ಕಾರಂತ ಥೀಂ ಪಾರ್ಕ್: ಯುದ್ಧ ವಿಮಾನ ಪದರ್ಶನ-ಕೋಟ ರಕ್ಷಣಾ ಸಚಿವರ ಭೇಟಿ

ಉಡುಪಿ : ಮುಜರಾಯಿ, ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು, ಡಾ|| ಶಿವರಾಮ ಕಾರಂತ ಥೀಂ ಪಾರ್ಕ್‍ನಲ್ಲಿ ಯುದ್ಧ ವಿಮಾನವನ್ನು ಪದರ್ಶನ ಮಾಡಲು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‍ರವರನ್ನು ಭೇಟಿ ಮಾಡಿ ಚರ್ಚಿಸಿದರು.

ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಅರಿವನ್ನು ಮೂಡಿಸಲು ಯುದ್ಧ ವಿಮಾನವನ್ನು ಡಾ|| ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‍ನಲ್ಲಿ ಪ್ರದರ್ಶನ ಮಾಡಲು ಚರ್ಚಿಸಿದರು. ಇದರ ಜೊತೆಗೆ ರಾಜ್ಯದ ಎ ದರ್ಜೆಯ ಮುಜರಾಯಿ ದೇವಸ್ಥಾನಗಳಲ್ಲಿ ಸಾವಿರ ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಧಾರ್ಮಿಕ ಧತ್ತಿ ಇಲಾಖೆಯ ಮೂಲಕ ಅನುಷ್ಠಾನಿಸಲು ಚರ್ಚೆ ಮಾಡಲಾಯಿತು. ಈ ಪ್ರಸ್ತಾವನೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮತಿಯನ್ನು ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!