ಗುಂಡಿಬೈಲು : ಚರಂಡಿಯನ್ನು ಒತ್ತುವರಿ ಮಾಡಲು ಹೊರಟ ಪೆಟ್ರೋಲ್ ಪಂಪ್ ಮಾಲಕರು
ಉಡುಪಿ: ಗುಂಡಿಬೈಲು ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿರುವುದನ್ನು ಸಾರ್ವಜನಿಕರೇ ತೆರವುಗೊಳಿಸಿದ ಘಟನೆ ಕಳೆದ ಶನಿವಾರ ನಡೆದಿದೆ. 2 ನೇ ಶನಿವಾರ
ಸರಕಾರಿ ರಜೆ ಇದ್ದ ಕಾರಣ ಇಲ್ಲಿನ ಪೆಟ್ರೋಲ್ ಪಂಪ್ ಮಾಲಕರು ಮಳೆನೀರು ಹರಿದು ಹೋಗುವ ಚರಂಡಿಯನ್ನು ಒತ್ತುವರಿ ಮಾಡಿ ಆವರಣ ಗೋಡೆ ನಿರ್ಮಿಸಲು ಮುಂದಾದಾಗ ಇಲ್ಲಿನ ನಾಗರಿಕರು ಉಡುಪಿ ನಗರ ಸಭಾ ಇಂಜಿನಿಯರ್ ಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದರು.
ರಜಾದಿನವಾದ್ದರಿಂದ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಪೆಟ್ರೋಲ್ ಪಂಪ್ ಮಾಲಕರ ಪರವಾಗಿ ನಿಂತಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ . ಇನ್ನು ಸುಮ್ಮನೆ ಇದ್ದರೆ ಮಳೆ ನೀರು ಹರಿಯುವ ಚರಂಡಿ ಪಂಪ್ ಮಾಲಕರು ಒತ್ತುವರಿ ಮಾಡುತ್ತಾರೆಂದು ಸ್ಥಳೀಯರು ಆವರಣ ಗೋಡೆಯನ್ನು ನೆಲಸಮ ಮಾಡಲಾಯಿತು.
ದೊಡ್ಡಣಗುಡ್ಡೆಯಿಂದ ಗುಂಡಿಬೈ ಲಿನ ಮಳೆ ನೀರು ಹರಿಯುವ ಚರಂಡಿ ಆಗಿದ್ದು ಸುಮಾರು ಒಂದುವರೆ ಸೆಂಟ್ಸ್ ನಷ್ಟು ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲು ಹೊರಟ ಪೆಟ್ರೋಲ್ ಪಂಪ್ ಮಾಲಕರಿಗೆ ಮತ್ತು ಎಲ್ಲೆಂದರಲ್ಲಿ ಅಕ್ರಮ ಕಟ್ಟಡಗಳು ರಾಜಾರೋಷವಾಗಿ ನಗರಸಭೆ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣವಾಗುತ್ತಿರುವ ನಗರಸಭೆಯ ಇಂಜಿನಿಯರುಗಳು ಆಯುಕ್ತರುಗಳು ಇನ್ನಾದರು ಎಚ್ಚೆತ್ತು ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.