ಹೆಬ್ರಿ:ಭೀಕರ ಅಪಘಾತ ಅಜ್ಜ ಮೊಮ್ಮಗ ದಾರುಣ ಸಾವು, ಇಬ್ಬರ ಗಂಭೀರ

ಹೆಬ್ರಿ : ಅತೀ ವೇಗವಾಗಿ ಸಾಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಪರಿಣಾಮ ನಡೆದ ಭೀಕರ ಅಪಘಾತದಲ್ಲಿ ಅಜ್ಜ ಹಾಗೂ ಮೊಮ್ಮಗ ದಾರುಣವಾಗಿ ಸಾವನ್ನಪ್ಪಿದ್ದಾರೆ. ನಾಡ್ಪಾಲು ಗ್ರಾಮದ ಸೀತಾನದಿ ನಿವಾಸಿಗಳಾದ ಬುಡಾನ್‌ಖಾನ್ (78) ಹಾಗೂ ಶೇಖ್ ಶಾಹಿಲ್ (24) ಎಂಬವರು ಮೃತಪಟ್ಟವರು.

ಶೇಖ್ ಸಾಹಿಲ್ ಭಾನುವಾರ ಬೆಳಿಗ್ಗೆ 8.30ರ ವೇಳೆಗೆ ತನ್ನ ಇಟಿಯೋಸ್ ಕಾರಿನಲ್ಲಿ ಸಂಬಂಧಿಕರಾದ ಬುಡಾನ್‌ಖಾನ್, ಯೂಸಫ್ ಖಾನ್ ಹಾಗೂ ಖಾದರ್ ಖಾನ್ ಇವರನ್ನು ತನ್ನ ಕಾರಿನಲ್ಲಿ ಹೆಬ್ರಿ ಕಡೆಯಿಂದ ಕಾರನ್ನು ಅತೀವೇಗವಾಗಿ ಚಲಾಯಿಸಿಕೊಂಡು ಸೋಮೇಶ್ವರ ಕಡೆಗೆ ಬರುತ್ತಿದ್ದಾಗ ಹೆಬ್ರಿ ಸಮೀಪದ ಚಂದುಕುಂದು ನಿಸರ್ಗಧಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಎಡಬದಿಯ ನೀರಿನ ತೋಡಿಗೆ ಬಿದ್ದು ಅಲ್ಲಿಂದ ಮುಂದಕ್ಕೆ ಹೋಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬುಡಾನ್ ಖಾನ್ ಸ್ಥಳದಲ್ಲೇ ಮೃತಪಟ್ಟರೆ

ಉಳಿದ ಮೂವರಿಗೆ ಗಂಭೀರ ಗಾಯಗಳಾಗಿವೆ. ಈ ಪೈಕಿ ಚಾಲಕ ಶೇಖ್ ಶಾಹಿಲ್ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 thought on “ಹೆಬ್ರಿ:ಭೀಕರ ಅಪಘಾತ ಅಜ್ಜ ಮೊಮ್ಮಗ ದಾರುಣ ಸಾವು, ಇಬ್ಬರ ಗಂಭೀರ

Leave a Reply to Vijay Deeraj Cancel reply

Your email address will not be published. Required fields are marked *

error: Content is protected !!