಿ ನಗರದಲ್ಲಿ ಲಕ್ಷ್ಮಣನೊಂದಿಗೆ ವಾಸಿಸುತ್ತಿದ್ದಳು. ಇತ್ತ ಸೌಜನ್ಯಾಳಿಗೆ ನಿನ್ನ ಪತಿ ಅನುಷಾಳೊಂದಿಗಿನ ಪ್ರೇಮ ಸಂಬಂಧ ಹೊಂದಿದ್ದಾನೆ ಎಂದು ಸಂಬಂಧಿಕರು ಫೋಟೋ ಸಮೇತ ತೋರಿಸಿದ್ದಾರೆ.

ಈ ಆರೋಪಕ್ಕೆ ಲಕ್ಷ್ಮಣ್ ನಾನು ಯಾವುದೇ ಸಂಬಂಧವನ್ನು ಹೊಂದಿಲ್ಲ. ಆ ಫೋಟೋಗಳು ಮದುವೆಗಿಂತ ಮುಂಚಿತವಾಗಿ ತೆಗಿಸಿದ್ದ ಫೋಟೋಗಳು ಎಂದು ಸುಳ್ಳು ಹೇಳಿದ್ದಾನೆ. ಇದೇ ರೀತಿ ಸ್ವಲ್ಪ ದಿನ ಅನುಷಾಳನ್ನು ಭೇಟಿಯಾಗದೇ ಇದ್ದನು.

ಕೆಲವು ದಿನಗಳ ನಂತರ ಮತ್ತೆ ಲಕ್ಷ್ಮಣನು ಅನುಷಾ ಜೊತೆಗಿನ ಸಂಬಂಧವನ್ನು ಮುಂದುವರಿಸಿದ್ದಾನೆ. ಇದರ ಬಗ್ಗೆ ತಿಳಿದ ಪತ್ನಿ ಸೌಜನ್ಯ ಇಂದು ಪತಿಯನ್ನು ಅನುಷಾಳೊಂದಿಗೆ ಇದ್ದಾಗ ರೆಡ್‍ಹ್ಯಾಂಡಾಗಿ ಹಿಡಿದ್ದಾಳೆ. ನಂತರ ಇಬ್ಬರಿಗೂ ಅಲ್ಲೇ ಚಪ್ಪಲಿಯಿಂದ ಥಳಿಸಿದ್ದಾಳೆ

Leave a Reply

Your email address will not be published. Required fields are marked *

error: Content is protected !!