ಉಡುಪಿಯನ್ನು ಬಿಹಾರ ಅಥವಾ ಉತ್ತರ ಪ್ರದೇಶ ಮಾಡಲು ಕಾಂಗ್ರೆಸ್ ಬಿಡಲ್ಲ- ರಮೇಶ್ ಕಾಂಚನ್

ಉಡುಪಿ ನಗರ ಸಭಾ ಕಛೇರಿಯಲ್ಲಿ ಕರ್ತವ್ಯನಿರತ ಸರಕಾರಿ ಅಧಿಕಾರಿಯ ಮೇಲೆ ನಿನ್ನೆ ಹಲ್ಲೆ ಮಾಡಿದ ನಗರ ಸಭಾ ಸದಸ್ಯ ಯೋಗೀಶ್ ಸಾಲ್ಯಾನ್ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೋಳ್ಳುವಂತೆ ನಗರಸಭೆಯ ಕಾಂಗ್ರೇಸ್ ಸದಸ್ಯ ರಮೇಶ್ ಕಾಂಚನ್ ಅಗ್ರಹಿಸಿದ್ದಾರೆ.

“ನಗರ ಸಭಾ ಸದಸ್ಯ ಯೋಗೀಶ್ ಸಾಲ್ಯಾನ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದು ಇದೇ ಮೊದಲಲ್ಲ, ಕಳೆದ 15 ದಿನಗಳ ಹಿಂದೆ ಮಲ್ಪೆ ಮೆಸ್ಕಾಂ ಅಧಿಕಾರಿಗೆ ಹಲ್ಲೆ, ಭಾರತ್ ಬಂದ್ ಸಂದರ್ಭ ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕೇಸು ಈತನ ಮೇಲೆ ಇದೆ. ಒಂದೆಡೆ ಸಂಸ್ಕೃತಿ, ಹಿರಿಯರಿಗೆ ಗೌರವ ಪಾಠ ಹೇಳಿಕೊಡುವ ಬಿಜೆಪಿ, ಇನ್ನೂ ಚುನಾಯಿತ ಪ್ರತಿನಿಧಿಯಾಗಿ ಅಧಿಕಾರ ಸ್ವೀಕರಿಸದೆ, ಸರ್ಕಾರಿ ಅಧಿಕಾರಿಗಳ ಕಛೇರಿಗೆ ನುಗ್ಗಿ ದಾಂಧಲೆ ನಡೆಸಿ, ಹಲ್ಲೆ ನಡೆಸುತ್ತಾರೆ, ಇನ್ನೂ ಅಧಿಕಾರ ಸ್ವೀಕರಿಸದ ಬಿಜೆಪಿ ಅಡಳಿತ ಸದಸ್ಯರು ಈ ರೀತಿಯ ವರ್ತನೆ ಮಾಡಿದರೆ, ಅಧಿಕಾರ ಸಿಕ್ಕಿದ ಮೇಲೆ ಯಾವ ರೀತಿ ವರ್ತಿಸುತ್ತಾರೆ” ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯ ರಮೇಶ್ ಕಾಂಚನ್ ಕಳವಳ ವ್ಯಕ್ತಪಡಿಸಿದ್ದಾರೆ.

ವಡಬಾಂಡೇಶ್ವರ ವಾರ್ಡನ ನಗರಸಭಾ ಸದಸ್ಯ ಯೋಗೀಶ್ ಸಾಲ್ಯನ್, ತನ್ನ ವಾರ್ಡನಲ್ಲಿ ಒಳಚರಂಡಿ ದುರಸ್ತಿ ಬಗ್ಗೆ ತಗಾದೆ ತೆಗೆದು, ನಗರಸಭೆಯ ಅರೋಗ್ಯಧಿಕಾರಿಯ ಮೇಲೆ ಹಲ್ಲೆಯನ್ನ ನಡೆಸಿದ್ದರು. ಅಧಿಕಾರಿಯ ಮೇಲೆ ನಡೆದ ಹಲ್ಲೆಯನ್ನು ಕಾಂಗ್ರೆಸ್ ನಗರಸಭಾ ಸದಸ್ಯರು ತೀವ್ರವಾಗಿ ಖಂಡಿಸಿದ್ದು, ಪ್ರಸ್ತುತ ನಗರಸಭೆಯ ಅಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಹಲ್ಲೆ ನಡೆಸಿದ ನಗರಸಭಾ ಸದಸ್ಯ ಯೋಗಿಶ್ ಸಾಲ್ಯಾನ ವಿರುದ್ದ ಶಿಸ್ತುಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣ ಈತನನ್ನು ಬಂಧಿಸಲು ಜಿಲ್ಲಾ ಎಸ್.ಪಿ ಗೆ ನಿರ್ದೇಶನ ನೀಡಬೇಕು ಎಂದರು.

ಉಡುಪಿಯನ್ನು ಇನ್ನೊಂದು ಬಿಹಾರ ಅಥವಾ ಉತ್ತರ ಪ್ರದೇಶ ಮಾಡಲು ವಿಪಕ್ಷವಾದ ಕಾಂಗ್ರೆಸ್ ಬಿಡಲ್ಲ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೊಂದಾಣಿಕೆಯಲ್ಲಿ ಕೆಲಸ ಮಾಡಿದರೆ ನಗರದ ಅಭಿವೃದ್ದಿ ಸಾಧ್ಯಾ , ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಘಟನೆಯ ಬಗ್ಗೆ ಸಾರ್ವಜನಿಕರಲ್ಲಿ ಕ್ಷಮೆ ಕೇಳುತ್ತಾರೆ, ಅದರೆ ಅವರು ಮೊದಲು ತಪಿತಸ್ಥ, ಸರಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಯೋಗೀಶ್ ಸಾಲ್ಯಾನನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದರು. ಕೇವಲ ಸಾರ್ವಜನಿಕರಲ್ಲಿ ಕ್ಷಮೆ ಕೇಳಿದರೆ ಸಂತ್ರಸ್ಥ ಸರಕಾರಿ ಅಧಿಕಾರಿಗೆ ನ್ಯಾಯ ಸಿಗುವುದಿಲ್ಲ , ಬದಲಾಗಿ ತಪಿತ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡರೆ ಮಾತ್ರ ಅಧಿಕಾರಿಗೆ ನ್ಯಾಯ ಕೊಟ್ಟಂತಾಗುತ್ತದೆ ಎಂದು ರಮೇಶ್ ಕಾಂಚನ್ ಪತ್ರಿಕಾ ಪ್ರಕಟನೆಯಲ್ಲಿ ಅಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!