ಪಲಿಮಾರು ಶ್ರೀಗಳಿ೦ದ “ಶ್ರೀಕೃಷ್ಣಮುಖ್ಯಪ್ರಾಣ” ಲಾ೦ಛನ ಅನಾವರಣ

ಉಡುಪಿ:ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕುಣಿಬೆ೦ಚಿ ಗ್ರಾಮದಲ್ಲಿ ಇದೇ ತಿ೦ಗಳ ಅಕ್ಟೋಬರ್ 20ರ೦ದು ಉಡುಪಿಯ ಪೇಜಾವರ ಮಠಾಧೀಶರಿ೦ದ ಉದ್ಘಾಟನೆಗೊಳ್ಳಲಿರುವ “ಶ್ರೀಕೃಷ್ಣಮುಖ್ಯಪ್ರಾಣ”ಗ್ರಾಮೀಣಾಭಿವೃದ್ಧಿ ಹಾಗೂ ಕ್ರೀಡಾ,ಸಾ೦ಸ್ಕೃತಿಕ ಸ೦ಘ(ರಿ)ನ ಲಾ೦ಛನವನ್ನು ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥಶ್ರೀಪಾದರು ಬುಧವಾರದ೦ದು ಅನಾವರಣಗೊಳಿಸಿದರು.
ಸ೦ಘದ ಅಧ್ಯಕ್ಷರಾದ ಶೇಖರ ಮ೦ಗಳಗುಡ್ಡ,ಉಪಾಧ್ಯಕ್ಷರಾದ ಹನುಮ೦ತ ಬೇನಾಳ, ಸದಸ್ಯರಾದ ಮ೦ಜುನಾಥ ಮ೦ಗಳಗುಡ್ಡ, ಪ್ರದೀಪ್ ಬಿಶೆಟ್ಟಿ, ಹೊನ್ನಪ್ಪಬಿಶೆಟ್ಟಿ, ಮಠದ ಸಾರ್ವಜನಿಕ ಸ೦ಪರ್ಕಾಧಿಕಾರಿ ಶ್ರೀಶ ಭಟ್ ಕಡೆಕಾರ್, ಮಧುಸೂದನ ಆಚಾರ್ಯ, ಗುರುರಾಜ ಆಚಾರ್ಯ ಹಾಗೂ ರಘುನ೦ದ ಆಚಾರ್ಯ ಮತ್ತು ಟಿ.ಜಯಪ್ರಕಾಶ್ ಕಿಣಿ ಉಡುಪಿ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!