ಉದ್ಯಾವರದ “ಜಯಲಕ್ಷ್ಮೀ ಸಿಲ್ಕ್”ಗೆ 50 ರ ಸಂಭ್ರಮ

ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳಲ್ಲಿ ಒಂದು ಉಡುಪಿ ಜಿಲ್ಲೆ. ಬಹಳಷ್ಟು ಪ್ರವಾಸಿ ತಾಣಗಳು ಉಡುಪಿಯ ಮೆರಗನ್ನು ವಿಶ್ವಕ್ಕೆ ಪರಿಚಯಿಸುತ್ತಿದೆ. ಉಡುಪಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಪಕ್ಷಗಳು, ರಾಜಕೀಯ ನಾಯಕರು, ಸಂಘಟನೆಗಳು ತಮ್ಮ ಸಹಕಾರವನ್ನು ನೀಡುತ್ತಿದೆ. ಇದಕ್ಕಿಂತಲೂ ಹೆಚ್ಚು, ಜಿಲ್ಲೆ ಅಭಿವೃದ್ಧಿ ಆಗಬೇಕಾದರೆ ಉದ್ಯಮಿಗಳ ಪಾಲು ಬಹಳಷ್ಟಿರುತ್ತದೆ. ಈ ಉದ್ಯಮಿಗಳಿಂದ ಉದ್ಯಮ ರಂಗ ಬೆಳೆಯುವುದಲ್ಲದೆ, ಜಿಲ್ಲೆಯ ಅಭಿವೃದ್ಧಿಯು ಕೂಡ ಬೆಳೆಯುತ್ತದೆ. ಉದ್ಯಮಿಗಳು ಬೆಳೆಯುವುದರಿಂದ ಬಹಳಷ್ಟು ಮಂದಿಗೆ ಉದ್ಯೋಗಾವಕಾಶ ಸಿಗುತ್ತದೆ. ಬಹಳಷ್ಟು ಮಂದಿಗೆ ಉದ್ಯೋಗಾವಕಾಶ ಸಿಕ್ಕಿದ ಊರುಗಳಲ್ಲಿ ಒಂದು ಊರು ಉದ್ಯಾವರ.

ಉಡುಪಿ ಜಿಲ್ಲೆಯ, ಉಡುಪಿ ತಾಲೂಕಿನ, ಕಾಪು ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಒಂದು ಉದ್ಯಾವರ. ಇಲ್ಲಿಯ ಜನ ಶಾಂತಿಪ್ರಿಯರು. ಸೌಹಾರ್ದತೆಯ ತವರೂರು ಎಂದರೂ ತಪ್ಪಾಗಲಾರದು. ಜಾತಿ ಮತ ಭೇದವಿಲ್ಲದೆ ಸೌಹಾರ್ದತೆಯಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರೀತಿಯಿಂದ ಭಾಗವಹಿಸುತ್ತಾರೆ. ಎಲ್ಲ ಕ್ಷೇತ್ರಗಳಲ್ಲಿ ಪ್ರತಿಭೆಗಳಿಗೆ ಏನು ಕಮ್ಮಿ ಇಲ್ಲದ ಈ ಗ್ರಾಮ ಉದ್ಯಾವರ. ಉದ್ಯಾವರದಲ್ಲಿ ಇದ್ದಷ್ಟು ಸಂಘ ಸಂಸ್ಥೆಗಳು ಬೇರೆಲ್ಲೂ ಇರಲಿಕ್ಕಿಲ್ಲ.

ಬಹಳಷ್ಟು ಜನರಿಗೆ ಉದ್ಯೋಗ ಅವಕಾಶ ನೀಡಿದಂತಹ ಸಂಸ್ಥೆ ಅದುವೇ ಜಯಲಕ್ಷ್ಮಿ ಸಿಲ್ಕ್ ಅಂಡ್ ಟೆಕ್ಸ್‌ಟೈಲ್ಸ್ ಜವಳಿ ಮಳಿಗೆ. ಉದ್ಯಾವರದ ಹೃದಯ ಭಾಗದಲ್ಲಿ ಐವತ್ತು ವರ್ಷಗಳ ಹಿಂದೆ ಉದ್ಯಾವರದ ಪರಿಸರದವರೇ ಆದ ದಿ.ಎನ್ ವಾಸುದೇವ ಹೆಗ್ಡೆಯವರು ಜವಳಿ ಮಳಿಗೆಯನ್ನು ಜಯಲಕ್ಷ್ಮಿ ಸೇಲ್ಸ್ ಎಂಬ ಹೆಸರಿನೊಂದಿಗೆ ಆರಂಭಿಸಿದರು. ಅಂದಹಾಗೆ ಆ ಕಾಲದಲ್ಲಿ ಹೆಚ್ಚು ಕಮ್ಮಿ5 ರಿಂದ 10 ಜನರು ಮಾತ್ರ ಉದ್ಯೋಗದಲ್ಲಿದ್ದರೇನೊ. ಆದ್ರೆ ಈಗ ಈ ಜಯಲಕ್ಷ್ಮಿಗೆ ಐವತ್ತರ ಸಂಭ್ರಮ. ಸಣ್ಣ ಉದ್ಯಮ ಈಗ ಬೃಹದಾಕಾರವಾಗಿ ಬೆಳೆದಿದೆ. ಇದಕ್ಕೆಲ್ಲ ಜನರ ಪ್ರೀತಿ ವಿಶ್ವಾಸ ಕಾರಣ ಎಂದರೆ ತಪ್ಪಾಗಲಾರದು.

ಉದ್ಯಮದಲ್ಲಿ ಗ್ರಾಹಕರೊಂದಿಗೆ ವಿಶ್ವಾಸ ಪ್ರೀತಿ ಸತ್ಯ ನಿಷ್ಠೆ ಪ್ರಾಮಾಣಿಕತೆಯಿದ್ದರೆ ಯಾವುದೇ ಉದ್ಯಮ ಬೆಳೆಯುತ್ತದೆ ಎಂಬುದಕ್ಕೆ ಜಯಲಕ್ಷ್ಮಿಯೆ ಕಾರಣ. ದಿ.ಎನ್ ವಾಸುದೇವ ಹೆಗ್ಡೆಯವರ ಪುತ್ರರಿಬ್ಬರು, ತಂದೆಯ ನಿಧನದ ಬಳಿಕ ಉದ್ಯಮವನ್ನು ಬಿಟ್ಟು ಬಿಡದೆ, ಮುಂದುವರಿಸಿಕೊಂಡು, ಗ್ರಾಹಕರಿಗೆ ಯೋಗ್ಯವಾದಂತಹ ಮತ್ತು ಇಷ್ಟವಾಗುವ೦ತಹ ಉಡುಪುಗಳ ವ್ಯವಸ್ಥೆಯನ್ನು, ಗ್ರಾಹಕರಿಗೆ ಹೊಂದುವ ಬೆಲೆಯಲ್ಲಿ ನೀಡುವುದರೊಂದಿಗೆ, ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದಾರೆ.

ದಿವಂಗತ ಎನ್ ವಾಸುದೇವ ಹೆಗ್ಡೆಯವರ ಶಾಂತ ಸ್ವಭಾವದ ಪುತ್ರರಾದ ರವೀಂದ್ರ ಮತ್ತು ವೀರೇಂದ್ರ. ಉದ್ಯಮದಲ್ಲಿ ಯಶಸ್ವಿ ಉದ್ಯಮಿಗಳಾದರೂ ತಮ್ಮ ತಂದೆಯವರು ಹಾಕಿಕೊಟ್ಟಂತಹ ಭದ್ರ ಬುನಾದಿಯನ್ನು, ಈಗ ಧೈರ್ಯದಿಂದ ಮುಂದುವರಿಸಿಕೊಂಡು ತಮ್ಮ ಸಂತೃಪ್ತ ಕುಟುಂಬದೊಂದಿಗೆ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ. ತಾವಾಯಿತು ತಮ್ಮ ಕೆಲಸವಾಯಿತು ಎಂಬ ರೀತಿಯಲ್ಲಿ ಜೀವನವನ್ನು ಸಾಗಿಸುತ್ತಿರುವ ರವೀಂದ್ರ ಮತ್ತು ವೀರೇಂದ್ರ ಸಹೋದರರು, ಉದ್ಯಾವರ ಮತ್ತು ಆಸುಪಾಸಿನ ಹಲವಾರು ಸಂಘ ಸಂಸ್ಥೆಗಳ ಪ್ರಧಾನ ಪೋಷಕರು.

ಈ ಇಬ್ಬರು ಸಹೋದರರಿಗೆ ಪ್ರಚಾರದ ಆಸೆನೆ ಇಲ್ಲ. ಅಪರೂಪಕ್ಕೊಮ್ಮೆ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಕಾಣಸಿಗುತ್ತಾರೆ. ಸಾದಾ ಸಿಂಪಲ್ ಮಾಲಕರಾಗಿರುವ ಇವರು, ತಮ್ಮ ಜವಳಿ ಮಳಿಗೆಯ ಕಚೇರಿಯಲ್ಲಿ ಕುಳಿತುಕೊಳ್ಳುವುದಕ್ಕಿಂತಲೂ ಹೆಚ್ಚಾಗಿ, ಸಿಬ್ಬಂದಿಗಳೊಂದಿಗೆ ಗ್ರಾಹಕರ ಸೇವೆಯಲ್ಲಿ ಮಗ್ನರಾಗಿರುತ್ತಾರೆ. ಇವರೇ ಮಾಲಕರು ಎಂದು ಗ್ರಾಹಕರಿಗೆ ಗೊತ್ತಾಗುವುದೇ ಇಲ್ಲ.

ಈ ಇಬ್ಬರು ಯಶಸ್ವಿ ಸಹೋದರ ಉದ್ಯಮಿಗಳ ಹಿಂದೆ ಇಲ್ಲಿಯ ಸಿಬ್ಬಂದಿಗಳ ಪಾಲು ಕೂಡ ಇದೆ. ಜಯಲಕ್ಷ್ಮಿ ಜವಳಿ ಮಳಿಗೆ ಬೆಳೆಯುತ್ತಿರುವುದಲ್ಲದೆ, ನೂರಾರು ಯುವಕರಿಗೆ ಉದ್ಯಮವನ್ನು ಕೂಡ ಕೊಟ್ಟಿದೆ. ಉದ್ಯಾವರ ಕಾಪು ಉಡುಪಿ ಆಸುಪಾಸಿನವರು ಮಾತ್ರವಲ್ಲದೆ, ದೂರದ ಹೊನ್ನಾವರ ಅಂಕೋಲಾ ಭಾಗದ ಜನರು ಉದ್ಯೋಗದಲ್ಲಿದ್ದಾರೆ.

ಜಯಲಕ್ಷ್ಮೀ ಸಿಲ್ಕ್ ಅಂಡ್ ಟೆಕ್ಸ್ ಟೈಲ್‌ಗೆ ದೂರದ ಭಟ್ಕಳ ಮಂಗಳೂರು ಸಹಿತ ಆಸುಪಾಸಿನ ಹಲವಾರು ಜಿಲ್ಲೆಗಳ ಬಹಳಷ್ಟು ಗ್ರಾಹಕರು ಆಗಮಿಸಿ ತಮಗೆ ಇಷ್ಟವಾದ ಉಡುಪುಗಳನ್ನು ಖರೀದಿಸುತ್ತಾರೆ. ಇಲ್ಲಿಗೆ ಬಂದ ಗ್ರಾಹಕರು ತಮಗೆ ಇಷ್ಟವಾದ ಉಡುಪುಗಳು ಸಿಗದೆ ಹಿಂದೆ ಹೋಗುವುದು ಬಹಳಷ್ಟು ಕಡಿಮೆ ಅಷ್ಟೊಂದು ವೆರೈಟಿ ಕಲೆಕ್ಷನ್ ಇಲ್ಲಿದೆ. ಜಯಲಕ್ಷ್ಮಿಯ ಹೆಸರು ಯಾವ ರೀತಿ ಹೆಸರುವಾಸಿಯಾಗಿದೆ ಎಂದರೆ, ಬಸ್ಸಿನ ಕಂಡಕ್ಟರ್‌ಗಳು ಕೂಡ ಉದ್ಯಾವರ ಎಂದು ಹೇಳದೆ, ಜಯಲಕ್ಷ್ಮಿ ಸ್ಟಾಪ್ ಎಂದೇ ಜನರನ್ನು ಕರೆಯುತ್ತಿದ್ದಾರೆ.

ಯಾವುದೇ ರೀತಿಯ ಶುಭ ಕಾರ್ಯಕ್ರಮಗಳಿಗೆ ಮತ್ತು ಮತ್ತು ಯಾವುದೇ ರೀತಿಯ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಬೇಕಾಗುವಂತಹ ಎಲ್ಲಾ ಉಡುಪುಗಳು ಇಲ್ಲಿ ಲಭ್ಯವಿವೆ*.

ಜಯಲಕ್ಷ್ಮೀ ಸಿಲ್ಕ್ ಗೆ ಈಗ ಐವತ್ತರ ಸಂಭ್ರಮ. ಐವತ್ತು ವರ್ಷಗಳ ಹಿಂದೆ ದಿ. ಎನ್ ವಾಸುದೇವ ಹೆಗ್ಡೆಯವರು ಆರಂಭಿಸಿದಂತ ಉದ್ಯಮ ಇಂದು ಬೃಹದಾಕಾರದ ಮರವಾಗಿ ಬೆಳೆದಿದೆ. ಆದರೆ ಉದ್ಯಮವನ್ನು ಸ್ಥಾಪಿಸಿದ ಹಿರಿಯರು ಇಲ್ಲದೇ ಇದ್ದರೂ ಕೂಡ, ಜಯಲಕ್ಷ್ಮಿ ಎಂಬ ಹೆಸರಿನೊಂದಿಗೆ ಉದ್ಯಾವರ ಈಗ ವಿಶ್ವಕ್ಕೇ ಪರಿಚಯವಾಗುತ್ತಿದೆ. ಇದಕ್ಕೆಲ್ಲ ಕಾರಣ ದಿ. ಎನ್ ವಾಸುದೇವ ಹೆಗಡೆ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಾಗುತ್ತದೆ.

ಮುಂದುವರಿಸಿಕೊಂಡು ಹೋದ ಸಹೋದರರಾದ ರವೀಂದ್ರ, ವೀರೇಂದ್ರ ಅವರ ಯಶಸ್ವಿನ ಗುಟ್ಟಿನೊಂದಿಗೆ ಇವರ ಸಾಹಸದ ಗುಣವನ್ನು ಮೆಚ್ಚ ಬೇಕಾಗುತ್ತದೆ. ಐವತ್ತುರ ಸಂಭ್ರಮದಲ್ಲಿರುವ ‘ಜಯಲಕ್ಷ್ಮಿ ಸಿಲ್ಕ್ಸ್’ ಈಗ ಗ್ರಾಹಕರಿಗೆ, ಮಳೆಗಾಲದ ಆಫರ್ ನೀಡಲು ಸಿದ್ಧವಾಗಿದೆ. ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಜಯಲಕ್ಷ್ಮಿ ಸಿಲ್ಕ್ಸ್ ತನ್ನ ಗ್ರಾಹಕರಿಗೆ , ತನ್ನ ಸಂಭ್ರಮದ ಕ್ಷಣದ, ಕಡಿಮೆ ಬೆಲೆಯ ಉತ್ತಮ ಗುಣಮಟ್ಟದ ಉಡುಪುಗಳನ್ನು ‘ರಿಡಕ್ಷನ್ ಸೇಲ್’ ಮೂಲಕವಾಗಿ ನೀಡಲು ಸಿದ್ಧಗೊಂಡಿದೆ. ಜೂನ್ ೧೭ರ ಸೋಮವಾರದಿಂದ ಈ ಆಫರ್ ಕೆಲವು ಸಮಯದವರೆಗೆ ಚಾಲ್ತಿಯಲ್ಲಿರಲಿದೆ. ಇದೆಲ್ಲವೂ ಗ್ರಾಹಕರು ನೀಡಿದ ಪ್ರೀತಿಗಾಗಿ.

ಏನೇ ಇರಲಿ, ಉದ್ಯಾವರ ಎಂಬ ಪುಟ್ಟ ಗ್ರಾಮವನ್ನು ವಿಶ್ವಕ್ಕೆ ಪರಿಚಯಿಸುವುದರೊಂದಿಗೆ, ಉದ್ಯಾವರದ ಅಭಿವೃದ್ಧಿಯಲ್ಲಿ, ಸಂಘ ಸಂಸ್ಥೆಗಳ ಸಂಘಟನೆಗೆ ಕಾರಣಕರ್ತರಾಗಿರುವ ಜಯಲಕ್ಷ್ಮಿ ಸಿಲ್ಕ್ಸ್, ಮತ್ತೆ ಜನರ ವಿಶ್ವಾಸ ಉಳಿಸಿಕೊಳ್ಳಲಿ,ಮುಂದೇ ಕೂಡ ಸಾವಿರಾರು ಜನರಿಗೆ ಉದ್ಯೋಗದ ಅವಕಾಶ ಸಿಗಲಿ, ಮತ್ತು ಸುವರ್ಣ ಮಹೋತ್ಸವ ಯಶಸ್ವಿಯಾಗಿ ಆಗಲಿ ಎನ್ನುವುದೇ ನಮ್ಮ ಹಾರೈಕೆ

ಸ್ಟೀವನ್ ಕುಲಾಸೊ ಉದ್ಯಾವರ

Leave a Reply

Your email address will not be published. Required fields are marked *

error: Content is protected !!