ಕಾರ್ಕಳ ಪುರಸಭೆ ವಿರುದ್ಧ ರಸ್ತೆಯ ಬದಿ ಮೀನು ಮಾರಿ ಮಾರಾಟಗಾರರ ಪ್ರತಿಭಟನೆ !
ಕಾರ್ಕಳ: ಪುರಸಭಾ ವ್ಯಾಪ್ತಿಯಲ್ಲಿ ಸುಂಕ ಪಾವತಿಸದೇ ರಸ್ತೆ ಬದಿಯಲ್ಲಿ ಅಕ್ರಮವಾಗಿ ಮೀನು ಮಾರಾಟ ನಿಲ್ಲಿಸುವಂತೆ ಸುಂಕ ಪಾವತಿಸಿ ಮೀನು ಮಾರಾಟ ಮಾಡುವವರು ಪುರಸಭೆ ಅಡಳಿತಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವ ಅಧಿಕಾರಿಗಳೂ ಕೂಡ ಅಧಿಕೃತ ಮೀನು ಮಾರಾಟಗಾರರ ಮನವಿಗೆ ಸ್ಪಂದಿಸದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಮೀನು ಮಾರಾಟಗಾರರು ಮಂಗಳವಾರ ಕಾರ್ಕಳ ಪೇಟೆಯ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡಿ ಪ್ರತಿಭಟನೆ ನಡೆಸಿದರು. ಪುರಸಭೆ ನಿಗದಿತ ಮೀನು ಮಾರುಕಟ್ಟೆಯಲ್ಲೇ ಮೀನು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಿದೆ. ಮೀನು ಮಾರಾಟಗಾರರು ಅಲ್ಲಿಯೇ ಸುಂಕ ಪಾವತಿಸಿ ಮೀನು ಮಾರಾಟ ಮಾಡಬೇಕಿದೆ.
ಆದರೆ ಹೆಚ್ಚಿನ ಮೀನು ಮಾರಾಟಗಾರರು ಸುಂಕ ಪಾವತಿಸದೇ ಕಂಡಕಂಡಲ್ಲಿ ಮೀನು ಮಾರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ಸುಂಕ ಪಾವತಿಸಿ ಮಾರಾಟ ಮಾಡುವ ಮೀನುಗಾರರಿಗೆ ಸರಿಯಾದ ವ್ಯಾಪರವಿಲ್ಲದೇ ತೊಂದರೆಯಾಗುತ್ತಿದೆ ಎಂದು ಪುರಸಭೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಕ್ರಮ ಮೀನು ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ: ಮುಖ್ಯಾಧಿಕಾರಿ – ಪುರಸಭೆ ನಿಗದಿಪಡಿಸಿರುವ ಮಾರುಕಟ್ಟೆಯಲ್ಲೇ ಎಲ್ಲಾ ಮೀನು ಮಾರಾಠಗಾರರು ಸುಂಕ ಪಾವತಿಸಿ ಮೀನು ಮಾರಾಟ ಮಾಡಬೇಕು. ಕಂಡಕಂಡ ಜಾಗದಲ್ಲಿ ಮೀನು ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಎಚ್ಚರಿಸಿದ್ದಾರೆ.