ಮಡಿಕೇರಿಯಲ್ಲಿ ಹುಚ್ಚ ವೆಂಕಟನ ಹುಚ್ಚಾಟ : ಸಾರ್ವಜನಿಕರಿಂದ ಗೂಸ
ಮಡಿಕೇರಿ : ನಟ ಹುಚ್ಚ ವೆಂಕಟನ ಹುಚ್ಚಾಟದಿಂದ ಬೇಸತ್ತ ಸಾರ್ವಜನಿಕರು ಗೂಸಾ ನೀಡಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ ಮಾರುತಿ ಕಾರೊಂದಕ್ಕೆ ಹಾನಿಗೊಳಿಸಿದ ಕಾರಣಕ್ಕಾಗಿ ಅಸಮಾಧಾನಗೊಂಡ ಕೆಲವು ಯುವಕರು ವೆಂಕಟನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದರು.
ನಗರದ ಕೆಎಸ್ಆರ್ಟಿಸಿ ಬಸ್ ಡಿಪೋ ಬಳಿ ಇಂದು ಮಧ್ಯಾಹ್ನ ದಿಢೀರ್ ಆಗಿ ಪ್ರತ್ಯಕ್ಷವಾದ ಹುಚ್ಚ ವೆಂಕಟ್ ದಾರಿ ಬದಿಯಲ್ಲಿ ನಿಂತಿದ್ದರು. ಇವರನ್ನು ಗಮನಿಸಿದ ದಿಲೀಪ್ ಎಂಬ ಯುವಕ ನೀವು ಹುಚ್ಚ ವೆಂಕಟ್ ಅಲ್ವಾ ಎಂದು ಕುತೂಹಲದಿಂದ ಕೇಳಿದ್ದಾರೆ.
ಇದನ್ನೇ ತಪ್ಪಾಯಿತು ಎಂದು ಭಾವಿಸಿದ ವೆಂಕಟ್ ಏನೋ ಗುರಾಯಿಸ್ತೀಯ ಎಂದು ದಿಲೀಪ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತಪ್ಪಿಸಿಕೊಂಡು ಓಡುತ್ತಿದ್ದಂತೆ ಕುಪಿತಗೊಂಡ ವೆಂಕಟ್ ಯುವಕನ ಮಾರುತಿ 800 ಕಾರಿನ ಗಾಜನ್ನು ಪುಡಿ ಮಾಡಿದ್ದಾನೆ.
ಹುಚ್ಚ ವೆಂಕಟನ ಹುಚ್ಚಾಟ ಮಿತಿ ಮೀರುತ್ತಿದ್ದಂತೆ ಎಚ್ಚೆತ್ತುಕೊಂಡ ಸಾರ್ವಜನಿಕರು ಸರಿಯಾಗಿ ಗೂಸ ನೀಡಿದ್ದಾರೆ. ಸ್ಥಳಕ್ಕೆ ಬಂದ ನಗರ ಠಾಣಾ ಪೊಲೀಸರು ವೆಂಕಟನನ್ನು ಠಾಣೆಗೆ ಕರೆದೊಯ್ದು ಬುದ್ದಿ ಹೇಳಿದ್ದಾರೆ.