ಗಾಂಜಾ ನೀಡಿ ಸಹಪಾಠಿಗಳಿಂದಲೇ ಗ್ಯಾಂಗ್ ರೇಪ್

ಮಂಗಳೂರು:  ವಿದ್ಯಾರ್ಥಿನಿಯೊರ್ವಳಿಗೆ ಗಾಂಜಾ ನೀಡಿ ಮತ್ತು ಬರಿಸಿ ಮೂವರು ವಿದ್ಯಾರ್ಥಿಗಳು ಕಾರಿನಲ್ಲಿ ಅತ್ಯಾಚಾರ ವೆಸಗಿದ ಘಟನೆ ನಡೆದಿದೆ. ಯುವಕರು ಪೆರ್ನೆ ಮತ್ತು ಉಪ್ಪಿನಂಗಡಿ ಕಡೆಯವರೆಂದು ತಿಳಿದುಬಂದಿದೆ.

ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಎಸ್. ಪಿ ಲಕ್ಷ್ಮೀಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು ಎಂದು ಹೇಳಲಾಗಿದ್ದು ಕಾರಿನಲ್ಲಿ ಯುವತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಅದನ್ನು ವಿಡಿಯೊ ಚಿತ್ರೀಕರಿಸಿದ್ದಾರೆ. ಅದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ . ಈ ವಿಡಿಯೋ ಆಧಾರದಲ್ಲಿ ಸುಮೊಟೊ ಪ್ರಕರಣ ದಾಖಲಿಸಲಾಗಿದೆ. 

ಮತ್ತೆ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ .

ಉಲ್ಲೇಖಿತ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಬಾರದು ಅಥವಾ ಉಲ್ಲೇಖಿತ ವೀಡಿಯೊಗಳನ್ನು ಅವರ ಫೋನ್ / ಕಂಪ್ಯೂಟರ್‌ಗಳಲ್ಲಿ ಉಳಿಸಬಾರದು ಎಂದು ನಾವು ಸಾರ್ವಜನಿಕರ ಸದಸ್ಯರನ್ನು ಕೋರುತ್ತೇವೆ, ಹಾಗೆ ಮಾಡುವುದು ಐಪಿಸಿಯ 354 ಸಿ ಮತ್ತು 66 ಇ, ಐಟಿ ಕಾಯ್ದೆಯ 66 ಎ ಮತ್ತು ವ್ಯಕ್ತಿಗಳು (ಗುಂಪು ನಿರ್ವಾಹಕರು ಸೇರಿದಂತೆ) ಅಡಿಯಲ್ಲಿ ಅಪರಾಧವಾಗಿದೆ ಹೇಳಿದ ವಿಭಾಗಗಳ ಅಡಿಯಲ್ಲಿ ಆರೋಪಿಯನ್ನಾಗಿ ಮಾಡಲಾಗುವುದು ಎಂದು ಎಸ್‌.ಪಿ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟನೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!