ತಾಸೆ ಸದ್ದಿಗೆ ಮೈಮರೆತು ಹುಚ್ಚೆದ್ದು ಹುಲಿ ವೇಷ ಕುಣಿದ ಯುವತಿಯರು

ಉಡುಪಿ : ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದಾಕ್ಷಣ ನೆನಪಾಗುವುದೇ ಹುಲಿವೇಷ ಕುಣಿತ .ಈ ಬಾರಿ ಹುಲಿವೇಷಗಳ ತಂಡಗಳ ಸಂಖ್ಯೆ ಕಡಿಮೆ ಇದ್ದರೂ ಹುಲಿವೇಷ ಕುಣಿಯಲು ಬಾರಿಸುವ  ತಾಸೆ ಶಬ್ದಕ್ಕೆ  ಮೈ ರೋಮಾಂಚನಗೊಂಡು ತಾವು ಸ್ಟೆಪ್ ಹಾಕುವ ಸಂಖ್ಯೆಯನ್ನು ಕಡಿಮೆ ಇರಲಿಲ್ಲ.

ಈ ಬಾರಿ ಇದಕ್ಕೆ ಮಹಿಳೆಯರು ಸಾಥ್ ನೀಡಿರುವುದು ನೋಡುಗರಿಗೆ ಹಬ್ಬದ ವಾತಾವರಣವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಯುವಕರಿಗಿಂತತಾವೇನು ಕಡಿಮೆ ಇಲ್ಲ ಎನ್ನುವಂತೆ ಅವರ ಆವೇಶಭರಿತ ನೃತ್ಯವು ನೋಡುಗರ ಕಣ್ಮನ ಸೆಳೆಯುತ್ತಿತ್ತು.

ನಿನ್ನೆಯಷ್ಟೇ ಚಿತ್ರನಟ ರಕ್ಷಿತ್ ಶೆಟ್ಟಿ  ಕೊರಂಗ್ರಪಾಡಿ  ಹಾಗೂ ತನ್ನ ಮನೆಯಲ್ಲಿ ಬಂದ ಹುಲಿವೇಷ ತಂಡಗಳು ಜೊತೆ ಹೆಜ್ಜೆ ಹಾಕಿದ್ದು ಇದರ ವಿಡಿಯೋ ವೈರಲ್ ಆಗಿತ್ತು . ಇದೇ ರೀತಿ ತಾವು ಹುಲಿವೇಷ  ಕುಣಿದರೆ ತಮ್ಮ ವಿಡಿಯೋ ವೈರಲ್ ಆಗಬಹುದು ಎನ್ನುವ ಉದ್ದೇಶದಿಂದ ಹಲವಾರು ಯುವತಿಯರು ಹುಲಿವೇಷದ ತಾಸೆ ಶಬ್ದಕ್ಕೆ ಮೈಮರೆತು ಸ್ಟೆಪ್ ಹಾಕಿದ್ದಾರೆ.

2 thoughts on “ತಾಸೆ ಸದ್ದಿಗೆ ಮೈಮರೆತು ಹುಚ್ಚೆದ್ದು ಹುಲಿ ವೇಷ ಕುಣಿದ ಯುವತಿಯರು

Leave a Reply

Your email address will not be published. Required fields are marked *

error: Content is protected !!