ಎಲ್.ಐ.ಸಿ ವತಿಯಿಂದ ಆಂಬುಲೆನ್ಸ್ ಹಸ್ತಾಂತರ

ಉಡುಪಿ:  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆಗೆ .  ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಆಂಬುಲೆನ್‌ನ್ನು ಹಸ್ತಾಂತರಿಸುವ ಕಾರ್ಯಕ್ರಮ ನಡೆಯಿತು. ಎಲ್.ಐ.ಸಿ.ಯ ಆಡಳಿತ ನಿರ್ದೇಶಕ ಟಿ.ಸಿ.ಸುಶೀಲ್ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೆ ವಾಹನದ ಕೀಲಿ ಕೈಯನ್ನು ಹಸ್ತಾಂತರಿಸಿದರು.

 ಭಾರತೀಯ ಜೀವ ವಿಮಾ ನಿಗಮವು ತನ್ನ ಸಾರ್ಥಕ 62 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ತನ್ನ ಧ್ಯೇಯ ವಾಕ್ಯವಾದ “ಜನರ ಹಣ ಜನರಿಗಾಗಿ” ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಭಾರತದಾದ್ಯಂತ ತನ್ನ ಉಚಿತ ಸೇವೆಯನ್ನು ಸಲ್ಲಿಸುತ್ತಿದೆ. ಇದನ್ನು ಇನ್ನೂ ಸಾಕಾರಗೊಳಿಸಲು ತನ್ನ ಸುವರ್ಣ ಮಹೋತ್ಸವ (2006) ಆಚರಣೆಯ ಸಂದರ್ಭದಲ್ಲಿ ಸ್ಥಾಪಿಸಲ್ಪಟ್ಟ ಗೋಲ್ಡನ್ ಜ್ಯುಬಿಲಿ ಫೌಂಢೇಶನ್ ಮುಖಾಂತರ ಲಕ್ಷಾಂತರ ಜನರಿಗೆ ಶಿಕ್ಷಣಕ್ಕಾಗಿ ಅರ್ಹ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಸಮಾಜದ ಸ್ವಾಸ್ಥಕ್ಕಾಗಿ ಆರೋಗ್ಯ ಕ್ಷೇತ್ರದಲ್ಲೂ ಬಹಳಷ್ಟು ಸಂಸ್ಥೆಗಳಿಗೆ ಧನ ಸಹಾಯ ಮಾಡುತ್ತಿದೆ. ಈ ಬಾರಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆಗೆ ಆಂಬುಲೆನ್‌ನ್ನು ನೀಡಲಾಯಿತು.

ಎಲ್.ಐ.ಸಿ.ಯ ದಕ್ಷಿಣ ಮಧ್ಯ ವಲಯದ ವಲಯಾಧಿಕಾರಿ ಮಿನಿ ಐಪೆ, ವಲಯ ಕಚೇರಿ ಬೆಂಗಳೂರಿನ ಪ್ರಾದೇಶಿಕ ಮಾರುಕಟ್ಟೆ ಮುಖ್ಯಸ್ಥ ಜಗನ್ನಾಥ್, ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಕೆ. ಅನಂತ ಪದ್ಮನಾಭ, ಮಾರುಕಟ್ಟೆ ಪ್ರಬಂಧಕ ವೆಂಕಟರಮಣ ಶಿರೂರು, ಆರೋಗ್ಯ ವಿಮೆ ಉಡುಪಿ ವಿಭಾಗದ ಮುಖ್ಯಸ್ಥ ಎ.ಮೋಹನದಾಸ್ ಹಾಗೂ ಎಲ್.ಐ.ಸಿ.ಯ ಅಧಿಕಾರಿ ವೃಂದದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!