ಕೊರೊನಾ: ಸ್ಯಾನಿಟೈಸರ್ ರಿಯಾಕ್ಷನ್! ಸುಟ್ಟ ಗಾಯ ಉಚಿತ!
(ಎಕ್ಸ್ಕ್ಲೂಸಿವ್ ರಿಪೋರ್ಟ್ – ಕುಂಜಾಲ್)
ನಿಮಗೆ ತಿಳಿದಿರುವಂಥದ್ದೇ; ಗ್ಲೌಸ್, ಗಾಗಲ್ಸ್, ಫೇಸ್ ಶೀಲ್ಡ್, ಮಾಸ್ಕ್, ಗೌನ್, ಸೂಟ್, ಲೆಗ್ ಆಂಡ್ ಶೂ ಕವರ್ಸ್ ಇವೆಲ್ಲಾ ಜೊತೆಗೂಡಿದ ಕೊರೊನಾ ಪರ್ಸನಲ್ ಪ್ರೊಟೆಕ್ಸನ್ ಕಿಟ್ ಪರ್ಚೇಸಿನಲ್ಲಿ ನಮ್ಮ ಹೆಲ್ತ್ ಮಿನಿಸ್ಟರ್ ಶ್ರೀರಾಮುಲು ಕೋಟ್ಯಂತರ ರೂಪಾಯಿ ಡೀಲ್ ಮಾಡಿದ್ದು ಇದೀಗ ಗುಟ್ಟಾಗಿ ಉಳಿದಿಲ್ಲ. ಇದನ್ನು ಬಹಿರಂಗಪಡಿಸಿದ್ದರ ಇಂಪ್ಯಾಕ್ಟ್ ಎಂಬಂತೆ ಅಷ್ಟೂ ಸಪ್ಲಾಯ್ಡ್ ಪಿಪಿಇ ಕಿಟ್ ಸ್ಟಾಕ್ನ್ನು ಸರಕಾರ ದಿಡೀರನೇ ಎಲ್ಲಾ ಹಾಸ್ಪಿಟಲ್ಲುಗಳಿಂದ ರಿಟರ್ನ್ ತರಿಸಿಕೊಂಡಿದೆ. ಇದು ನಮ್ಮ ವರದಿಗೆ ಸಂದ ಜಯವೆಂಬಂತೆ ಇವೆಲ್ಲಾ ಯಥಾವತ್ತು ನೈಜಾಂಶಗಳನ್ನು ಬರೆದು ಮುಗಿಸುತ್ತಿದ್ದಂತೆಯೇ, ಅತ್ತ ಬೆಂಗಳೂರಿನ ವಾಣಿವಿಲಾಸ ಹಾಸ್ಪಿಟಲ್ಲಿನಿಂದ ನರಳಿಕೆಯ ಕೂಗು ಕೇಳಿಬಂದಿದೆ. ಇದು ಬೇರ್ಯಾರ ಕೂಗಲ್ಲ. ನಮ್ಮ ಲೈಫ್ ಸೇವ್ ಮಾಡುವ ರೆಸ್ಪಾನ್ಸಿಬಿಲಿಟಿ ಹೊತ್ತಿರುವ ಡಾಕ್ಟರ್, ನರ್ಸಸ್, ಪ್ಯಾರಾಮೆಡಿಕಲ್ ವರ್ಕರ್ಸ್ಗಳ ನರಳಾಟ. ಇದಕ್ಕೇನಂತೀರಾ? ಒನ್ಸ್ ಅಗೈನ್, ಇದರ ಹಿಂದೆ ಕೇಳಿಬರುವ ಹೆಸರು, ಅದುವೇ ಶ್ರೀರಾಮುಲು! ಇದರ ಡೀಟೈಲ್ಸುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ; ಇವತ್ತಿನ ಅಂಕಣದಲ್ಲಿ.
ನಿಮಗೆ ಆಶ್ಚರ್ಯವೆನಿಸಬಹುದು; ನಿನ್ನೆಯಷ್ಟೇ ವಾಣಿವಿಲಾಸ ಹಾಸ್ಪಿಟಲ್ಲಿನಲ್ಲಿ ಡ್ಯೂಟಿ ಮಾಡಿದ ನರ್ಸ್ ಕಾಲ್ ಬಂದಾಗ ಅವಳು ಹೇಳಿದ್ದೆಲ್ಲಾ ಹಂಡ್ರೆಡ್ ಪರ್ಸಂಟ್ ನಿಜವೆನ್ನಿಸುವ ಎವಿಡೆನ್ಸುಗಳು ಒಂದೊಂದಾಗಿ ಕೈಸೇರುತ್ತಿವೆ. ಅವಳ ಬಾಯಲ್ಲಿ ಬಂದ ಒಂದು ಸೆಂಟೆನ್ಸು ಈ ಕ್ಷಣಕ್ಕೂ ಮನಸ್ಸನ್ನು ತಲ್ಲಣಗೊಳಿಸುತ್ತಿದೆ. ಗವರ್ನ್ಮೆಂಟ್ ಹಾಸ್ಪಿಟಲ್ಗೆ ಇಂಥ ದರಿದ್ರ ಸ್ಥಿತಿ ಬಂದುಬಿಟ್ಟಿದೆಯಾ ಅಂತ ನಿಮಗೂ ಗಾಬರಿಯಾಗುವುದರಲ್ಲಿ ಡೌಟುಗಳೇ ಇಲ್ಲ.
ಇನ್ನರ್ ಫಿಟ್ಟಿಂಗ್ಸ್ ತೆಗೆದು ಮೂಗಿಗೆ ಕಟ್ಟಿಬಿಟ್ಟಳಾ ನರ್ಸು!
ಮೊನ್ನೆ ವಾಣಿವಿಲಾಸ ಹಾಸ್ಪಿಟಲ್ಗೆ ಸಪ್ಲಾಯ್ ಆಗಿದ್ದ ಪೇಸ್ಮಾಸ್ಕ್ ಇದೆಯಲ್ವಾ… ಅದೆಷ್ಟು ಕೊಳಕಾಗಿತ್ತು ಅಂದರೆ ಅದನ್ನು ಕೈಗೆತ್ತಿಕೊಳ್ಳಲಿಕ್ಕೇನೇ ಅಸಾಧ್ಯವಾಗ್ತಿತ್ತು. ನಾನಂತೂ ಅದನ್ನು ರಿಸೀವ್ ಮಾಡ್ಲೇ ಇಲ್ಲ. ಯೂಸ್ ಮಾಡಲೂ ಇಲ್ಲ. ಮತ್ತೇನು ಮಾಡುವುದು ಅಂತ ಥಿಂಕ್ ಮಾಡ್ತಾ ಇದ್ದೆ. ಫೇಸ್ ಮಾಸ್ಕ್ ಇಲ್ಲದೇ ಡ್ಯೂಟಿ ಮಾಡುವುದೇ ರಿಸ್ಕೀ. ಗವರ್ನ್ಮೆಂಟ್ ಕೊಡ್ತಿರೋ ಮಾಸ್ಕ್ ಅಂತೂ ನೋಡುವಾಗಲೇ ಒಮಿಟಿಂಗ್ ಬಂದಂತಾಗ್ತಿದೆ. ಸಡನ್ನಾಗಿ ಒಂದು ಐಡಿಯಾ ಬಂತು. ನಾನಂತೂ ಲೇಟ್ ಮಾಡ್ಲಿಲ್ಲ. ಡೈರೆಕ್ಟಾಗಿ ಟಾಯ್ಲೆಟ್ಗೆ ಹೋದೆ. ಧರಿಸಿಕೊಂಡಿದ್ದ ಇನ್ನರ್ ಫಿಟ್ಟಿಂಗ್ಸ್ ತೆಗೆದೇ ಬಿಟ್ಟೆ. ಅದನ್ನೇ ಫೇಸ್ ಮಾಸ್ಕ್ ಥರ ಮೂಗಿಗೆ ಕಟ್ಕೊಂಡೆ. ಬಂದು ಡ್ಯೂಟಿ ಮಾಡಿದೆ.
ಬೆಕ್ಕಿಗೆ ಚೆಲ್ಲಾಟ; ಇಲಿಗೆ ಪ್ರಾಣ ಸಂಕಟ!
ಜಸ್ಟ್ ಇಮ್ಯಾಜಿನ್ ಮಾಡಿ ನೋಡಿ; ಆಗ ಅವಳ ಸಿಚ್ಯುವೇಶನ್ ಹೇಗಿದ್ದಿರಬಹುದು ಅಲ್ಲವೇ? ರೀಯಲ್ಲೀ ಬ್ಯಾಡ್! ಮೋಸ್ಟ್ಲೀ ಇಂಥ ಸ್ಥಿತಿಗಳಿಂದಲೇ, ಆ ನಕಲಿ ಪಿಪಿಇ ಕಿಟ್ ಅದರಲ್ಲೂ ಧರಿಸಿ ಒಂದು ಗಂಟೆಯಾದರೆ ಮೈತುಂಬಾ ಬೆವರು ಸುರಿಸುವ ಚೀಪ್ ರೇಟ್ ಗೌನ್, ಜಾತ್ರೆಗೆ ಹೋದಾಗ ನೀವೆಲ್ಲಾ ಮಕ್ಕಳಿಗೆ ಆಟಿಕೆಯಂತೆ ಕೊಡುವ ಗಾಗಲ್, ದುರ್ವಾಸನೆಯ ಕಳಪೆ ಫೇಸ್ ಮಾಸ್ಕ್, ಅದರಲ್ಲೂ ವಿಶೇಷವಾಗಿ ಸರಕಾರ ಸಪ್ಲಾಯ್ ಮಾಡುವ ಡುಪ್ಲಿಕೇಟ್ ಹ್ಯಾಂಡ್ ಸ್ಯಾನಿಟೈಜರ್ ಇತ್ಯಾದಿಗಳಿಂದಲೇ ಮೊನ್ನೆ ವಾಣಿವಿಲಾಸ ಹಾಸ್ಪಿಟಲಿನ ಡಾಕ್ಟರ್ಸ್, ನರ್ಸಸ್, ಪ್ಯಾರಾ ಮೆಡಿಕಲ್ ವರ್ಕರ್ಸ್ ಡೈರೆಕ್ಟಾಗಿ ಕಂಪೌಂಡಿನಾಚೆಗೆ ಬಂದು ನಿಂತು ಬಿಟ್ಟಿದ್ದರೇ.. ಎಂಬುದೇ ಎಲ್ಲರ ಬಾಯಲ್ಲಿ ಕೇಳಿಬರುತ್ತಿರುವ ಪಿಸುಮಾತು.
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ಹಂಗೆ!
ಫರ್ಗೆಟ್ ಇಟ್! ಸರ್ಕಾರಿ ಆಸ್ಪತ್ರೆಗಳಿಗೆ ಬಾಕ್ಸ್ಗಟ್ಟಲೆ ಸಪ್ಲಾಯ್ ಆಗುವ ಹ್ಯಾಂಡ್ ಸ್ಯಾನಿಟೈಜರ್ಗಳ ಕ್ವಾಲಿಟಿ ಬಗ್ಗೆ ಕೇಳೋ ಅವಶ್ಯಕತೆಯೇ ಇಲ್ಲ. ಇಟ್ಸ್ ಟೋಟಲ್ಲೀ ಔಟ್ ಆಫ್ ಕ್ವಾಲಿಟಿ. ಇದನ್ನೆಲ್ಲಾ ಕೇಳೋರ್ಯಾರು ಹೇಳಿ? ಅಟ್ಲೀಸ್ಟ್ ಸ್ಯಾನಿಟೈಸರ್ಗೆ ಇನ್ಗ್ರೀಡಿಯಂಟ್ಸ್ ಕರೆಕ್ಟಾಗಿ ಮಿಕ್ಸ್ ಮಾಡಿದ್ದಾರೆಯೇ ಎಂಬುದನ್ನು ಯಾರಾದರೂ ಟೆಸ್ಟ್ ಮಾಡಿದ್ದಾರಾ? ಇಂಪಾಸಿಬಲ್! ಡಬ್ಲ್ಯೂಎಚ್ಒ (ವಿಶ್ವ ಆರೋಗ್ಯ ಸಂಸ್ಥೆ) ಈಗಾಗಲೇ ಒಂದು ಲೀಟರಿನ ಸ್ಯಾನಿಟೈಜರ್ನಲ್ಲಿ 833ಮಿಲಿ ಇಥನಾಲ್,41ಮಿಲಿ ಹೈಡ್ರೋಜನ್ ಪೆರಾಕ್ಸೈಡ್, 14ಮಿಲಿ ಗ್ಲಿಸರಾಲ್, ಇನ್ನುಳಿದ 112ಮಿಲಿ ಡಿಸ್ಟಿಲ್ಡ್ ವಾಟರ್ ಇರಲೇಬೇಕು ಅಂತ ನಿಗದಿಪಡಿಸಿದೆ. ಆದರೆ ಈ ಸರ್ಕಾರ ಪರ್ಚೆಸ್ ಮಾಡ್ತಿರೋ ಸ್ಯಾನಿಟೈಜರ್ನಲ್ಲಿ ಇದ್ಯಾವುದೂ ನಿಗದಿತ ಪ್ರಮಾಣದಲ್ಲಿಲ್ಲ. ಜಸ್ಟ್ ಚೆಕ್ ಇಟ್ ಅಪ್!
ಮೂಗಿಗೆ ಘಮ್ಮಂತ ಆ ಸೆಂಟಿನ ಸ್ಮೆಲ್ಲು!
ನೀವೇ ನೋಡಿ; ಕೊರೊನಾ ಹರಡಲು ಇದೇ ಸಾಕಲ್ಲವೇ? ಈ ಲಿಕ್ವಿಡ್ ಮೂಗಿಗೆ ಘಮ್ಮಂತ ಸ್ಮೆಲ್ ಕೊಡುತ್ತೆ ಬಿಟ್ರೇ, ಹ್ಯಾಂಡ್ ಜರ್ಮ್ಸ್ ಬಿಲ್ಕುಲ್ ಕಿಲ್ ಮಾಡಲಾರದು ಎಂಬುದು ಬಹುತೇಕ ಫ್ರೂವ್ ಆದಂತಿದೆ. ಅದೆಲ್ಲಾ ಸತ್ತೋಗ್ಲಿ ಬಿಡಿ; ಜರ್ಮ್ಸ್ ಕಿಲ್ ಮಾಡದಿದ್ರೂ ಪರ್ವಾಗಿಲ್ಲ. ಬೇರೇನಾದ್ರೂ ಸೈಡ್ ಎಪೆಕ್ಟ್ ಇದ್ಯಾ ಅಂತ ಯಾರಲ್ಲಾದ್ರೂ ಕೇಳಿದ್ರಾ? ಸ್ವಲ್ಪ ಕೇಳಿ ನೋಡಿ; ಆ ಬಾಟಲಿಯೊಳಗಿನ ಇನ್ಸೈಡ್ ಸ್ಟೋರಿ ತಾನಾಗಿಯೇ ಪೊರೆ ಕಳಚಿಕೊಳ್ಳುತ್ತದೆ.
ಜರ್ಮ್ಸ್ ಸಾಯದಿದ್ರೂ.. ಸ್ಕಿನ್ ಸಾಯೋದಂತೂ ಗ್ಯಾರಂಟಿ!
ನಿಮ್ಗೂ ಡೌಟಿದೆಯಾ? ಗವರ್ನ್ಮೆಂಟ್ ಹಾಸ್ಪಿಟಲ್ಲಿಂದ ಸೀಕ್ರೆಟಾಗಿ ತರ್ಸಿ ನೋಡಿ; ನಾಲ್ಕೈದು ದಿನ ರೆಗ್ಯುಲರ್ ಆಗಿ ಕೈಗೆ ಹಾಕ್ಕೊಂಡು ನೋಡಿ; ಜರ್ಮ್ಸ್ ಸಾಯುವುದು ಹಾಗಿರಲಿ; ನಿಮ್ ಕೈ ಚರ್ಮಾನೇ ಸತ್ ಹೋಗಲು ಶುರುವಾಗುತ್ತೇ. ಮತ್ತೂ ಕಂಟಿನ್ಯೂ ಮಾಡ್ತೀರಾ? ಮತ್ತೆ ವಿಪರೀತ ಇಚ್ಚಿಂಗ್! ಕೆರೆತ! ತುರಿಕೆ! ಸಣ್ಣಗಿನ ಗುಳ್ಳೆಗಳು! ನವೆಗಳು! ಸುಟ್ಟ ಗಾಯಗಳು! ಮತ್ತೆ ಅದಕ್ಕೊಂದಿಷ್ಟು ಆಯಿಂಟ್ಮೆಂಟಾ… ಕ್ಯಾಪ್ಸೂಲಾ… ಬೇಕೇ ಬೇಕು ಕ್ಯೂರ್ ಮಾಡೋಕೆ. ಅಬ್ಬಬ್ಬಾ ಯಾಕ್ಹಂಗೆ ಮಾಡ್ತಾರೆ ಅಂದ್ಕೊಂಡಿದ್ದೀರಾ? ಮ್ಯಾನುಫ್ಯಾಕ್ಚರರ್ಸ್ಗೆ ಕರೆಕ್ಟಾಗಿ ತಯಾರಿ ಮಾಡಿಕೊಡ್ಲಿಕ್ಕೆ ಹೇಳಲು ನಮ್ ಮಿನಿಸ್ಟ್ರಿಗೆ ಅದೇನ್ ಸಂಕಟ? ಏನ್ ಧರ್ಮಕ್ಕೆ ಕೊಟ್ ಬಿಡ್ತಾರಾ? ಸರ್ಕಾರ ಪುಕ್ಸಟೆ ಸಪ್ಲಾಯ್ ಕೊಡಿ ಅಂತಿದ್ಯಾ?
ಯಾರದ್ದೋ ದುಡ್ಡು – ಯಲ್ಲಮ್ಮನ ಜಾತ್ರೆಯಂತೆ!
ನೋ! ನೋ! ನಿಮಗಿದು ಗೊತ್ತಿರಲಿ. ಸರ್ಕಾರಕ್ಕೆ ಸಪ್ಲಾಯ್ ಆಗ್ತಿರೋ ಈ ಹ್ಯಾಂಡ್ ಸ್ಯಾನಿಟೈಸರ್ಸ್ಗಳ ಹಿಂದೆ ಭ್ರಷ್ಟಾಚಾರ ಅಬ್ಬರಿಸಿ ಕುಳಿತಿದೆ. ಇದು ಕೊರೊನಾಕ್ಕಿಂತಲೂ ಭಯಾನಕ. ಅದಕ್ಕಿಂತಲೂ ಹೆಚ್ಚು ಮಾರಕ. ಅದಕ್ಕೇ ನಿನ್ನೆ ಇದೇ ಅಂಕಣದಲ್ಲಿ ಒಂದು ಮಾತು ಹೇಳಿದ್ದೆ. ಅದು ಬಿಜೆಪಿ-ಕಾಂಗ್ರೆಸ್-ಜೆಡಿಎಸ್-ಕಮ್ಯೂನಿಸ್ಟ್ -ಶಿವಸೇನಾ-ಆಪ್-ಎನ್ಸಿಪಿ-ಬಹುಜನ- ತೃಣಮೂಲ ಯಾವ ಪಾರ್ಟಿಯಾದರೂ ಇರಲಿ; ಒಮ್ಮೆ ರೂಲಿಂಗ್ಗೆ ಬಂತಾ? ಮತ್ತೆ ದುಡ್ಡೇ ದೊಡ್ಡಪ್ಪ! ಕೊರೊನಾ ಬರಲಿ; ಹಂದಿ ಜ್ವರವಿರಲಿ; ಮಂಕಿ ಡಿಸೀಸ್ ಆಗಿರಲಿ, ಪ್ಲೇಗ್ ಇತ್ಯಾದಿ ಯಾವುದೇ ವ್ಯಾದಿಗಳಿರಲಿ, ರೂಲಿಂಗ್ ಗವರ್ನ್ಮೆಂಟಿಗೆ ರಸದೌತಣ! ಭೂರೀ ಭೋಜನ! ಖುಷಿಯೋ ಖುಷಿ! ಹಬ್ಬದ ಸಡಗರ!
ಹಿರೀ ಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ!
ಈ ಕೊರೊನಾ ಭಯ ಯಾರಿಗೆ ಹೇಳಿ? ನಮಗೂ- ನಿಮಗೂ ಬಿಟ್ಟರೆ ನಮ್ಮನ್ನಾಳುವವವರು ತೀರಾ ಸೇಫ್! ಇದಕ್ಕೊಂದು ಸ್ಮಾಲ್ ಫ್ರೂಪ್ ಇಲ್ಲಿದೆ. ಇವತ್ತಿನ ಅಂಕಣದಲ್ಲಿ ಪ್ರಿಂಟ್ ಆಗಿರುವ ಮಹಿಳೆಯನ್ನು ನೀವು ಐಡೆಂಟಿಫೈ ಮಾಡಲು ಸಾಧ್ಯವೇ? ಹೈಲೀ ಇಂಪಾಸಿಬಲ್! ಆದ್ರೇ ವಿಧಾನಸೌಧಕ್ಕೆ ಹೋದವರಿಗೆ ಇವಳು ಕಾಣಸಿಗುತ್ತಾಳೆ. ಅದೂ ನಮ್ಮ ಹೆಲ್ತ್ ಮಿನಿಸ್ಟರ್ ಶ್ರೀರಾಮುಲು ಎಂಬ ಸಚ್ಚಾರಿತ್ರ್ಯವಂತ ಸಚಿವನ ಮಗ್ಗುಲಲ್ಲೇ ಇರ್ತಾಳೆ. ಹಾಗಾದ್ರೆ ಯಾರಿವಳು? ಇವಳೇ ಘನಂದಾರಿ ಅಂಬಿಕಾ! ಕೆಲವರು ಒರಾಯನ್ ಮಾಲ್ ಅಂಬಿಕಾ ಅಂದರೆ, ಇನ್ನು ಕೆಲವರು ಅಂಬಿಕಾ ಮೇಡಂ ಅಂತಾರೆ. ಇನ್ನು ಕೆಲವರು ಅಂಬಿಕಾಮ್ಮ ಅನ್ನುತ್ತಾ ಸಾಷ್ಟಾಂಗ ಬೀಳುತ್ತಾರೆ. ಆದರೆ ಮಿಸೆಸ್ ಅಂಬಿಕಾ ಅಂತ ಯಾರೂ ಹೇಳಿದ್ದು ಕೇಳಿದಂತಿಲ್ಲ. ಅಂಬಿಕಾ ಶ್ರೀರಾಮುಲು ಅಂತ ಜತೆಗೂಡಿಸಿ ಇವೆರಡು ಪದಗಳನ್ನು ಹೇಳುವ ಧೈರ್ಯವಂತೂ ಯಾರಿಗೂ ಇಲ್ಲ.
ಲಾಸ್ಟ್ ಸಿಪ್!
ಹಾಗಾದರೆ ಘನಂದಾರಿ ಅಂಬಿಕಾ ಯಾರಿವಳು? ಆ ಪೋಲಿಸ್ ಜಯರಾಮಣ್ಣ ಯಾರು? ಮೊನ್ನೆಯಷ್ಟೇ ಇದೇ ಅಂಕಣದಲ್ಲಿ ಪಿಪಿಇ ಕಿಟ್ ಬಗ್ಗೆ ನೇರಾ ನೇರಾ ಬರೆದಾಗ ಅದರ ಅಷ್ಟೂ ಸ್ಟಾಕ್ ರಿಟರ್ನ್ ಮಾಡಲು ಸರ್ಕ್ಯೂಲರ್ ಹೊರಟದಾದರೂ ಹೇಗೆ? ಆ ವರದಿಯಲ್ಲಿ ಅಂಥದ್ದೇನಾದರೂ ಚಮತ್ಕಾರವಿತ್ತಾ? ಇವೆಲ್ಲದರಲ್ಲಿ ಫಿಫ್ಟಿ ಪರ್ಸಂಟ್ ಲಂಚ ವರ್ಕೌಟ್ ಆಗಿರುವುದು ನಿಜವಾ? ನೀವು ಕೈಗೆ ಒರೆಸಿಕೊಳ್ಳುವ ಹ್ಯಾಂಡ್ ಸ್ಯಾನಿಟೈಸರ್ಗೂ ಈ ಅಂಬಿಕಾಳಿಗೂ ಅದೆಂಥಾ ಸಂಬಂಧ? ಇವೆಲ್ಲಾ ಸೆನ್ಸೇಶನಲ್ ಇನ್ವೆಸ್ಟಿಗೇಶನ್ ರಿಯಾಲಿಟಿಯನ್ನ ಕೆಲವೇ ತಾಸುಗಳಲ್ಲಿ ನಿಮ್ಮ ಮುಂದಿಡುತ್ತೇನೆ. – -ಕುಂಜಾಲ್
ನಿಮ್ಮ ಅನಿಸಿಕೆ, ಅಭಿಪ್ರಾಯಗಳಿದ್ದಲ್ಲಿ ಇ-ಮೇಲ್ “[email protected]” ಗೆ ಕಳುಹಿಸಬಹುದು ಅಥವಾ ದೂರವಾಣಿ 9845070166 ಗೆ ಕರೆ ಮಾಡಬಹುದು
Hello Mr..
It’s not a sanitizer burnt image of hand which you shows..
It’s a gloves powder which accomodated in gaps., The snap taken before wash of hands.. Similar sanitizer we are using daily 40-50 times since 2 months to our hands and entire our Apartment using the same.. No one including small child got complaint., We already purchased and consumed more than 1,000 ltr hand sanitizer of Sri Sai Priya the photo which yy posted, and Plz give me the no of that fellow whose hand burned by this sanitizer.. I will recover 5 lack by company and hand it over to the person who infected..
Don’t write anything you want. Behave little responsibly..