‘ಶಾ’ನಲ್ಲಿ 120 ಕೋಟಿ: ಅವಳಲ್ಲಿ ಏನೂ ಇಲ್ಲ!…

(ಎಕ್ಸ್‌ಕ್ಲೂಸಿವ್ ರಿಪೋರ್ಟ್ ಎಸ್ಸೆನ್ ಕುಂಜಾಲ್‌ರಿಂದ)

ನಿಜಕ್ಕೂ, ಈ ಬಗ್ಗೆ ಹೇಳಿಕೊಳ್ಳಲು ನಾಚಿಕೆ ಅನ್ನಿಸುತ್ತದೆ. ಹೌದು; ನಾವು ಇಂಡಿಯನ್ಸ್‌ಗಳು ಅಂತ ಎದೆಯುಬ್ಬಿಸಿಕೊಂಡು ಹೇಳಿಕೊಳ್ತೇವೆ. ಎದೆ ತಟ್ಟಿ ಬೇರೆ ಕಂಟ್ರಿಯವರನ್ನ ಹೀನಾಯವಾಗಿ ಮೂದಲಿಸ್ತೇವೆ. ನಮ್ಮ ಇಂಡಿಯಾವೇ ಫುಲ್ ವರ್ಲ್ಡ್‌ಗೇ ಮಾಡಲ್ ಅಂತ ಜಂಭ ಕೊಚ್ಚಿಕೊಳ್ತೇವೆ. ಹೀಗೆ ಹೇಳುವಾಗ ನಾವು ತೀರಾ ‘ಕೂಪ ಮಂಡೂಕ’ಗಳು ಅಂತ ಭಾಸವಾಗುತ್ತದೆ. ನಾವೆಲ್ಲಾ ಬಾವಿಯಲ್ಲಿರುವ ಕಪ್ಪೆಗಳೆಂಬುದು ನಿಜಾನಾ? ಬಾಹ್ಯ ಜಗತ್ತಿನ ಬಗ್ಗೆ ನಮಗೆ ಗೊತ್ತೇ ಇಲ್ಲವಾ? ಅದ್ಯಾವನೋ ಒಬ್ಬ ಟೀವಿಯವ ಬಡಬಡಿಸಿದ್ದನ್ನೇ ಸತ್ಯವೆಂದುಕೊಂಡು ‘ಇಂಡಿಯಾ’ ಅಂದ್ರೆ ಹಾಗೇ.. ಹೀಗೆ.. ಅಂತ ನಂಬ್ತಿದ್ದೀವಾ?. ಬನ್ನಿ; ನಿಮಗಾಗಿ ಇನ್ನೊಂದು ಕಂಟ್ರಿಯ ಬಗ್ಗೆ, ಅಲ್ಲಿನ ಕೊರೋನಾ ಬಗ್ಗೆ, ಅಲ್ಲಿನ ಪ್ರಧಾನಿಯ ಬಗ್ಗೆ, ಆ ದೇಶದ ಆರ್ಥಿಕತೆಯ ಬಗ್ಗೆ ಇಲ್ಲಿದೆ; ನಿಮಗಾಗಿ

ಯಾರು ತಿಳಿಯರು ನನ್ನ ಭುಜಬಲದ ಪರಾಕ್ರಮ……..
ಲಾಕ್ ಡೌನ್ ಮಾಡಿದ್ದು ಭಾರೀ ಒಳ್ಳೆದಾಯ್ತು. ಇದರಿಂದ ಬಹುತೇಕ ಕೊರೋನಾ ಕಂಟ್ರೋಲಿಗೆ ಬಂದಿದೆ. ನಾವೆಲ್ಲರೂ ಸೇಫಾಗಿದ್ದೇವೆ. ಇಲ್ಲವಾದಲ್ಲಿ ಮಾವಿನ ಮರದಿಂದ ಮಾವಿನ ಮಿಡಿಗಳು ಉದುರಿದ್ಹಂಗೆ ನಾವೆಲ್ಲಾ ರೋಡ್-ರೋಡ್‌ನಲ್ಲಿ ಬಿದ್ದು ಸಾಯ್ತಿದ್ದೆವು. ರಿಯಲ್ಲೀ ಇಂಡಿಯಾ ಈಸ್ ಸೇಫ್ ಹೀಗಂತ ಬೆಂಗಳೂರಿಂದ ಬಾಲಸುಬ್ರಹ್ಮಣ್ಯ ಕಾಲ್ ಮಾಡಿದ್ದ. ಯಶವಂತಪುರದಲ್ಲಿ ಸಣ್ಣದೊಂದು ಆಮ್ಲೆಟ್ ಅಂಗಡಿ ಇಟ್ಟುಕೊಂಡವ ಈತ. ಸಂಜೆ ಆರರಿಂದ ರಾತ್ರಿ ಹನ್ನೊಂದು ತನಕ ಎಗ್ ಮಸಾಲ, ಎಗ್ ಚಿಲ್ಲಿ, ಬುರ್ಜಿ, ಆಮ್ಲೆಟ್ ಮಾಡ್ಕೊಂಡು ದೈನಂದಿನ ಬದುಕು ಸಾಗಿಸುತ್ತಿದ್ದಾತ. ಬಹುಶ: ಆಮ್ಲೆಟ್ ಅಂಗಡಿಯವನ ತಲೆಯಲ್ಲಿರುವುದು ಇಷ್ಟೇ ಅಂದುಕೊಳ್ಳೋಣ. ಈತನಿಗೆ ಗೊತ್ತಿದ್ದದ್ದು ಮೋದಿ ಬಗ್ಗೆಯಷ್ಟೇ ಎಂಬುದಂತೂ ವಾಸ್ತವ ಸತ್ಯ.

ಆಕಾಶದಿಂದ ಜಾರಿ…..ಭೂಮಿಗೆ ಬಂದ…
ನಿಮಗಿದು ಗೊತ್ತಿರಲಿ; ಇಂಡಿಯಾ ಜತೆಗೆ ನ್ಯೂಜಿಲೆಂಡನ್ನು ಸ್ವಲ್ಪ ಕಂಪೇರ್ ಮಾಡಿ ನೋಡಿ; ಅದು ಕ್ರಿಕೆಟಿನಲ್ಲಲ್ಲ. ಅಲ್ಲಿನ ಜನಜೀವನದ ಬಗ್ಗೆ. ಅಲ್ಲಿನ ಜನಪ್ರತಿನಿಧಿಗಳ ಬಗ್ಗೆ. ಅಲ್ಲಿನ ಪ್ರೈಮ್ ಮಿನಿಸ್ಟರ್‌ರ ಬಗ್ಗೆ. ಈ ಬಗ್ಗೆ ಅರಿತುಕೊಂಡಲ್ಲಿ, ನಿಮಗೆ ನೀವೇ ನಿಬ್ಬೆರಗಾಗುತ್ತೀರಾ. ಹೌದು; ಅಲ್ಲಿಯೂ ಕೊರೋನಾ ಬಂದಿದೆ. ಆದರೆ ಸತ್ತವರ ಸಂಖ್ಯೆ ಕೇವಲ ಎರಡೇ ಎರಡು. ಅದಕ್ಕೆ ಅಲ್ಲಿ ಪ್ರಧಾನಿ ಮಾಡಿದ್ದಿಷ್ಟೇ; ಜನರ ಮನಗೆಲ್ಲುವಂತೆ, ಅವರ ಮನಕಲುಕುವಂತೆ, ಅವರಲ್ಲಿ ಆತ್ಮವಿಶ್ವಾಸ ಮೂಡುವಂತೆ, ಧೈರ್ಯ-ಸ್ಥೈರ್ಯ ಬರುವಂತೆ ಸ್ಪೀಚ್ ಮಾಡಿದ್ದರು. ಅದೆಷ್ಟು ಟೈಮು ಸ್ಪೀಚ್ ಮಾಡಿದ್ದಾರೆ ಅಂದ್ಕೊಂಡಿದ್ದೀರಾ? ಓನ್ಲೀ ಟು ಮಿನಿಟ್ಸ್!

ಈ ಶತಮಾನದ ಮಾದರಿ ಹೆಣ್ಣು..!

ಯಸ್! ನ್ಯೂಜಿಲೆಂಡ್‌ನ ಪ್ರಧಾನಿ ಜೆಸಿಂಡಾ ಅರ್ಡೆರ್ನ್ ಅದ್ಯಾರಾ ಬರೆದು ಕೊಟ್ಟ ಸ್ಕ್ರಿಪ್ಟೆಡ್ ಸ್ಪೀಚ್ ಮಾಡಲಿಲ್ಲ. ಐದ್ಹತ್ತು ಮಿನಿಟ್ಸ್ ಮಾತಾಡಿ ಕಿವೀಸ್‌ಗಳ ತಲೆಗೆ ಹುಳ ಬಿಡಲಿಲ್ಲ. ಕೇವಲ ಎರಡು ನಿಮಿಷ-ಅದೂ ಹಾರ್ಟ್‌ಲಿ! ಮನತಟ್ಟುವಂತೆ! ಹೃದಯ ತಲುಪುವಂತೆ ! ಜಸ್ಟ್ ತಮ್ಮ ದೇಶ ವಾಸಿಗಳಲ್ಲಿ ರಿಕ್ವೆಸ್ಟ್ ಮಾಡಿದರು….. ‘ಪಕ್ಷ ಬೇಧ ಮರೆಯೋಣ,.. ಜಾತಿ ಅಂತರ ಬಿಟ್ಟು ಬಿಡೋಣ.. ನಮ್ಮಲ್ಲಿ ನೂರಾ ನಲವತ್ತು ಮರಗಳಿದ್ದಾವೆ. ಅವು ನಮ್ಮ ಪ್ರಕೃತಿಯ ಧ್ಯೋತಕ. ಅದು ನಮ್ಮನ್ನು ಕಾಪಾಡುತ್ತದೆ’ ಹೀಗಂತ ಹೇಳಿ ಧೈರ್ಯ ತುಂಬಿದರು. ‘ಇರುವುದರಲ್ಲೇ ಸಮಾಧಾನಪಟ್ಟುಕೊಳ್ಳೋಣ’ ಎಂದರು.

ಯಾರದ್ದೋ ದುಡ್ಡು.. ಯಲ್ಲಮ್ಮನ ಜಾತ್ರೆ..

ಇಟ್ಸ್ ಇನಫ್! ಅಷ್ಟೇ ಸಾಕಾಗಿತ್ತು, ‘ಕೀವೀಸ್’ ಜನರಿಗೆ. ನ್ಯೂಜಿಲೆಂಡ್ ಪ್ರಧಾನಿ ಅಂದುಕೊಂಡಂತೆ ಆಯ್ತು. ಎರಡೇ ಎರಡು ನಿಮಿಷಕ್ಕೆ ಎರಡು ತಾಸಿನಷ್ಟು ವ್ಯಾಲ್ಯೂ ಸಿಕ್ಕಿತ್ತು. ಇವತ್ತಿಗೆ ಯಾರಲ್ಲಾದರೂ ಕೇಳಿ ನೋಡಿ; ನ್ಯೂಜಿಲೆಂಡಲ್ಲಿ ಕೊರೋನಾದಲ್ಲಿ ಸತ್ತವರ ಸಂಖ್ಯೆ ಎಷ್ಟು ಗೊತ್ತಾ? ಕೇವಲ ಎರಡೇ ಎರಡು! ವಾಟ್ ಎ ಸರ್‌ಪ್ರಾಜ್! ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ನ್ಯೂಜಿ’ ಪ್ರಧಾನಿ ಜೆಸಿಂಡಾ ಆರ್ಡೆರ್ನ್ ಮಾತಿಗೆ ತಕ್ಕಂತೆಯೇ ಇದ್ದಾರೆ. ಇಂಡಿಯಾದಂತೆ ಕರಪ್ಟ್ ಅಲ್ಲ. ಇಷ್ಟಕ್ಕೂ ಜೆಸಿಂಡಾಳ ವರ್ಷದ ಇನ್‌ಕಮ್ ಎಷ್ಟೂಂತಾ ಗೊತ್ತಾ? ಕೇವಲ ಇಪ್ಪತ್ತು ಸಾವಿರ ರೂಪಾ!

ಲೇ..ಲೇ..ಅಪ್ಪನ ಮಗನೇ….

ನೋ ಕಾಮೆಂಟ್ಸ್. ನಮ್ಮ ಪ್ರಧಾನಿ ಕೂಡಾ ಇದೇ ರೇಂಜಿನಲ್ಲಿದ್ದಾರೆ. ಅದರಲ್ಲಂತೂ ತಕರಾರಿಲ್ಲ. ಆದರೆ ಮೋದೀಜಿಯವರ ಬಲಗೈ ಬಂಟ, ಆಲಿಯಾಸ್ ನಮ್ಮ ನ್ಯಾಶನಲ್ ಹೋಮ್ ಮಿನಿಸ್ಟರ್ ಅಮಿತ್ ಶಾ ಕಥೆ ಗೊತ್ತಾ? ಅವರ ಮಗನ ಆಮದನಿಯ ಬಗ್ಗೆ ನಿಮಗೇನಾದ್ರೂ ಗೊತ್ತಾ? ಅವನಲ್ಲಿರುವ ಕೋಟ್ಯಂತರ ಹಣ ಯಾರಪ್ಪಂದು? ಯಾವ ದುಡಿಮೆಯದ್ದು? ಅದೆಲ್ಲಿಂದ ಬಂತು? ಇದು ನ್ಯಾಯದ ಹಣವಾ? ಟ್ವೆಂಟಿ-ಟ್ವೆಂಟಿ ಪರ್ಸಂಟ್ ಲಂಚದ ಕಾಸು ಇದಾಗಿದಾ? ತಲೆ ಹೊಡೆದು ಮಾಡಿದ ಹಣವಾ? ಬ್ಲ್ಯಾಕ್ ಮನಿಯಾ? ಅಪ್ಪನ ಹೆಸ್ರಲ್ಲಿ ಮಗ ಲೂಟಿದ್ದಾ? ಇದನ್ನು ವಿಚಾರಿಸೋರು ಯಾರೂ ಇಲ್ವಾ?

ದುಡ್ಡೇ ದೊಡ್ಡಪ್ಪಾ….ಅಂದ..ನಮ್ಮಪ್ಪಾ….
ನಿಮಗೆ ಗೊತ್ತಿರಲಿ; ನಮ್ಮ ಘನ ಭಾರತದ ಗೃಹ ಸಚಿವ ಹಾಗೂ ಬಿಜೆಪಿಯ ರಾಷ್ಟ್ರಮಟ್ಟದ ಸೂತ್ರಧಾರ, ರಾಜಕೀಯ ಚದುರಂಗದಾಟದ ಶಕುನಿ, ಮೋದಿಯವರ ಬಲಗೈ ಬಂಟ ಅಮಿತ್ ಶಾ ಪುತ್ರ ಜೆಯ್ ಶಾ ಕಳೆದ ವರ್ಷದ ಇನ್‌ಕಮ್ ಅದೆಷ್ಟು ಗೊತ್ತಾ? ಬರೋಬ್ಬರಿ ನೂರಾ ಹತ್ತೊಂಬತ್ತು ಕೋಟಿ! ಅಬ್ಬಬ್ಬಾ! ಎಲ್ಲಿಂದ ಬಂತಣ್ಣ ಈ ದುಡ್ಡು? ನೀವೇನಾದರೂ ಒಂದೊಂದು ರೂಪಾ ಹಾಗೆ ಕಳ್ಸಿಕೊಟ್ರಾ? ಮತ್ಯಾರು ಕೋಟ್ರು? ನೀವೇ ಹೇಳಿ!

ನಿರೀಕ್ಷಿಸಿ: ನಮ್ ಶಾಸಕರಿಗೆ ನಾಚಿಕೆ, ಮಾನ, ಮರ್ಯಾದೆ ಇದ್ಯಾ..
ಕೊರೋನಾ ಬಂದಿದೆ. ಲಾಕ್‌ಡೌನ್ ಜ್ಯಾರಿಯಲ್ಲಿದೆ. ಇನ್ನೇನು ಸೀಲ್‌ಡೌನ್ ಸನಿಹಿಸುತ್ತಿದೆ. ಅತ್ತ ರೈತ ಬೆಳೆಸಿದ್ದು ಹೊಲದಲ್ಲೇ ಬಿದ್ದು ಸಾಯ್ತಿದೆ. ದಿನಗೂಲಿಯವರಿಗೆ ಎರಡ್ಹೊತ್ತು ಊಟಕ್ಕೂ ಗತಿಯಿಲ್ಲದಂತಾಗಿದೆ. ಈ ಟೈಮಲ್ಲಿ ಸ್ಯಾಲರಿಯಲ್ಲಿ ಮೂವತ್ತು ಪರ್ಸಂಟ್ ಬಿಟ್ಟುಕೊಡ್ತಾರಂತೆ. ಓ.. ಅದ್ಯಾರಪ್ಪಾ ಅಂತೀರಾ? ನಮ್ ಶಾಸಕರಾ?. ನಾಳೆ ಎಲೆಕ್ಷನ್ ಬಂದರೆ, ನಲ್ವತ್ ಐವತ್ ಕೋಟಿ ಖಾಲಿ ಮಾಡ್ತಾರೆ. ಈಗ ಕೊಡ್ಲಿಕ್ಕೆ ಅದೇನ್ ಸಂಕಟ?! ಅಸೆಂಬ್ಲಿ ಚುನಾವಣೆ ಟೈಮ್‌ಲ್ಲಿ ಮನೆ-ಮನೆಗೆ ಬಂದು ಅನ್ನ ಕೊಡ್ತೀವಿ, ನೀರು ಕೊಡ್ತೀವಿ, ಮನೆ-ಮಠ ಕೊಡಿಸ್ತಿವಿ, ಮಕ್‌ಳಿಗೆ ಫ್ರೀ ಎಜ್ಯುಕೇಷನ್ನು ಸಿಗೋ ಹಾಗೆ ಮಾಡ್ತೀವಿ, ಹೆಂಡ್ತಿಗೆ ಸೀರೆ, ಬಂಗಾರ… ಅಬ್ಬಬ್ಬಾ.. ಒಂದಾ? ಎರಡಾ? ನೂರಾರು ಪ್ರಾಮಿಸ್ ಕೊಡುವ ನಮ್ ಎಮ್ಮೆಲ್ಲೆಗಳು ಎಲ್ಲಿ ಸತ್ತಿದ್ದಾರೆ? ಎಲ್ಲೋಗಿ ಮಲಗಿದ್ದಾರೆ? ಅವರೇನು ಸಗಣಿ ತಿಂತಾರಾ? ನಾಚಿಕೆ-ಮಾನ-ಮರ್ಯಾದೆ ಒಂಚೂರೂ ಇಲ್ವಾ? ಥತ್..ಥೆರಿಕ್ಕೀ..ಕಾದಿರಿ..ಸ್ವಲ್ಪ ಟೈಮ್ ಕೊಡಿ. ಇವರು ಶಾಸಕರಲ್ಲ; ರಾಕ್ಷಸರು.. ಇದೇ ಅಂಕಣದಲ್ಲಿ ನಿಮ್ಮ ಮುಂದೆ ಮಾತನಾಡುತ್ತೇನೆ…..ವೈಟ್ & ಸೀ…
-ಎಸ್ಸೆನ್ ಕುಂಜಾಲ್

2 thoughts on “‘ಶಾ’ನಲ್ಲಿ 120 ಕೋಟಿ: ಅವಳಲ್ಲಿ ಏನೂ ಇಲ್ಲ!…

  1. All the Political leaders & their childrens have to Provide 30% of the income to PM Cares Fund of Kovid 19

    This type of news is really open the eyes of people

  2. ವಾಟ್ಸ್ ಆಪ್ ನಲ್ಲಿ ಬರುವ ಸುಳ್ಳು ಸುದ್ದಿ ಬರಿಯಲು ನಿಮಗೆ ನಾಚಿಕೆ ಅಗೋದಿಲ್ಲವೇ. ? ನ್ಯೂಜಿಲ್ಯಾಂಡ್ ಮತ್ತೆ ಭಾರತ ವನ್ನು compare ಮಾಡಿ ಬರೀತಿರಲ್ಲ ನಿಮ್ಮ ತಲೆ ಸರಿ ಇದಿಯ ?

Leave a Reply

Your email address will not be published. Required fields are marked *

error: Content is protected !!