ಕೋಸ್ಟಲ್ ವಿವಿಧೋದ್ದೇಶ ಸಹಕಾರ ಸಂಘದ ನೂತನ ಶಾಖೆಯ ಉದ್ಘಾಟನೆ

ಕಳೆದ 5 ವರ್ಷದ ಹಿಂದೆ ಪ್ರಾರಂಭವಾದ ಸಂಸ್ಥೆ ಕೋಸ್ಟಲ್ ವಿವಿಧೋದ್ದೇಶ ಸಹಕಾರ ಸಂಘ ಯಶಸ್ವಿಯಾಗಿ ಮುನ್ನಡೆಯುತ್ತಾ ನೂತನ ನಿರ್ದೇಶಕ ಮಂಡಳಿಯೊಂದಿಗೆ ಇನ್ನೂ ಹೆಚ್ಚಿನ ಏಳಿಗೆ ಯನ್ನು ಪಡೆಯುವ ನಿಟ್ಟಿನಲ್ಲಿ ಸಾಗುತ್ತಿದ್ದು, ಮಲ್ಪೆ ಕಾರ್ತಿಕ್ ಸಹಜ್ ವಾಣಿಜ್ಯ ಸಂಕೀರ್ಣಕ್ಕೆಸ್ಥಳಾಂತರ ಗೊಂಡ ನೂತನ ಕಚೇರಿಯ ಉದ್ಘಾಟನಾ ಸಮಾರಂಭವು 8 ಭಾನುವಾರ ನಡೆಯಿತು.

ಕಾರ್ತಿಕ್ ಸಮೂಹ ಸಂಸ್ಥೆಯ ಆಡಳಿತ ಪಾಲುದಾರರಾದ ಹರಿಯಪ್ಪ ಕೋಟ್ಯಾನ್ ಅವರು ನೂತನ ಕಚೇರಿಯನ್ನು ದೀಪ ಬೆಳಗಿಸುವ  ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಹಕಾರಿ ಸಂಘಗಳು ಕೇವಲ ವ್ಯಾಪಾರ ದೃಷ್ಟಿಯಿಂದ ಕಾರ್ಯನಿರ್ವಹಿಸದೆ, ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನೂ ಮಾಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿಯವರು ಮಾತನಾಡಿ, ಇವತ್ತು ಸಹಕಾರಿ ಸಂಸ್ಥೆಗಳಿಗೆ ಬ್ಯಾಂಕಿಗ್ ನ ಜೊತೆಗೆ ಇತರ ವ್ಯವಹಾರ , ಉದ್ದಿಮೆ ನಡೆಸುವ ವಿಪುಲ ಅವಕಾಶಗಳಿವೆ. ಇದನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.

ಕಟ್ಟದ ಮಾಲಕರಾದ ರಮೇಶ್ ಕೋಟ್ಯಾನ್, ನಿರ್ದೇಶಕರುಗಳಾದ ಡಾ. ಸುಧೀರ್ ಸೂಡ, ನಳಿನಿ, ಪ್ರೆಸಿಲ್ಲಾ ಪಿರೇರಾ, ಸಿಎ ಕೈಲಾಸ್, ಸಿಎ ಸುಭಾಸ್ಚಂದ್ರ, ಸಿಎ ಮಲ್ಲೇಶ್ ಕುಮಾರ್, ವಿನೋದ್ ಕುಮಾರ್, ಡಾ. ಅಂಜಲಿ, ಸವಿತಾ ಮೆಂಡನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಿರ್ಗಮನ ಅಧ್ಯಕ್ಷರಾದ ನಳಿನಿ ರವರನ್ನು ಮತ್ತು ಸಹಕಾರ ಸಂಘದ ಠೇವಣಿದಾರರನ್ನು ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ಸುನೀಲ್ ಸಾಲ್ಯಾನ್ ಕಡೆಕಾರ್ ಸ್ವಾಗತಿಸಿದರೆ, ಕಾರ್ಯನಿರ್ವಾಹಣಾ ಅಧಿಕಾರಿ ದಯಾನಂದ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ್ ಬಂಗೇರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!