ಅಂದ ಚಂದದ ಹುಬ್ಬು
ಐಬ್ರೋ ಶೇಪ್ ಚೆನ್ನಾಗಿದ್ರೆ ಮಾತ್ರ ಮುಖದ ಲುಕ್ ಹೆಚ್ಚುವುದು. ಅದಕ್ಕಾಗಿಯೇ ಈಗಿನ ಟ್ರೆಂಡಿ ಮಹಿಳೆಯರು ಐಬ್ರೋ ಶೇಪ್ ಮಾಡಿಸಿಕೊಂಡು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಯೆಸ್ ನಿಮ್ಮ ಫೇಸ್ಲುಕ್ ಹೆಚ್ಚಾಗುವುದೇ ಐಬ್ರೋಸ್ನಿಂದ. ಅಂದಹಾಗೇ ಎಲ್ಲರ ಹುಬ್ಬು ಹುಟ್ಟುವಾಗಲೇ ಕಾಮನ ಬಿಲ್ಲಿನಂತೆ ಸುಂದರವಾಗಿರುವುದಿಲ್ಲ. ಅಂಥವರು ಐಬ್ರೊ ಶೇಪ್ ಮಾಡಿಸಿಕೊಳ್ಳಲೇಬೇಕು. ಹುಬ್ಬನ್ನು ಕಾಮಿನ ಬಿಲ್ಲಿಂತೆ ಶೇಪ್ ಕೊಟ್ಟು ಬಾಗಿಸಿದರೆ ಮುಖದ ಚಂದ ಹೆಚ್ಚಾಗುತ್ತದೆ. ಕೆಲವು ಮಂದಿ ಪಾರ್ಲರ್ಗೇ ಹೋಗಿ ಐಬ್ರೋಶೇಪ್ ಮಾಡ್ತಾರೆ. ಅಂದಹಾಗೇ ಶೇಪ್ ನೀಡೋದ್ರಲ್ಲೂ ಜಾಗೃತರಾಗಿರಬೇಕು, ಟ್ರೆಂಡ್ಗೆ ತಕ್ಕದಾಗಿರಬೇಕು.
ಒಮ್ಮೆ ದಪ್ಪ ಐಬ್ರೋ ಗಂಡಸರ ಲುಕ್ ಅಂತಿದ್ದವರೇ ಈಗ ಥಿಕ್ ಐಬ್ರೋ ಟ್ರೆಂಡ್ ಮಾಡ್ಬಿಟ್ಟಿದ್ದಾರೆ, ಇನ್ನೊಮ್ಮೆ ಕಾಮನಬಿಲ್ಲನಂತೆ ಬಾಗಿಕೊಂಡಿರುವ ಸಪೂರ ಹುಬ್ಬು ಟ್ರೆಂಡ್ ಆಗುತ್ತೆ, ಒಟ್ಟಾರೆ ಜನ ಮಾಡಿದ್ದೇ ಸ್ಟೈಲ್, ಆಗಾಗ ಲುಕ್ನಲ್ಲಿ ಬದಲಾವಣೆ ಅತ್ಯಗತ್ಯ ಬಿಡಿ. ಟ್ರೆಂಡ್ಗೆ ತಕ್ಕಂತೆ ಐಬ್ರೋ ಶೇಪ್ ನೀಡ್ಬೇಕು ಅಂದ್ರೆ ಹುಬ್ಬಿನ ಕೂದಲು ಕೂಡ ದಪ್ಪವಾಗಿರಬೇಕು.. ಇನ್ನೂ ಕೆಲವರಲ್ಲಿ ಐಬ್ರೋಸ್ ಥಿನ್ ಆಗಿರುತ್ತೆ, ಅಂತವರ ಕೊರಗಬೇಕಂತಿಲ್ಲ, ಸ್ವಲ್ಪ ಕೇರ್ ತಗೊಂಡ್ರೆ ಸಾಕು ನ್ಯಾಚುರಲ್ ಐಬ್ರೋಸ್ ನಿಮ್ಮದಾಗುತ್ತೆ.
ಮನೆಮದ್ದುಗಳಲ್ಲಿ ವಿಟಮಿನ್ಗಳಿದ್ದು ಕಣ್ಣಿನ ಹುಬ್ಬಿನ ಬೆಳವಣಿಗೆಗೆ ಸಹಕಾರಿ. ಇದು ಕೂದಲಿನ ಕೋಶಗಳಿಗೆ ಪೋಷಣೆ ನೀಡಿ ಹುಬ್ಬುಗಳ ಸಂಪೂರ್ಣ ಆರೈಕೆ ಮಾಡುತ್ತವೆ.
ಹುಬ್ಬಿನ ಕೂದಲು ಕಪ್ಪಾಗಿ ದಪ್ಪವಾಗಿ ಬೆಳೆಯಲು. ಪ್ರತಿನಿತ್ಯ ಸ್ವಲ್ಪ ಹರಳೆಣ್ಣೆಯನ್ನು ಹತ್ತಿಯಿಂದ ತೆಗೆದುಕೊಂಡು ಹುಬ್ಬಿನ ಮೇಲೆ ನಿಧಾನಕ್ಕೆ ಮಸಾಜ್ ಮಾಡಿ ಇದರಿಂದ ರಕ್ತಸಂಚಾರ ಹೆಚ್ಚಾಗುತ್ತದೆ. ಹುಬ್ಬಿಗೆ ಮಸಾಜ್ ಮಾಡಿದ ಎಣ್ಣೆಯನ್ನು ರಾತ್ರಿ ಹಾಗೆಯೇ ಬಿಟ್ಟು, ಬೆಳಿಗ್ಗೆ ತೊಳೆಯಿರಿ. ಹರಳೆಣ್ಣೆಯಲ್ಲಿ ಪ್ರೋಟಿನ್, ವಿಟಮಿನ್ ಹಾಗು ಆಂಟಿ ಆಕ್ಸಿಡೆಂಟ್ ಹೆಚ್ಚಾಗಿ ಇರುವುದರಿಂದ ಹುಬ್ಬಿನ ಕೂದಲು ಬೆಳೆಯಲು ಸಹಾಯವಾಗುತ್ತದೆ.
ಇನ್ನೂ ಕೊಬ್ಬರಿ ಎಣ್ಣೆ ಕೂಡ ಕೂದಲಿನ ಬೆಳವಣಿಗೆಗೆ ಒಳ್ಳೆದು, ಕೊಬ್ಬರಿ ಎಣ್ಣೆಯನ್ನು ಹತ್ತಿಯಿಂದ ತೆಗೆದುಕೊಂಡು ಹುಬ್ಬಿನ ಮೇಲೆ ಮಸಾಜ್ ಮಾಡಿ ರಾತ್ರಿ ಹಾಗೆ ಇಟ್ಟುಕೊಂಡು ಮಲಗಿ ಬೆಳಿಗ್ಗೆ ತೊಳೆಯಿರಿ.ಇದರಲ್ಲಿ ಪ್ರೋಟಿನ್ ಹಾಗು ವಿಟಮಿನ್ ಇ ಇರುವುದರಿಂದ ಇದು ಕೂದಲು ವೇಗವಾಗಿ ಬೆಳೆಯಲು ಸಹಕರಿಸುತ್ತದೆ.
ಮೆಂತೆ ಬೀಜವನ್ನು ಪೇಸ್ಟ್ ಮಾಡಿ ಅದನ್ನು ಹುಬ್ಬಿಗೆ ಹಚ್ಚಿದರೂ ಹುಬ್ಬು ದಪ್ಪವಾಗಿ ಬೆಳೆಯುತ್ತದೆ. ಇದು ಕೂದಲಿನ ಬೆಳವಣಿಗೆಗೂ ಒಳ್ಳೆಯದು. ಮನೆಮದ್ದುಗಳು ತೆಳು ಹುಬ್ಬನ್ನು ದಪ್ಪಗೆ ಮಾಡುವುದರಲ್ಲಿ ಅನುಮಾನವೇ ಬೇಡ.
ಈಗೀನ ಕಾಲದಲ್ಲಿ ಮುಖದ ಸೌಂದರ್ಯ ಹೆಚ್ಚಾಗಲು ಅದ್ರಲ್ಲೂ ಕಣ್ಣಿನ ಸೌಂದರ್ಯ ಹೆಚ್ಚಿಸಲು ಹುಬ್ಬಿಗೆ ಶೇಪ್ ನೀಡೋದು ಕಾಮನ್. ಕೆಲವು ಮಂದಿ ನಾವೇ ಪ್ಲಕರ್ ಮೂಲಕ ಆಕಾರ ನೀಡಿದರೆ ಇನ್ನೂ ಕೆಲವರು ಬ್ಯೂಟಿ ಪಾರ್ಲರ್ಗೆ ಹೋಗಿ ಶೇಪ್ ನೀಡ್ತಾರೆ.. ಶೇಪ್ಲೆಸ್ ಆಗಿರೋ ಐಬ್ರೋಸ್ಕ್ಕಿಂತ ನೀಟಾಗಿರೋದೆ ಚಂದ, ಮುಖದ ಸೌಂದರ್ಯಕ್ಕೆ ಐಬ್ರೋ ಶೇಪ್ ಬಹಳ ಮುಖ್ಯ.
ನಿಮ್ಮ ಹಣೆ ಅಗಲವಾಗಿದ್ದರೇ ಆಗ ದಪ್ಪವಾಗಿರೋ ಹುಬ್ಬು ಚೆನ್ನಾಗಿ ಕಾಣುತ್ತದೆ. ಮುಖದ ಆಕಾರಕ್ಕೆ ಹೊಂದುವಂತೆ ಹುಬ್ಬು ತೀಡಿಕೊಳ್ಳಿ, ಆಕಾರವನ್ನ ನೀಡೋದು ಅಗತ್ಯ. ಹೆಣ್ಮಕ್ಕಳ ಹುಬ್ಬು ಕರಿಯಾಗಿದ್ರೆ ಚಂದ ಅನ್ನೋರೇ ಜಾಸ್ತಿ ಅದಕ್ಕಾಗಿ ತೀರ ಅಗತ್ಯ ಎನಿಸಿದರೆ ಮಾತ್ರ ಐಬ್ರೊ ಪೆನ್ಸಿಲ್ನಿಂದ ಹುಬ್ಬುಗಳಿಗೆ ಉಪಯೋಗಿಸಿ. ನೀವೇ ಮನೆಯಲ್ಲಿ ಐಬ್ರೊ ಮಾಡಿಕೊಳ್ಳುತ್ತೀರಂದರೆ ಆಕಾರ ಹಾಳಾಗದಂತೆ ಪ್ಲಕ್ಲರ್ನಿಂದ ಬೇಡದವಾದ ಕೂದಲನ್ನು ಮಾತ್ರ ತೆಗೆದು ಆಕಾರ ನೀಡಿ. ಯಾವುದೋ ಸಮಾರಂಭಕ್ಕೆ ಹೋಗುವ ಸಮಯದಲ್ಲೆಲ್ಲ ಐಬ್ರೊ ಮಾಡಿಸಬೇಡಿ. ಹುಬ್ಬಿನ ಸುತ್ತಮುತ್ತ ಕೆಂಪಗಾಗಿ ಅಸಹ್ಯವಾಗಿ ಕಾಣಿಸುತ್ತಿರುತ್ತದೆ. ಐಬ್ರೊ ಮಾಡಿಸಿದ ನಂತರ ಲೋಳೆರಸವನ್ನು ಮುಖಕ್ಕೆ ಹಚ್ಚಿದರೆ ಅದು ಮಾಯಿಶ್ಚರೈಸರ್ ರೀತಿ ಕೆಲಸ ಮಾಡುತ್ತದೆ.
ಈಗ ಮಾರುಕಟ್ಟೆಯಲ್ಲಿ ಐಬ್ರೋಸ್ಗಾಗಿ ಅದೆಷ್ಟೋ ಬ್ಯೂಟಿ ಪ್ರಾಡಕ್ಟ್ ಬಂದಿದೆ. ಕಡಿಮೆವೆಚ್ಚದ ಐಬ್ರೋ ಪೆನ್ಸಿಲ್ ಲೈಟ್ ಆಗಿ, ಹಚ್ಚಿದ್ರೆ ಇನ್ನೂ ಚೆನ್ನಾಗಿರುತ್ತೆ. ಅದೇನೆ ಇರಲಿ ಎಲ್ಲರಲ್ಲೂ ಬ್ಯೂಟಿ ಕಾನ್ಶಿಯಸ್ ಇದ್ದೇ ಇರುತ್ತೆ. ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಫಾಲೋ ಮಾಡುವವರ ಸಂಖ್ಯೆನೇ ಹೆಚ್ಚು. ಟ್ರೆಂಡ್ಗೆ ತಕ್ಕಂತೆ ಒಮ್ಮೆ ಥಿಕ್, ಒಮ್ಮೆ ಥಿನ್, ಇನ್ನೊಮ್ಮೆ ಡಾರ್ಕ್ ಐಬ್ರೋಸ್ ಇದೇ. ಇದೀಗ ಹುಬ್ಬಿನ ಕೂದಲಿಗೂ ಬಣ್ಣ ಹಚ್ಚೋ ಟ್ರೆಂಡ್ ಆರಂಭವಾಗಿದೆ. ತಾವಾಗಿಯೇ ಹುಬ್ಬಿನ ಕೂದಲಿಗೆ ಬಣ್ಣ ಹಚ್ಚದೇ ಎಕ್ಸ್ಪರ್ಟ್ ಬಳಿ ಕೇಳಿ ಹಚ್ಚಿದ್ರೆ ಒಳಿತು. ಇಲ್ಲ ಅಂದ್ರೆ ಸೈಡ್ಇಫೆಕ್ಟ್ನಿಂದ ಬ್ಯೂಟಿ ಹಾಳಾಗಲುಬಹುದು. ಏನೇ ಆದ್ರೂ ಟ್ರೆಂಡ್ ಜೊತೆಗೆ ಬ್ಯೂಟಿ ಆಂಡ್ ಹೆಲ್ತ್ಕೇರ್ ಕೂಡ ವೆರಿ ಇಂಪಾರ್ಟೆಂಟ್.