ಕೃಷಿಗಾಗಿ ಒಂದಾಗುವ ಮಟ್ಟುವಿನ “ಚಿನ್ನಾರ್ ಅಂಚನ್” ಕುಟುಂಬ
ಕಾಲ ಬದಲಾದಂತೆ ಅದಕ್ಕೆ ಅನುಗುಣವಾಗಿ ಮನುಷ್ಯನು ಬದಲಾಗುತ್ತಿದ್ದಾನೆ, ಹೌದು ಇತ್ತೀಚಿನ ದಿನಗಳಲ್ಲಿ ಕೃಷಿಯಿಂದ ದೂರ ಸರಿದು ದೂರದ ಊರಿಗೆ ಕೆಲಸ ಅರಸುತ್ತಾ ಹೋಗುವವರ ಸಂಖ್ಯೆ ಹೆಚ್ಚಾಗಿದೆ.
ಹಾಗಾಗಿ ಕೃಷಿಗೆ ಜನರನ್ನು ಹೊಂದಿಸುವುದೇ ರೈತರಿಗೆ ದೊಡ್ಡ ಸವಾಲು. ಆದರೆ ಈ ವಿಷಯದಲ್ಲಿ ಇಲ್ಲೊಂದು ಕುಟುಂಬ ಮಾತ್ರ ವಿಭಿನ್ನ , ಅದುವೇ ಕಟಪಾಡಿಯ ಮಟ್ಟುವಿನಲ್ಲಿರುವ ಚಿನ್ನಾರ್ ಅಂಚನ್ ಕುಟುಂಬ.
ಇಲ್ಲಿ ಕೃಷಿಗಾಗಿ ಕೂಲಿಯಾಲುಗಳ ತೊಂದರೇ ಇಲ್ಲ. ಯಾಕೆಂದ್ರೆ ಬೇಸಾಯದ ಕಾರ್ಯಕ್ಕಾಗಿ ಕುಟುಂಬದ ಎಲ್ಲಾ ಸದಸ್ಯರು ಒಂದುಗೂಡುತ್ತಾರೆ. ಉದ್ಯೋಗ ನಿಮಿತ್ತ ಬೇರೆ ಬೇರೆ ಊರಿನಲ್ಲಿ ವಾಸವಿದ್ರೂ ಕುಟುಂಬದ ಕೃಷಿಗಾಗಿ ಆ ದಿನ ರಜೆ. ಯಾರೇ ಯಾವುದೇ ಕೆಲಸದಲ್ಲಿ ಬ್ಯೂಸಿ ಇದ್ರೂ ಮನೆಯ ಕೃಷಿ ಕೆಲಸಕ್ಕಾಗಿ ಎಲ್ಲರೂ ಫ್ರೀ.
ಈ ಕುಟುಂಬದಲ್ಲಿ ಐಟಿ ಫೀಲ್ಡ್, ಬ್ಯೂಟಿಶಿಯನ್ ಹೀಗೆ ಉತ್ತಮ ಉದ್ಯೋಗದಲ್ಲಿ ಇದ್ದರೂ ಕೂಡ ಕೃಷಿಯತ್ತ ಒಲವು ಮಾತ್ರ ಕಡಿಮೆಯಾಗಿಲ್ಲ. ಹೈಫೈ ಲೈಫ್ ಇದ್ರೂ ಕೈ ಕೆಸರಾದರೆ ಬಾಯಿ ಮೊಸರು ಅನ್ನೋದನ್ನ ಮರೆತಿಲ್ಲ.
ಹಿರಿಯರಿಂದ ಕಿರಿಯರವರೆಗಿನ ಎಲ್ಲರೂ ಜೊತೆ ಸೇರಿ ಗದ್ದೆಯ ಕೆಸರಿಗೆ ಕೈಯೊಡ್ಡಿ ಭತ್ತ ಕೃಷಿ ಮಾಡಿದ ಖುಷಿ ಚಿನ್ನಾರ್ ಅಂಚನ್ ಕುಟುಂಬದ್ದು. ಒಟ್ಟಾರೆ ಮಾಡರ್ನ್ ಲೈಫಿಗೆ ಮನಸೋತ ಮಂದಿ ಈಗ ಕೃಷಿಯತ್ತ ಆಕರ್ಷಿಸುತ್ತಿದ್ದಾರೆ.
ಇನ್ನೂ ಮುಂದಿನ ದಿನಗಳಲ್ಲಿ ಕೃಷಿ ಭೂಮಿಯಿರುವವರು, ಕೃಷಿ ಮಾಡಲು ಕೃಷಿ ಕಾರ್ಮಿಕರ ಸಮಸ್ಯೆಯಿಂದ , ಭೂಮಿಯನ್ನು ಪಾಳು ಬಿಡದೇ ಮನೆಯ ಸದಸ್ಯರೆಲ್ಲಾ ಒಂದಾಗಿ ಕೃಷಿ ಮಾಡಲು ಚಿನ್ನಾರ್ ಅಂಚನ್ ಕುಟುಂಬ ಮಾದರಿಯಾಗಲಿ.