ಸ್ವಚ್ಛ ಉಡುಪಿ-ಪ್ಲಾಸ್ಟಿಕ್ ಮುಕ್ತ ಉಡುಪಿ: ರಘುಪತಿ ಭಟ್

ಉಡುಪಿ : ಮಾನಸಿಕ , ದೈಹಿಕ ಮತ್ತುಆಧ್ಯಾತ್ಮಿಕ ಬೆಳವಣಿಗೆಗೆ ಪರಿಸರ ಸ್ವಚ್ಚತೆಯೇ ಕಾರಣ ಎಂಬ ಭಾವನೆ ಹೊಂದಿದ್ದ, ಮಹಾತ್ಮಾ ಗಾಂಧೀಜಿಯವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅದರಂತೆ ಉಡುಪಿ ಜಿಲ್ಲೆಯನ್ನು ಸ್ವಚ್ಚಗೊಳಿಸುವ ನಿಟ್ಟಿನಲ್ಲಿ, ಸ್ವಚ್ಛ ಉಡುಪಿ – ಪ್ಲಾಸ್ಟಿಕ್ ಮುಕ್ತ ಉಡುಪಿ ಎಂಬ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡುವ
ಮೂಲಕ, ಗಾಂಧೀಜಿ ಅವರ 150 ನೆ ಜನ್ಮ ಜಯಂತಿಯನ್ನು ಅರ್ಥಪೂರ್ಣವಾಗಿ
ಆಚರಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.


ಅವರು ಬುಧವಾರ ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ , ಜಿಲ್ಲಾಡಳಿತ,
ಜಿಲ್ಲಾ ಪಂಚಾಯತ್, ನಗರಸಭೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ
ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150 ನೇ ಜನ್ಮ ದಿನಾಚರಣೆ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ಅವರ ಜನ್ಮ ದಿನಾಚರಣೆಯ ಅಂಗವಾಗಿ 5 ವರ್ಷಗಳ ಹಿಂದೆಯೇ ಸ್ವಚ್ಛ ಭಾರತ ಆಂದೋಲನ ರೂಪ ಗೊಂಡಿದ್ದು, ಸ್ವಚ್ಛತೆ ಇದ್ದಲ್ಲಿ ಆರೋಗ್ಯ ಇರುತ್ತದೆ ಎಂಬ ಗಾಂಧೀಜಿ ಅವರ ಆಶಯದಂತೆ , ನಾಗರೀಕರು ಸ್ವಚ್ಛತೆಯ ಬಗ್ಗೆ ಜಾಗೃತರಾಗಬೇಕು , ಪ್ಲಾಸ್ಟಿಕ್ ಬಳಕೆಯನ್ನು ಬಿಟ್ಟು ಬಟ್ಟೆ ಯ ಚೀಲಗಳನ್ನು ಬಳಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಉಡುಪಿ ನಿರ್ಮಾಣಕ್ಕೆ ಸಹಕರಿಸಬೇಕು, ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ಅರಿಯಬೇಕಿದ್ದರೆ ಕರ್ವಾಲಿ ನಲ್ಲಿ ನಿರ್ಮಾಣಗೊಂಡಿರುವ ತ್ಯಾಜ್ಯ ವಿಲೇವಾರಿ ಘಟಕ್ಕೆ ಭೇಟಿ ನೀಡಿದರೆ ಸಮಸ್ಯೆಯ ಗಂಭೀರತೆ ಅರಿವಾಗುತ್ತದೆ ಎಂದು ರಘುಪತಿ ಭಟ್ ಹೇಳಿದರು.ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಹೊರತಂದ ಪಾಪು ಬಾಪು ಕಿರುಪುಸ್ತಕವನ್ನು ಶಾಸಕ ರಘುಪತಿ ಭಟ್
ಬಿಡುಗಡೆಗೊಳಿಸಿದರು.

ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಗಾಂಧೀಜಿ ಅವರ ತತ್ವಗಳನ್ನು ಗಾಳಿಗೆ ತೂರಿರುವುದು ಖೇದಕರ, ವಿದ್ಯಾರ್ಥಿ
ದೆಸೆಯಲ್ಲಿಯೇ ಗಾಂಧೀಜಿಯವರ ಆದರ್ಶಗಳ ಪಾಲನೆ ಮಾಡಬೇಕು, ಸ್ವಚ್ಛ
ಮೇವ ಪರಿಕಲ್ಪನೆಯಡಿಯಲ್ಲಿ ರಾಜ್ಯದಲ್ಲಿ 1000 ಗ್ರಾಮಗಳಲ್ಲಿ ಘನ ದ್ರವ
ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದ್ದು, ಸ್ವಚ್ಛತೆಯ ಮಹತ್ವ
ಮನೆಯಿಂದಲೇ ಆರಂಭವಾಗಬೇಕು , ಯುವ ಜನಾಂಗ ಗಾಂಧೀಜಿ ಅವರ
ತತ್ವ ಆದರ್ಶಗಳನ್ನು ಅಳವಡಿಸಕೊಳ್ಳಬೇಕು ಎಂದರು.


ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಹಾಗೂ ಗಾಂಧೀ ಚಿಂತಕ
ದಯಾನಂದ ಶೆಟ್ಟಿ ದೆಂದೂರು ಮಾತನಾಡಿ, ಅಹಿಂಸೆಯಿಂದ ಸ್ವಾತಂತ್ರ್ಯ
ದೊರಕಿಸಿಕೊಟ್ಟ ಗಾಂಧೀಜಿ ಅವರು, ಅಸ್ಪøಶ್ಯತೆಯನ್ನು ವಿರೋಧಿಸುತ್ತಿದ್ದು,
ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎನ್ನುವ ಚಿಂತನೆ ಹೊಂದಿದ್ದರು, ಗಾಂಧೀಜಿ
ಅವರ ಸಮಯ ಪರಿಪಾಲನೆಯನ್ನು ಬ್ರಿಟೀಷರು ಸಹ ಮೆಚ್ಚಿದ್ದರು, ಬುದ್ದ,
ಚಾಣಕ್ಯ , ನಾರಾಯಣಗುರುಗಳ ಚಿಂತನೆಗಳಿಂದ ಪ್ರಭಾವಿತರಾಗಿದ್ದರು.
ರಾಜಕೀಯ ವ್ಯಕ್ತಿಗಳು ಹೃದಯವಂತರಾಗಿರಬೇಕು ಎಂದಿದ್ದ ಗಾಂಧೀಜಿ
ಮಾತು ಮತ್ತು ಕೃತಿಗೆ ಸಾಮ್ಯವಿರಬೇಕು ಎಂದಿದ್ದರು, ಇಂದಿನ ಯುವಜನತೆ
ಗಾಂಧೀಜಿ ಅವರ ತತ್ವ ಆದರ್ಶಗಳನ್ನು ಪರಿಪಾಲಿಸಬೇಕು ಎಂದು ಹೇಳಿದರು.


ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ತಾಲೂಕು ಪಂಚಾಯತ್
ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ನಗರಸಭಾ ಸದಸ್ಯರಾದ ರಶ್ಮಿ
ಚಿತ್ತರಂಜನ್, ಬಾಲಕೃಷ್ಣ ಶೆಟ್ಟಿ, ಮಾನಸಿ ಪೈ , ಜಿ.ಪಂ. ಮುಖ್ಯ ಕಾರ್ಯ
ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಎಎಸ್ಪಿ ಕುಮಾರ ಚಂದ್ರ, ಪೌರಾಯುಕ್ತ
ಆನಂದ್ ಕಲ್ಲೋಳಿಕರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ
ನಿರ್ದೇಶಕ ಕುಮಾರ್ ಬೆಕ್ಕೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ಇಲಾಖೆಯ ಶಿವಕುಮಾರ್ ಉಪಸ್ಥಿತರಿದ್ದರು.

ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿ , ನಿರೂಪಿಸಿದರು, ನಗರಸಭೆ
ಧನಂಜಯ್ ವಂದಿಸಿದರು. ಕಾರ್ಯಕ್ರಮದ ನಂತರ , ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಾ ಸಂಘಟನೆಗಳಿಂದ ಬೃಹತ್ ಸ್ವಚ್ಛತಾ ಕಾಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!