ಉಡುಪಿ:ಪ್ರತ್ಯೇಕ ಪ್ರಕರಣ 19 ರ ಯುವತಿ, 35 ವರ್ಷದ ಯುವಕ ನಾಪತ್ತೆ

ಉಡುಪಿ:ಪ್ರತ್ಯೇಕ ಪ್ರಕರಣಗಳಲ್ಲಿ ನಗರದ ಹೊರವಲಯದ ಕುಕ್ಕಿಕಟ್ಟೆ ಬೈಲೂರು ನಿವಾಸಿಗಳಿಬ್ಬರು ನಾಪತ್ತೆಯಾದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಾಲಾಗಿದೆ. ಇಲ್ಲಿನ ರಾಜೇಶ ದೇವಾಡಿಗ (35) ತನ್ನ ಮನೆಯಿಂದ ರವಿವಾರ ಬೆಳಿಗ್ಗೆ 10.30 ಮನೆಯಿಂದ ಹೋದವನು ಮರಳಿ ಬಾರದೆ ಇರುವುದಾಗಿ ಇತನ ಹೆತ್ತವವರು ದೂರು ನೀಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಕುಕ್ಕಿಕಟ್ಟೆ ಬೈಲೂರಿನ ಅಪೂರ್ವ(19) ಎಮ್.ಜಿ.ಎಮ್ ಕಾಲೇಜ್ ಬಳಿ ಇರುವ ಲ್ಯಾಬ್‌ವೊಂದರಲ್ಲಿ ಕೆಲಸಕ್ಕೆಂದು ಶನಿವಾರ ಬೆಳಿಗ್ಗೆ 8.15ಕ್ಕೆ ಹೋದವಳು ಮನೆ ಬಾರದಿರುವುದಾಗಿ ಈಕೆಯ ಹೆತ್ತವರು ದೂರು ನೀಡಿದ್ದಾರೆ.
ನಾಪತ್ತೆಯಾದವರ ಸುಳಿವು ಸಿಕ್ಕಲ್ಲಿ ಉಡುಪಿ ನಗರ ಠಾಣೆ ದೂವಾಣಿ ಸಂಖ್ಯೆ 08202520444 ಮಾಹಿತಿ ನೀಡಬೇಕೆಂದು ಪೊಲೀಸ್ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!