ಕ್ರಿಶ್ಚಿಯನ್ನರಿಗೆ ಕ್ಯಾಂಡಲ್ಲು, ಮುಸ್ಲಿಮರಿಗೆ ಟಾರ್ಚು-ಇದು ಮೋದೀಜಿಯ ಪಾಲಿಟಿಕಲ್ ಗಿಮಿಕ್ಕಾ…..

ನಿಮಗೆ ಗೊತ್ತೇ ಇರುತ್ತೆ: ‘ಈ ಟೈಮಲ್ಲಿ ಇದು ಬೇಕಿತ್ತಾ?’ ಎಂಬ ಪ್ರಶ್ನೆಗಳು ಚಿಲ್ಲರೆ ಹಾಸ್ಯದಂತೆ ಸೋಶಿಯಲ್ ಮೀಡಿಯಾ ತುಂಬಾ ಇದೀಗ ಹರಿದಾಡುತ್ತಿವೆ. ಅಸಲಿಗೆ ಈ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅದೆಷ್ಟೋ ಪ್ರಶ್ನೆಗಳಿಗೆ ನಮ್ಮ ಮೋದಿಯಲ್ಲಿ ಉತ್ತರಗಳೇ ಇರುವುದಿಲ್ಲ. ಆದರೆ ಇಂಥ ಪ್ರಶ್ನೆಗಳ ಮೂಲಕ ಅನೇಕ ಜೀವಗಳಿಗೆ ತಮ್ಮ ನೋವು ಹೇಳಿಕೊಳ್ಳುವ ಅನಿವಾರ್ಯತೆ ಇರುತ್ತದೆ ಎಂಬುದು ‘ನಮೋ’ ರಿಗೆ ಗೊತ್ತಿರುವುದಿಲ್ಲ. ಕೆಲವರಿಗಂತೂ ತಡೆಯಲಾಗದ ಬಾಧೆ ಬಿಚ್ಟಿಡುವ ಏಕೈಕ ಮಾರ್ಗೋಪಾಯವೇ ಸೋಶಿಯಲ್ ಮಿಡಿಯಾ. ಹಾಗೆ ಹೇಳಿಕೊಂಡರೆ ಏನೋ ಸಮಾಧಾನ. ಅಲ್ಲಿಗೆ ಅರ್ಧ ನೋವು ಕರಗಿದಂತೆಯೇ. ಹೀಗೆ ಶೇರ್ ಮಾಡುವುದರರಿಂದ ಅವರಿಗೆ ಸಮಾಧಾನವಾಗುತ್ತದೆ; ಸಂತೋಷವೂ ಆಗದಿರದು. ಹಾಗಂತ ನಮ್ಮ ಮೋದಿಜಿಯನ್ನ ಅಷ್ಟೊಂದು ಸುಲಭವಾಗಿ ಕ್ಯಾಲ್‌ಕುಲೇಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಕೇವಲ ಭಾರತೀಯರನ್ನಷ್ಟೇ ಅಲ್ಲ; ವಿಶ್ವವನ್ನೇ ಗೆಲ್ಲುವ ಹಂಬಲದಲ್ಲಿರುವ ‘ನಮೋ’ ಅನೇಕ ಜಾತಿ, ಪ್ರಾಂತ್ಯ, ಭಾಷೆಗಳ ವಿಭಿನ್ನತೆಗಳಲ್ಲಿ ಅನೇಕತೆಯಲ್ಲಿ ಏಕತೆಯನ್ನು ಬಿಂಬಿಸುವ ಲೆಕ್ಕಾಚಾರ ಹಾಕಿದ್ದಾರೆ ಎಂಬುದಕ್ಕೆ ಸಣ್ಣ ನಿದರ್ಶನವನ್ನು ನಿಮ್ಮ ಮುಂದಿಡುತ್ತಿದ್ದೇನೆ.


ಕಾಮೆಂಟ್ಸುಗಳು ಏನೇ ಇರಲಿ. ಸರಿ ತಪ್ಪು ಎಂಬ ಪ್ರಕಿಯ್ರೆಗಳೇನೇ ಇರಲಿ. ಇವೆಲ್ಲವನ್ನೂ ಮೀರಿಸುವಂಥ ಲೆಕ್ಕಾಚಾರವನ್ನು ಮೋದಿ ಹಾಕಿದ್ದಾರೆಂದರೆ ನೀವು ನಂಬ್ತೀರಾ? ಇಲ್ಲಿದೆ ನೋಡಿ; ಮೋದಿಯ ಮೋಡಿತಂತ್ರಗಾರಿಕೆ. ಹಿಂದೂಗಳಿಗೆ ದೀಪ, ಕ್ರಿಶ್ಚಿಯನ್ನರಿಗೆ ಕ್ಯಾಂಡಲ್ಲು, ಮುಸಲ್ಮಾನರಿಗೆಟಾರ್ಚು! ಹೇಗಿದೆ ಭಾವನಾತ್ಮಕತಂತ್ರಗಾರಿಕೆ. ಯಾರೂ ನೋ ಅನ್ನುವಂತಿಲ್ಲ. ಜ್ಯೋತಿ ಬೆಳಗಿಸುವ ಸಂಪ್ರದಾಯ ‘ ನಮ್ಮದ್ದಲ್ಲ’ ಅನ್ನುವವರ ಕೈಗೆ ಕ್ಯಾಂಡಲ್ಲು ಕೊಟ್ಟಿದ್ದಾರೆ. ಅದಕ್ಕೂ’ನಾವು ಸಿದ್ಧರಿಲ್ಲ’ಅನ್ನುವವರಿಗೆ ಮನೇಲಿ ಎಮರ್ಜೆನ್ಸಿಗಂತ ಟಾರ್ಚು ಇರುತ್ತಲ್ಲಾ…. ಅದನ್ನೇ ಸ್ವಿಚ್ಚಾನ್ ಮಾಡಿ ಅಂದಿದ್ದಾರೆ ನಮ್ಮ ಪ್ರಧಾನಿ. ನೀವು ಅಪಾರ್ಟ್‌ಮೆಂಟಲ್ಲಿದ್ದೀರಾ? ಐಷಾರಾಮಿ ಲೇಜೌಟಲ್ಲಿದ್ದೀರಾ? ನಿಮ್ಮಲ್ಲಿ ಟಾರ್ಚೂ ಇಲ್ಲವಾ? ಪರ್‍ವಾಗಿಲ್ಲ; ಮೊಬೈಲಿನ ಲೈಟನ್ನೇ ಪ್ಲಾಷ್ ಮಾಡಿ ಬಿಡಿ – ವಾಟ್ ಎ ಅಮೇಜಿಂಗ್ ಐಡಿಯಾ{ ಮೋದೀಜಿ ಇಷ್ಟೆಲ್ಲಾ ಹೇಳಿದ ನಂತರ ಆತ ಕಾಂಗ್ರೆಸ್ಸಿಗಗಿರಲಿ; ಜೆಡಿಎಸ್ಸಿನವರಾಗಿರಲಿ; ಕಮ್ಯೂನಿಸ್ಟನಾಗಿರಲಿ; ಹಿಂದೂ-ಕ್ರಿಶ್ಚಿಯನ್ -ಮುಸಲ್ಮಾನನಾಗಿರಲಿ-ಥಂಡಾ.. ಥಂಡಾ… ಕೂಲ್..ಕೂಲ್ ಆದದ್ದಂತೂ ಸುಳ್ಳಲ್ಲ. ಹಿರಿಯರ ಆಡು ಮಾತೊಂದು ಇಲ್ಲಿ ನೆನಪಿಸಲೇಬೇಕಾಗಿದೆ. ‘ಊಟ ಬಲ್ಲವನಿಗೆ ರೋಗವಿಲ್ಲ: ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬುದು ನಮ್ಮ ಪ್ರಧಾನಿ ‘ನಮೋ’ಗೆ ಹಂಡ್ರಡ್ ಪರ್ಸಂಟ್ ಮ್ಯಾಚ್ ಆಗ್ತದೇ. ತನ್ನ ಮಾತಿನಿಂದಲೂ ಎಲ್ಲರನ್ನೂ ಮೋಡಿ ಮಾಡಬಲ್ಲ ಮಾಸ್ ಲೀಡರ್ ಮೋದಿ. ಈ ಮಾತು ಕೇವಲ ಭಾರತಕ್ಕಷ್ಟೇ ಅಲ್ಲ; ಅಮೇರಿಕಾ, ಬ್ರಿಟನ್, ರಷ್ಯಾದಂಥ ರಾಷ್ಟಗಳೂ ಮೋದಿಯ ಹೆಬ್ಬೆರಳ ತುದಿಯಲ್ಲಿ ಕುಣಿದಾಡುತ್ತಿವೆ.


ನೂರಾ ಮೂವತ್ತು ಕೋಟಿ ಜನ ಅಪ್ರಶಿಯೇಟ್ ಮಾಡಲೇ ಬೇಕು!
ಆದಿರಲಿ; ವಿಶೇಷವಾದ ಸಂಗತಿಯೊಂದನ್ನ ನಿಮ್ಮ ಮುಂದೆ ಹೇಳಿಕೊಳ್ಳಬೇಕಾಗಿದೆ. ಇದೊಂದು ವಿಷಯಕ್ಕೆ ನಮ್ಮ ಮೋದೀಜಿಯವರನ್ನ ನೂರಾ ಮೂವತ್ತು ಕೋಟಿ ಜನ ಅಪ್ರಶಿಯೇಟ್ ಮಾಡಲೇಬೇಕು. ಅದೇನಂತ ಅಂದುಕೊಂಡಿದ್ದೀರಾ? ಅದುವೇ ‘ನಮೋ’ ಬೆಳ್ಳಂಬೆಳಗ್ಗಿನ ಮಾತು. ಯಾವತ್ತಿದ್ದರೂ ಕತ್ತಲಾದ ಮೇಲೆ ಟೀವಿ ಪರದೆಯ ಮುಂದೆ ಬಂದು ಅದೇನನ್ನೋ ಗಂಭೀರ ವಿಚಾರವನ್ನ ಹೇಳಿ ರಾತ್ರಿಯಿಡೀ ನಿದ್ದೆ ಬರದಂತೆ ಮಾಡುವುದು ನಮ್ಮ ಮೋದಿಯ ಹವ್ಯಾಸ. ಒಂದು ಸಾವಿರ ನೋಟಿನ ಬ್ಯಾನ್ ಇರಲಿ; ಮೊನ್ನೆ ಒಂಬತ್ತು ದಿನಗಳ ಹಿಂದೆ ಅನೌನ್ಸ್ ಮಾಡಿದ ‘ಲಾಕ್‌ಡೌನ್’ ಆಗಿರಲಿ; ಹೀಗೆ ಹಲವಾರು ವಿಚಾರಗಳಿಗೆ ‘ನಮೋ’ ಆಯ್ತುಕೊಂಡದ್ದು ಕತ್ತಲೆಯನ್ನೇ. ಆದರೆ ಇವತ್ತು ಹಾಗಾಗಿಲ್ಲ ಎಂಬುದೇ ಖುಷಿಪಡುವಂಥ ಸಂಗತಿ. ಈಗ್ಗೆ ಕೆಲವೇ ತಾಸುಗಳ ಮುನ್ನ ರಿಲೀಸ್ ಮಾಡಿರುವ ವಿಡೀಯೋ ಬಿತ್ತರಿಸಲ್ಪಟ್ಟದ್ದು ಬೆಳಗ್ಗೆ ಒಂಬತ್ತು ಘಂಟೆಗೆ. ಈ ವಿಚಾರದಲ್ಲಂತೂ ಎಲ್ಲರೂ ಸೌಭಾಗ್ಯವಂತರೇ.ಈ ವಿಡೀಯೋವನ್ನ ರಾತಿ ರೆಕಾರ್ಡಿಂಗ್ ಮಾಡಿದ್ದರೂ ನೂರಾ ಮೂವತ್ತು ಕೋಟಿ ಜನರ ಕಣ್ಣೆದುರು ಹರಿಬಿಟ್ಟದ್ದು ಬೆಳಿಗ್ಗೆ. ಆದ್ದರಿಂದ ಹಗಲೀಡೀ ಅದರ ಪಾಸಿಟಿವ್-ನೆಗೆಟಿವ್ ಚರ್ಚಿಸಿ ಆಟ್‌ಲೀಸ್ಟ್ ನೈಟಾದರೂ ಸೇಫಾಗಿ ಮಲಗಬಹುದು ಎಂಬುದು ಎಲ್ಲರ ಖುಷಿ.


ಹೌದು; ಕಳೆದ ಐದಾರು ವರ್ಷಗಳಿಂದ ನೀವು ಗಮನಿಸುತ್ತಾ ಬಂದಿದ್ದೀರಿ. ನಮ್ಮ ಪ್ರಧಾನಿ ಮೋದೀಜೀ ನಿಮ್ಮನ್ನು ಅಷ್ಟು ಸಲೀಸಾಗಿ ಮಲಗಲು ಬಿಡಲಾರರು; ಹಾಗಂತ ನಿದ್ರಾಹೀನರಾಗಲೂ ಬಿಡಲ್ಲ. ಎಲ್ಲವನ್ನೂ ಗುಪ್ತ್‌ಗುಪ್ತ್ ಆಗಿ ಅಡಕತ್ತರಿಯಲ್ಲಿಟ್ಟುಕೊಂಡೇ ಒಂದೊಂದೇ ಬಾಣಗಳನ್ನು ಬಿಡುತ್ತಿರುತ್ತಾರೆ. ಅದರಲ್ಲಿ ಒಂದೇ ಒಂದು ‘ವೆಪನ್’ ವೇಸ್ಟ್ ಆಗದಂತೆ ಕೂಡಾ ಎಚ್ಚರಿಕೆಯನ್ನೂ ವಹಿಸಿರುತ್ತಾರೆ. ಈಗ್ಗೆ ‘ನಮೋ ಜ್ಯೋತಿರ್ಗಮಯ’ ಎಂಬಂತೆ ಅನೌನ್ಸ್ ಮಾಡಿರುವ ಕರೆಂಟಿನ ಸ್ವಿಚ್ಛಾಫ್ ಮಾಡಿ ದೀಪ ಬೆಳಗಿಸುವ ವಿನೂತನ ಸಿಂಬಾಲಿಕ್ ಮೆಸೇಜು ಭಾವನಾತ್ಮಕವಾಗಿ ಬೆಸೆಯುವ ಸಾಹಸ. ಇದು ಅದೆಷ್ಟರ ಮಟ್ಟಿಗೆ ಫಲಪ್ರದವಾಗುತ್ತೇ? ಇದ್ದರಿಂದ ನಿಜಕೂ ಕೊರೋನಾ ಬೇಗ ಓಡ್ಹೋಗುತ್ತಾ? ಅದರ ಚೈನ್ ಲಿಂಕ್ ಕಟ್ ಮಾಡುತ್ತಾ ದೀಪದ ಬೆಳಕು? ಕಟ್ಟಕಡೆಗೂ, ಇದು ಮೋದಿಗೆ ಪ್ಲಸ್ ಆಗುತ್ತಾ? ಮೈನಸ್ ಆಗುತ್ತಾ? ಓಟ್ ಬ್ಯಾಂಕ್‌ಗೆ ಪಾಸಿಟಿವ್ ವೋಟ್ ಕೊಡುತ್ತಾ? ಯುವ ಪೀಳಿಗೆ ‘ಮೋದೀಕಿ ಜೈ’ ಅಂತಾರಾ? ‘ಗೋವಿಂದಾ’ಅಂತಾರಾ? ‘ಗಣಪತಿ ಬಪ್ಪ ಮೋರೆಯಾ’ಎಂಬಂತೆ ನೀರಿಗೆ ಹಾಕ್ತಾರಾ? ನಿಖರವಾಗಿ ತಕ್ಷಣವೇ ಹೇಳಲು ಸಾಧ್ಯವೇ ಇಲ್ಲ. ಐದಾರು ತಿಂಗಳಷ್ಟು ಕಾಲಾವಕಾಶ ಬೇಕೇ ಬೇಕು. ಆಗ್ಗೆಯಂತೂ ನಿಖರವಾಗಿ ‘ವಾಟ್ ಈಸ್ ಅವರ್ ಮೋದಿಜೀ’ಅಂತ ನಿಖರವಾಗಿ ಹೇಳಬಹುದು.


‘ಭಾಯಿಯೋ-ಬೆಹನ್ನೋಉದ್ಗಾರ ಮತ್ತು ಧಗಧಗನೆ ಉರಿಯುವ ಜ್ಯೋತಿ’!
ಆದರೆ ನಮ್ಮ ನೂರಾ ಮೂವತ್ತು ಕೋಟಿ ಜನ ಇವತ್ತು ಒಂಬತ್ತು ಗಂಟೆಗೆ ಟಿವಿ ಸ್ಕ್ರೀನಿನ ಮುಂದೆ ಕುಂತು ಮೋದೀಜೀ’ಸಾಲ ಮನ್ನಾ ಮಾಡ್ತಾರಾ? ಹೊಟೇಲಿನ ಮೇಲಿನ ಜಿಎಸ್‌ಟಿ ಕೈಬಿಡ್ತಾರಾ? ಫುಡ್ ಐಟಮ್ಮುಗಳನ್ನು ಟ್ಯಾಕ್ಸ್ ಫ್ರೀ ಅಂತ ಫೋಷಿಸ್ತಾರಾ? ನಿತ್ಯೋಪಯೋಗಿ ಸರಕುಗಳ ಬೆಲೆ ಇಳಿಸ್ತಾರಾ? ಪೆಟ್ರೋಲು-ಡಿಸೇಲುರೇಟು ಇಳಿಸ್ತಾರಾ? ಲಾಕ್‌ಡೌನ್ ವಾಪಾಸು ತೇಗಿತಾರಾ? ಕೊರೋನಾಕ್ಕೆ ಮೆಡಿಸಿನ್ ಘೋಷಿಸ್ತಾರಾ? ಉಚಿತ ಊಟೋಪಚಾರದ ಏರ್ಪಾಡು ಮಾಡ್ತಾರಾ? ಕಾರು-ರಿಕ್ಷಾ ಡ್ರೈವರುಗಳಿಗೆ ಒಂದಿಷ್ಟು ಅಮೌಂಟು ಡಿಕ್ಲೇರ್ ಮಾಡ್ತಾರಾ? ಸಾಲ ಮನ್ನಾ ಮಾಡ್ತಾರಾ? ದೆಹಲಿಯಂತೆ ನಮ್ಮಲ್ಲೂ ಕರೆಂಟ್ ಫ್ರೀ ಮಾಡಿಸ್ತಾರಾ? ಮಹಿಳೆಯರಿಗೆ ಫ್ರೀ ಬಸ್ ಪಾಸ್ ಕೊಡಿಸ್ತಾರಾ? ಸ್ಕೂಲ್ ಫೀಸ್ ಫ್ರೀ ಮಾಡಿಸ್ತಾರಾ? ಜನ್‌ಧನ್ ಅಕೌಂಟಿಗೆ ಒಂದಿಷ್ಟು ಸಾವಿರ ಜಮೆ ಮಾಡಿಸ್ತಾರಾ? ಪೆಗ್ ಕುಡೀಲಿಕ್ಕೆ ಬಾರ್‌ಗಳು ಓಪನ್ ಆಗ್ತಾವಾ? ಸ್ಮೋಕ್ ಮಾಡಲು ಸಿಗರೇಟು ಸಿಗುತ್ತಾ? ಪಾನ್ ಪರಾಗ್ ಅಂಗಡಿ ತೆರೆದುಕೊಳ್ಳುತ್ತಾ? ಹೀಗೇ ಒಂದಾ..ಎರಡಾ.. ಹತ್ತಾರು ನಿರೀಕ್ಷೆಗಳನ್ನಿಟ್ಟು ಕುಂತವರು ಇಪ್ಪತ್ತು ನಿಮಿಷದ ವಿಡೀಯೋದಲ್ಲಿ ಕೇಳಿಸಿದ್ದು ‘ಭಾಯಿಯೋ-ಬೆಹನ್ನೋ’ ಎಂಬ ಉದ್ಗಾರ ಮತ್ತು ಧಗಧಗನೆ ಉರಿಯುವ ಜ್ಯೋತಿ! ಕೊನೆಗೂ ಟೀವಿ ಪರದೆ ಮುಂದೆ ಕುಂತವರೆಲ್ಲಾ ರಿಮೋಟ್ ಆಫ್ ಮಾಡಿ ಮತ್ತೆ ಹಾಸಿಗೆಗೊರಗಿದ್ದು ಸುಳ್ಳೇನಲ್ಲ.


ನಿಜ! ಮೋದಿಯವರು ಒಂಬತ್ತು ದಿನಗಳ ಹಿಂದೆ ಘೋಷಿಸಿರುವ ‘ಲಾಕ್ ಡೌನ್’ ನ್ನು ಕೆಲವರು ‘ಪಾಲಿಟಿಕಲ್ ಗಿಮಿಕ್’ ಎಂದು ಕರೆಯಬಹುದು. ಅಂತಹ ತರ್ಕದಲ್ಲಿ ಸತ್ಯಾಂಶವಿದೆಯಾ? ಇಲ್ಲವಾ? ಎಂಬುದು ಬೇರೆ ವಿಚಾರ. ಹಾಗೆ ನೋಡಿದರೆ, ಪ್ರಧಾನಿ ಮೋದಿಯವರು ಎಲ್ಲೂ ಅಂತಹ ಘನಘೋರ ತಪ್ಪು ಮಾಡಿದಂತೆ ಅನ್ನಿಸುವುದೇ ಇಲ್ಲ. ಬಹುಪಾಲು ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್‌ಡೌನ್‌ಗೆ ಮುಕ್ತ ಬೆಂಬಲ ಘೋಷಿಸದಿರುವುದು ಮತ್ತು ಕೇಂದ್ರದ ನಿರ್ಧಾರಕ್ಕೆ ಸಹಕರಿಸದಿರುವುದು ಇವೇ ಮುಂತಾದ ತಾರತಮ್ಯ, ಮಲತಾಯಿ ಧೋರಣೆಗಳಿಂದ ತಪ್ಪಾಗಿರಬಹುದು. ಆದರೆ, ‘ಲಾಕ್ ಡೌನ್’ ನಲ್ಲಿ ಮೋದಿಯವರು ಜನಾದರಣೀಯ ರಾಷ್ಟ್ರ ನೇತಾರ ಎಂಬಂತೆ ಬಿಂಬಿತರಾಗಿರುವುದನ್ನು ನಿರಾಕರಿಸಲಾಗದು. ಇಲ್ಲಿ ಗಮನಿಸತಕ್ಕ ಅಂಶವೆಂದರೆ, ಲಾಕ್‌ಡೌನ್ ಘೋಷಿಸಿದ ಒಂಬತ್ತನೇ ದಿನದಂದು. ಅದೂ ಬೆಳ್ಳಂ ಬೆಳಗ್ಗೆ ಕರೆಟ್ಟಾಗಿ ಒಂಭತ್ತು ಘಂಟೆಗೆ. ಟೀವಿ ಪರದೆಯ ಮುಂದೆ ಹೇಳಿದೂ – ಮತ್ತೆ ಒಂಬತ್ತರ ಪದ! ಅದೂ ರಾತ್ರಿ ಒಂಬತ್ತು ಘಂಟೆಗೆ. ಇಲ್ಲೂ ಮತ್ತದೇ ಒಂಬತ್ತರ ಮಾತು. ಅದೇನೆಂದರೆ, ಒಂಬತ್ತು ನಿಮಿಷದ ಜ್ಯೋತಿ ಬೆಳಗಿಸುವಿಕೆ. ಇದರ ಹಿಂದಿನ ‘ನವ ದುರ್ಗೆ’ಯರ ಮಹಿಮೆ, ‘ನವ ಶಕ್ತಿ’ಯರ ಪವಾಡಗಳ ರಹಸ್ಯ ಮೋದಿಗೆ ಮಾತ್ರ ಗೊತ್ತು! ಇಂತಹ ಸಿಕ್ರೆಸಿಗಳನ್ನು ಅವರ್‍ಯಾರಿಗೂ ಬಿಟ್ಟುಕೊಡಲಾರರು ಎಂಬುದೂ ಸತ್ಯ.


‘ಪವರ್ ಕಟ್’ ಮಾಡಲು ಹುಕುಂ’ !
ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಷ್ಟೇ ಅಲ್ಲ; ವಿಧಾನಸೌಧದಲ್ಲೂ ಒಂದು ಸಂಗತಿ ಮಾತ್ರ ಭಾರೀ ಸದ್ದುಗದ್ದಲ ಎಬ್ಬಿಸುತ್ತಿದೆ. ಅದಿನ್ನೇನೂ ಅಲ್ಲ; ಪವರ್ ಕಟ್! ಮೋದಿಯ ಮಾತನ್ನು ಕಾಯಾ ವಾಚಾ ಮನಸಾ ಪಾಲಿಸುತ್ತಿರುವ ಯುಡಿಯೂರಪ್ಪಾಜೀ ನಾಡಿದ್ದು ರವಿವಾರದಂದು, ಅದುವೇ ಐದನೇ ತಾರೀಕಿನಂದು ಕರೆಟ್ಟಾಗಿ ಒಂಭತ್ತು ಘಂಟೆಗೆ ‘ಪವರ್‌ಕಟ್’ ಮಾಡಲು ಹುಕುಂ ಜ್ಯಾರಿ ಮಾಡಲು ಮುಂದಾಗಿದ್ದಾರಂತೆ! ಈ ಬಗ್ಗೆ ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಸೆಸ್ಕಾಂಗಳಿಗೆ ಸರ್ಕ್ಯೂಲರ್ ಕಳುಹಿಸಲು ಡಿಸೈಡ್ ಮಾಡಿದ್ದಾರಂತೆ! ನೀವು ಜ್ಯೋತಿ ಬೆಳಗಿಸಿ ಅಥವಾ ಬಿಡಿ; ಐದನೇ ತಾರೀಕಿನಂದು ಒಂಬತ್ತು ಗಂಟೆಯಿಂದ ಒಂಬತ್ತು ನಿಮಿಷ ಕರೆಟಂತೂ ಇರುವುದೇ ಇಲ್ಲ. ಇದು ಯಡಿಯೂರಪ್ಪರ ಹೊಸ ಐಡಿಯಾ! ಹೇಗಿದೆ? ಅಜ್ಜರ ಮಾಸ್ಟರ್ ಪ್ಲಾನ್!
-ಎಸ್ಸೆನ್ ಕುಂಜಾಲ್


ನಿಮ್ಮ ಅನಿಸಿಕೆ, ಅಭಿಪ್ರಾಯಗಳಿದ್ದಲ್ಲಿ ಇ-ಮೇಲ್ [email protected] ಗೆ ಕಳುಹಿಸಬಹುದು ಅಥವಾ ದೂರವಾಣಿ 9845070166 ಗೆ ಕರೆ ಮಾಡಬಹುದು.


ನಿರೀಕ್ಷಿಸಿ – ಮೋದಿ ಮುದಿಯಾಯ್ತು; ಮುಂದೆ ಯಾರು?
ಮೋದಿ ಒಬ್ಬರನ್ನ ಬಿಟ್ಟರೆ ಪ್ರಧಾನಿ ಗಾದಿಗೆ ಫಿಟ್ ಅನ್ನುವವ ಹುಟ್ಟೇ ಇಲ್ಲ ಎಂಬಂತಹ ಮಾತುಗಳಿವೆ. ಇಂಥದ್ದರಲ್ಲಿ ಒಬ್ಬ ಜನ ನೇತಾರ ತನ್ನಷ್ಟಕ್ಕೆ ತಾನಾಗಿ ಬೆಳೆದು ಬರ್‍ತಿದ್ದಾನೆ. ಅದು ರಾಹುಲ್ ಗಾಂಧಿ ಎಂಬ ಹುಲ್ಲು ಕಡ್ಡಿ ಅಲ್ಲ. ಮಾಯಾವತಿಯೆಂಬ ಮಾಯೆಯೂ ಅಲ್ಲ. ಮಮತಾ ಬ್ಯಾನರ್ಜಿಯೆಂಬ ಮಮತೆಯಂತೂ ಅಲ್ಲ. ಕಮಲಧಾರಿ ಅಮಿತಾ ಷಾ ಅಮರಿಕೊಳ್ಳಲು ಸಾಧ್ಯವಿಲ್ಲ. ಯೋಗಿ ಆದಿತ್ಯನಾಥಗಂತೂ ಈ ಯೋಗ ಇಲ್ಲ. ಮತ್ಯಾರಿದ್ದಾರೆ? ಅವನ್ಯಾರು? ಹೌದು; ಇದು ಭವಿಷ್ಯ ವಾಣಿಯಲ್ಲ; ರಿಯಾಲಿಟಿ- ನಿಮ್ಮ ಮುಂದೆ ಈ ಸತ್ಯಾಂಶವನ್ನ ಬಿಚ್ಚಿಡಲಿದ್ದೇನೆ-ನಿರೀಕ್ಷಿಸಿ – ಇದೇ ಅಂಕಣದಲ್ಲಿ.

2 thoughts on “ಕ್ರಿಶ್ಚಿಯನ್ನರಿಗೆ ಕ್ಯಾಂಡಲ್ಲು, ಮುಸ್ಲಿಮರಿಗೆ ಟಾರ್ಚು-ಇದು ಮೋದೀಜಿಯ ಪಾಲಿಟಿಕಲ್ ಗಿಮಿಕ್ಕಾ…..

Leave a Reply

Your email address will not be published. Required fields are marked *

error: Content is protected !!