ರೈತರ ಸಮಸ್ಯೆಗಳ ಪರಿಹಾರಕ್ಕೆ ಸಭೆ ಕರೆದು ಚರ್ಚಿಸಿದ- ಉಡುಪಿ ಜಿಲ್ಲಾಧಿಕಾರಿ

ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಧಿಕಾರಿ ಶ್ರೀ ಜಿ. ಜಗದೀಶ್‌ರವರು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಭಾರತೀಯ ಪದಾಧಿಕಾರಿಗಳ ಸಭೆಯೊಂದನ್ನು ಆಯೋಜಿಸಿ, ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿದರು.

ಜಿಲ್ಲೆಯ ರೈತರ ಪ್ರಮುಖ ಸಮಸ್ಯೆಗಳಾದ ಪ್ರಾಕೃತಿಕ ವಿಕೋಪದಿಂದ ನಷ್ಟವಾದ ಗದ್ದೆ ಹಾಗೂ ತೋಟಗಳಿಗೆ ನೈಜ್ಯ ನಷ್ಟದ ಆದಾರದಲ್ಲಿ ಪರಿಹಾರ, ಜಿಲ್ಲೆಯಾದ್ಯಂತ ಅಡಿಕೆ ತೋಟಗಳಲ್ಲಿ ಕಾಣಿಸಿರುವ ಕೊಳೆ ರೋಗಕ್ಕೆ ಪರಿಹಾರ ಘೋಷಿಸುವುದು, ಭತ್ತದ ಬೆಳೆಗೆ ಪ್ರೋತ್ಸಾಹಧನ, ಬಾಡಿಗೆಯಂತ್ರ ಕೇಂದ್ರಗಳ ನ್ಯೂನ್ಯತೆಗಳನ್ನು ಸರಿಪಡಿಸುವುದು, ಕಾಡುಪ್ರಾಣಿಗಳ ಹಾವಳಿಗೆ ಕೈಗೊಳ್ಳಬಹುದಾದ ಕ್ರಮ, ಡೀಮ್ಡ್ ಫಾರೆಸ್ಟ್, ಬೆಳೆ ಸಮೀಕ್ಷೆ, ಕಾಡುಪ್ರಾಣಿಗಳಿಂದ ರೈತರಿಗಾದ ನಷ್ಟಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ, ಅಕೇಶಿಯಾ ಗಿಡ ನೆಡುವುದರಿಂದಾಗಿ ಜನರಿಗಾಗುತ್ತಿರುವ ಸಮಸ್ಯೆ, ವೆಂಟೆಡ್ ಡ್ಯಾಂನ ನಿರ್ವಾಹಣೆ, ಜಿಲ್ಲೆಯಲ್ಲಿ ಕಬ್ಬಿನ ಬೆಳೆ ಬೆಳೆಯಲು ಪ್ರೋತ್ಸಾಹ ಮೊದಲಾದ ವಿಚಾರಗಳ ಕುರಿತು ಸುಧೀರ್ಘವಾಗಿ ಒಂದೂವರೆ ಗಂಟೆಗೂ ಹೆಚ್ಚುಕಾಲ ಚರ್ಚಿಸಿ, ಕೆಲವೊಂದು ಪರಿಹಾರ ಮಾರ್ಗವನ್ನೂ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀ ಸದಾಶಿವ ಪ್ರಭು, ಸಹಾಯಕ ಕಮಿಶನರ್ ಶ್ರೀ ಮದುಕೇಶ್ವರ, ಜಂಟಿ ಕೃಷಿ ನಿರ್ದೇಶಕ ಶ್ರೀ ಕೆಂಪೆಗೌಡ, ತೋಟಗಾರಿಕಾ ಉಪನಿರ್ದೇಶಕಿ ಶ್ರೀಮತಿ ಭುವನೇಶ್ವರಿ, ಕೃಷಿ ಇಲಾಖಾ ಉಪನಿರ್ದೇಶಕ ಶ್ರೀ ಚಂದ್ರಶೇಖರ, ಅರಣ್ಯ ಇಲಾಖೆಯ ಶ್ರೀ ಪ್ರಭಾಕರ ಕುಲಾ, ಲೀಡಬ್ಯಾಂಕ್‌ನ ಶ್ರೀ ರುದ್ರೇಶ ಮೊದಲಾದವರು, ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಮಂಡಿಸಿದ ಸಮಸ್ಯೆಗಳ ಪರಿಹಾರಕ್ಕೆ ಕಾನೂನಾತ್ಮಕ ಸಲಹೆ ನೀಡಿ, ಪರಿಹಾರಕ್ಕೆ ಪ್ರಯತ್ನಿಸುವ ಭರವಸೆ ನೀಡಿದರು.

ಭಾರತೀಯ ಕಿಸಾನ್ ಸಂಘದ ಪ್ರತಿನಿಧಿಗಳಾಗಿ ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್, ರಾಜ್ಯ ಸಮಿತಿ ಸದಸ್ಯ ಬಿ.ವಿ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ, ಕೋಶಾಧಿಕಾರಿ ವಾಸುದೇವ ಶ್ಯಾನುಭಾಗ್, ಜಿಲ್ಲೆಯ ಪ್ರಮುಖರಾದ ಉಮಾನಾಥ ರಾನಡೆ, ಚಂದ್ರಹಾಸ ಶೆಟ್ಟಿ, ಸೀತಾರಾಮ ಗಾಣಿಗ, ಪ್ರಾಣೆಶ್ ಯಡಿಯಾಳ್, ಪಾಂಡುರಂಗ ಹೆಗ್ಡೆ, ಆಸ್ತೀಕ ಶಾಸ್ತ್ರೀ, ಸುಂದರ ಶೆಟ್ಟಿ, ವೆಂಕಟೇಶ್ ರಾವ್, ಮಹಾಬಲ ಬಾಯಾರಿ, ಎಸ್.ಎನ್.ಭಟ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿ, ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಸಭೆ ಆಯೋಜಿಸಿದ ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿ ರೈತರ- ಅಧಿಕಾರಿಗಳ ಸಭೆ ಕರೆಯಲು ಜಿಲ್ಲಾಧಿಕಾರಿಗಳು ಸಮ್ಮತಿ ಸೂಚಿಸಿದರ

Leave a Reply

Your email address will not be published. Required fields are marked *

error: Content is protected !!