ದಲಿತರಿಗೆ ಮೀಸಲಿಟ್ಟ ಭೂಮಿಯಲ್ಲಿ ಅಕ್ರಮ ಶೇಂದಿ ಅಂಗಡಿ ನಿರ್ಮಾಣ
ಹಿರಿಯಡ್ಕ: ಇಲ್ಲಿನ ಬೊಮ್ಮರಬೆಟ್ಟು ಗ್ರಾಮದ ಉಡುಪಿ-ಕಾರ್ಕಳ ಹೆದ್ದಾರಿ ಬದಿಯಲ್ಲಿ ದಿನೇಶ ಪೂಜಾರಿ ಸ್ಥಳೀಯರ ವಿರೋಧದ ನಡುವೆಯೂ ಅಕ್ರಮವಾಗಿ ಗೂಡಂಗಡಿ ನಿರ್ಮಿಸಿ ಅದರಲ್ಲಿ ಶೇಂದಿ ಮಾರಾಟ ಮಾಡುತ್ತಿದ್ದು ,ಇಲ್ಲಿಯೇ ಹತ್ತಿರದಲ್ಲಿ ಪ್ರಾಥಮಿಕ ಶಾಲೆ ಕೂಡ ಇರುವುದರಿಂದ ಶಾಲಾ ಮಕ್ಕಳಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗುತ್ತದೆಂದು ಉಡುಪಿ ತಹಶೀಲ್ದಾರರಿಗೆ ದೂರು ನೀಡಲಾಗಿದೆ.
ಈ ಅನಧಿಕೃತ ಗೂಡಂಗಡಿ ಬಗ್ಗೆ ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದ ದಲಿತ ಕುಂದು ಕೊರತೆ ಸಭೆಯಲ್ಲೂ ಚರ್ಚೆ ಆಗಿತ್ತು. ಅಕ್ರಮವಾಗಿ ನೀಡಿರುವ ಇದನ್ನು ತೆರವುಗೊಳಿಸುವಂತೆಯೂ ಸಭೆಯಲ್ಲಿ ಸೂಚಿಸಿದರೂ ಪಂಚಾಯತ್ ಯಾವುದೇ ಕ್ರಮವನ್ನು ಕೈಗೊಂಡಿಲ್ಲವೆಂದು ಇಲ್ಲಿನ ನಿವಾಸಿ ಸುಂದರ ದೂರಿದ್ದಾರೆ.
ಹೆದ್ದಾರಿಯ ಅಂಚಿನಲ್ಲೇ ಈ ಅಕ್ರಮ ಗುಡಂಗಡಿ ನಿರ್ಮಿಸಿರುವುದರಿಂದ ಅಪಘಾತವಾಗುವ ಸಾಧ್ಯತೆಯೂ ಇದೆಂದು ದೂರಲಾಗಿದೆ.ಬೊಮ್ಮರಬೆಟ್ಟು ಪಂಚಾಯತ್ ಕೆಲವು ಸದಸ್ಯರು ಕೂಡ ಈ ಅಕ್ರಮ ಗೂಡಂಗಡಿಗೆ ಬೆಂಬಲ ವ್ಯಕ್ತಪಡಿಸಿದ ಪರಿಣಾಮ ದಲಿತರಿಗೆ ಮೀಸಲಿಟ್ಟ ಭೂಮಿಯಲ್ಲಿ ಅಕ್ರಮ ಕಟ್ಟಡ ನಿರ್ಮಿಸಲಾಗಿದೆಂದು ಆರೋಪಿಸಲಾಗಿದೆ.