ಸಿದ್ದರಾಮಯ್ಯರಿಗೆ ತಲೆ ಸರಿ ಇಲ್ಲ:ಆರ್ .ಆಶೋಕ್

ಬಂಟ್ವಾಳ:  “ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಅವರ ವಿರುದ್ಧ ಮಾತನಾಡುವ ಸಿದ್ದರಾಮಯ್ಯ ಅವರಿಗೆ ತಲೆ ಸರಿಯಲ್ಲ” ಎಂದು ಕಂದಾಯ ಸಚಿವ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಅವರು ಸೋಮವಾರ ಬಿ.ಸಿ.ರೋಡಿನ  ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ  ಸುದ್ದಿಗಾರರೊಂದಿಗೆ   ಮಾತನಾಡಿದ ಅವರು,ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ ವೀರ ಸಾರ್ವಕರ್ ವಿರುದ್ಧ ಮಾತನಾಡುವ ಸಿದ್ದರಾಮಯ್ಯ ಅವರ ನಾಲಗೆ ಹಿಡಿತ ಇರಲಿ. ಸಿದ್ದರಾಮಯ್ಯ ಅವರು ಒಂದು ದಿನ ಅಂಡಮಾನ್ ಜೈಲಿನಲ್ಲಿ ಇದ್ದು  ನೋಡಿ ಬರಲಿ ಎಂದರು. ಸಿದ್ದರಾಮಯ್ಯರವರು ತಮ್ಮ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ,ರಾಹುಲ್ ಗಾಂಧಿಯವರನ್ನು ಮೆಚ್ಚಿಸುವುದಕ್ಕಾಗಿ  ಸ್ವಾತಂತ್ರ್ಯ ಹೋರಾಟಗಾರರ ಕುರಿತು ಈ ರೀತಿ ಮಾತನಾಡಿ ತಮ್ಮ ಕೀಳು ಅಭಿರುಚಿಯನ್ನು ತೋರಿದ್ದಾರೆ ಎಂದ ಅವರು ಈ  ರೀತಿ ಉಡಾಫೆ ಮಾತನಾಡುವವರಿಗೆ  ಜನರೇ ಬಹಿಷ್ಕಾರ ಹಾಕಬೇಕು ಆಗ ಇವರಿಗೆ ಬುದ್ದಿ ಬರಬಹುದು ಎಂದು ಸಚಿವರು ಕಿಡಿಕಾರಿದರು.                                  

ನಮ್ಮದು ಆ್ಯಕ್ಟಿವ್ ಗವನ್೯ ಮೆಂಟ್ ;  ಮುಂದಿನ ಮೂರುವರೆ ವರ್ಷ ಯಡಿಯೂರಪ್ಪರವರೇ ಮುಖ್ಯಮಂತ್ರಿಯಾಗಿರುತ್ತಾರೆ ಇದರಲ್ಲಿ ಯಾವುದೇ ಅನುಮಾನ ಬೇಡ,ನೆರೆ ಪರಿಹಾರ ಕಾರ್ಯದಲ್ಲು ಸರಕಾರ  ಯಶಸ್ವಿ ರೀತಿಯಲ್ಲಿ ನಿರ್ವಹಿಸಿದ್ದು,ಸಿದ್ದರಾಮಯ್ಯರಂತೆ ಸ್ಲೀಪಿಂಗ್ ಸರಕಾರವಲ್ಲ ,ನಮ್ಮದು  ಆ್ಯಕ್ಟಿವ್ ಸರಕಾರವಾಗಿದೆ ಎಂದರು.ಸೋಮವಾರ ಮತ್ತೆ ರಾಮನಗರ ಸಹಿತ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಬಂದಿದ್ದು,ಹಲವು ಮನೆಗಳಿಗೆ ಹಾನಿಯಾಗಿರುವ ಬಗ್ಗೆಯು ಮಾಹಿತಿ ಬಂದಿದೆ.ತಕ್ಷಣ ಆಯಾಯ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಸಂತ್ರಸ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದ ಸಚಿವರು ತನ್ನ ಕರ್ತವ್ಯವೆಂದು ಅರಿತುಕೊಂಡು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಸಂಜೀವ ಮಠಂದೂರು,ಜಿಪಂಸದಸ್ಯ ತುಂಗಪ್ಪ ಬಂಗೇರ ಮತ್ತಿತರರು ಹಾಜರಿದ್ದರು. 

Leave a Reply

Your email address will not be published. Required fields are marked *

error: Content is protected !!