ಟೀಕೆಗಳಿಗೆ ಧೃತಿಗೆಡಬೇಡಿ, ಧೈರ್ಯದಿಂದ ಎದುರಿಸಿ ಮುನ್ನುಗ್ಗಿ : ಲಾರೆನ್ಸ್ ಡೇಸಾ

ಸಂಘ ಸಂಸ್ಥೆಗಳನ್ನು ಸ್ಥಾಪಿಸುವುದು ಸುಲಭ, ಆದರೆ ಸಂಘಟನೆಯನ್ನು ಬೆಳೆಸುವುದು ಕಷ್ಟ. ಸದಸ್ಯರೆಲ್ಲರೂ ಸಮಾನ ಮನಸ್ಕರಾಗಿದ್ದರೆ ಮಾತ್ರ ಆ ಸಂಘಟನೆ ಬಲಿಷ್ಠಗೊಳ್ಳುತ್ತದೆ. ಯಾವುದೇ ಕಾರ್ಯಕ್ರಮಗಳು ನಡೆಸಿದರೂ ಕೂಡ ಟೀಕೆಗಳು ಬರುವುದು ಸಹಜ. ಟೀಕೆಗಳೆಲ್ಲವನ್ನೂ ಸವಾಲಾಗಿ ಸ್ವೀಕರಿಸಿದರೆ ಯಶಸ್ಸು ಖಂಡಿತವಾಗಿಯೂ ನಿಮ್ಮ ಹಿಂದೆ ಬರುತ್ತದೆ ಎಂದು ಕಥೋಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷರಾದ ಲಾರೆನ್ಸ್ ಡೇಸಾ ಹೇಳಿದರು. ನಿರಂತರ್ ಉದ್ಯಾವರ ಸಂಘಟನೆಯ ನೇತೃತ್ವದಲ್ಲಿ ಉದ್ಯಾವರದ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಸಭಾಭವನದಲ್ಲಿ ಜರಗಿದ “ಪಾಸ್ ಪೋರ್ಟ್” ಕೊಂಕಣಿ ಚಲನ ಚಿತ್ರ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಕುವೈಟ್ನಲ್ಲಿ ಉದ್ಯೋಗದಲ್ಲಿದ್ದರೂ, ಹಲವಾರು ಕೊಂಕಣಿ ಮತ್ತು ತುಳು ನಾಟಕಗಳಲ್ಲಿ ಹಾಸ್ಯ ಕಲಾವಿದನಾಗಿರುವ ರಾಜೇಶ್ ಫೆನಾಂಡಿಸ್ ಉದ್ಯಾವರ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಕುಲಪತಿ ವಂದನೀಯ ಫಾ. ಸ್ಟ್ಯಾನಿ ಬಿ.ಲೋಬೊ, ಪಾಸ್‌ಪೋರ್ಟ್ ಕೊಂಕಣಿ ಚಲನಚಿತ್ರದ ನಿರ್ಮಾಪಕರಾದ ವಂದನೀಯ ಫಾ ರೊಯ್ಸನ್ ಫರ್ನಾಂಡಿಸ್ , ಸಂಘಟನೆಯ ಸದಸ್ಯರಾದ ಮೈಕಲ್ ಡಿಸೋಜಾ, ರೋಶನ್ ಕ್ರಾಸ್ತಾ, ರೊನಾಲ್ಡ್ ಡಿ ಸೋಜಾ, ಸುನೀಲ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!