ಅಲೆವೂರು ಗ್ರಾಮ ಪಂಚಾಯತ್ ಶಿಲಾನ್ಯಾಸ ಹಾಗೂ ಹಕ್ಕುಪತ್ರ ವಿತರಣೆ
ಉಡುಪಿ – ಅಲೆವೂರು ಗ್ರಾಮ ಪಂಚಾಯತ್ ನಲ್ಲಿ ಸುಮಾರು 45 ಲಕ್ಷ ದಷ್ಟು ಮೊತ್ತದ ನೂತನ ಕಟ್ಟಡಕ್ಕೆ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಶಿಲಾನ್ಯಾಸಗೈದರು. ಬಳಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲೆವೂರಿನ ಅಭಿವ್ರಧ್ಧಿಗೆ ನಾನು ಸದಾ ಬಧ್ಧನಾಗಿದ್ದು ಈಗಾಗಲೇ ಸುಮಾರು ೧೫೦ ಕೋಟಿಗೂ ಹೆಚ್ಚು ಅನುದಾನ ಅಲೆವೂರಿಗೆ ನೀಡಲು ಪ್ರಸ್ತಾವನೆ ನೀಡಿದ್ದು ಸದ್ಯದಲ್ಲಿಯೇ ಮಂಜೂರಾಗಬಹುದೆಂದು ಭರವಸೆ ನೀಡಿದರು. ಸುಮಾರು ೬೦ ರಷ್ಟು ಜನ ಫಲಾನುಭವಿಗಳಿಗೆ ಹಕ್ಕು ಪತ್ರ ಹಾಗೂ ಇತರ ಸೌಲಭ್ಯ ವಿತರಿಸಿ ಶುಭಹಾರೈಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮಾತನಾಡಿ ಮಹಾತ್ಮ ಗಾಂಧಿಯವರ ಕನಸಾದ ಸ್ವಚ್ಛ ಭಾರತ್ ಕಲ್ಪನೆಗೆ ಸಹಕಾರ ನೀಡಿ ಪ್ಲಾಸ್ಟಿಕ್ ಮುಕ್ತ ಗ್ರಾಮಕ್ಕೆ ಕರೆ ನೀಡಿದರು. ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷರು ಮಾತನಾಡಿ ಕಳೆದ ನಾಲ್ಕುವರೆ ವರ್ಷದಲ್ಲಿ ಪಂಚಾಯತ್ ನಲ್ಲಿ ಆದ ಅಭಿವೃದ್ಧಿ ಗಳನ್ನು ವಿವರಿಸಿ ಮುಂದೆಯೂ ಜಿಲ್ಲಾ ಪಂಚಾಯತ್ ಅಧ್ಯಕ್ಷರ, ತಾಲೂಕು ಪಂಚಾಯತ್ ಸದಸ್ಯರ ಹಾಗೂ ಶಾಸಕರ ಸಹಕಾರ ಕೋರಿದರು.
ಬಳಿಕ ಸಾರ್ವಜನಿಕರಿಗೆ ಪ್ಲಾಸ್ಟಿಕ್ ನಿಷೇಧ ಹಾಗೂ ಸ್ವಚ್ಚತೆಯ ಬಗ್ಗೆ ಪ್ರಮಾಣವಚನ ಬೋಧಿಸಿ ಬಟ್ಟೆ ಚೀಲ ವಿತರಣೆ ಮಾಡಲಾಯಿತು. ಸ್ವಚ್ಚತೆಗೆ ಶ್ರಮದಾನ ಮುಖೇನ ಸಹಕರಿಸಿದ ಅಲೆವೂರಿನ ಎಲ್ಲ ಸಂಘಸಂಸ್ಥೆಗಳಿಗೆ ಸ್ಮರಣಿಕೆ ನೀಡಲಾಯಿತು. ತಾಲೂಕು ಪಂಚಾಯತ್ ಅಧ್ಯಕ್ಷರಾದ ನೀತಾ ಗುರುರಾಜ್ ಶುಭಹಾರೈಸಿದರು. ತಾಲೂಕು ಪಂಚಾಯತ್ ಸದಸ್ಯರಾದ ಬೇಬಿರಾಜೇಶ್, ಪಂಚಾಯತ್ ಉಪಾಧ್ಯಕ್ಷ ರಾದ ಜಯಲಕ್ಷ್ಮಿ ಹಂಸರಾಜ್, ಪಂಚಾಯತ್ ನ ಹಿರಿಯ ಸದಸ್ಯರಾದ ಹರೀಶ್ ಸೇರಿಗಾರ್, ಸುರೇಶ್ ಬಂಗೇರ, ಶಶಿಕಲಾ ಶೆಟ್ಟಿ, ಪ್ರಶಾಂತ ಆಚಾರ್ಯ, ಸೌಮ್ಯ ನಾಯಕ್ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ಅಶೋಕ್ ಕುಮಾರ್ , ಪಡು ಅಲೆವೂರು ದೇವಸ್ಥಾನದ ಲಕ್ಷ್ಮೀ ರಮಣ ಉಪಾಧ್ಯ, ಮತ್ತಿತರು ಉಪಸ್ಥಿತರಿದ್ದರು, ಗ್ರಾಮ ಕರಣಿಕರಾದ ಕರಿಯಮ್ಮ, ಇಲಾಖಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ್ ಮಿಷನ್ ನ ಅಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತ್ ಸದಸ್ಯರಾದ ಶೇಖರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರೆ ಪಿಡಿಒ ದಯಾನಂದ ಬೆಣ್ಣೂರು ಪ್ರಮಾಣವಚನ ಬೋಧಿಸಿದರು. ಪಂಚಾಯತ್ ಸದಸ್ಯರಾದ ಶೇಖರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರೆ ಪಿಡಿಒ ದಯಾನಂದ ಬೆಣ್ಣೂರು ಸ್ವಚ್ಚತೆಯ ಬಗ್ಗೆ ಪ್ರಮಾಣವಚನ ಬೋಧಿಸಿದರು.