ಬಹರೈನ್ ಕನ್ನಡಿಗರ ಕನಸಿನ ಸೌಧ “ಕನ್ನಡ ಭವನ”

ಉಡುಪಿ: ಇದೀಗ ಬಹರೈನ್‌ನಲ್ಲಿ ಕನ್ನಡ ಭವನದ  ನಿರ್ಮಾಣ ಕಾರ್ಯ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಕರ್ನಾಟಕ ಸರಕಾರದ ಅನುದಾನದಿಂದ ವಿದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರಥಮ ಭವನ ಇದಾಗಲಿದೆ.

ಸುಮಾರು ಹನ್ನೆರೆಡು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಭವನನವೆಂಬರ್ ತಿಂಗಳಿನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಕನ್ನಡ ಭವನ ಒಂದು ಇತಿಹಾಸ ನಿರ್ಮಿಸುವುದಕ್ಕೆ ಅಣಿಯಾಗುತ್ತಿದೆ ಎಂದು ಕನ್ನಡ ಸಂಘದ ಬಹರೈನ್‌ನ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

“ಸಂಘ ಜೀವನ-ಸುಖ ಜೀವನ” ಎಂಬ ಧ್ಯೇಯ ಮಂತ್ರದೊಂದಿಗೆ ಆರಂಭಗೊಂಡ ಕನ್ನಡ ಸಂಘ ಬಹರೈನ್, ಕರ್ನಾಟಕದಿಂದ ಕರ್ಮಭೂಮಿ ಬಹರೈನ್‌ಗೆ ಬಂದು ನೆಲೆಸಿದ ಸಮಸ್ತ ಕನ್ನಡಿಗರ ಇನ್ನೊಂದು ಮನೆಯೇ ಆಗಿದೆ. ಸಂಘದಲ್ಲಿ ಹೆಚ್ಚುತ್ತಿರುವ ಕನ್ನಡಿಗರ ಸಂಖ್ಯೆ , ಸದಸ್ಯರಿಗೆ ಬೇಕಾಗಿರುವ ಹೆಚ್ಚಿನ ಸೌಲಭ್ಯ. ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತಿರುವ ಕಟ್ಟಡದ ಪರಿಣಾಮವಾಗಿ ಸದಸ್ಯರೆಲ್ಲ ಒಟ್ಟಾಗಿ ತೆಗೆದುಕೊಂಡ ನಿರ್ಧಾರವೇ ಬಹರೈನ್ ಕನ್ನಡಿಗರ ಕನಸಿನ ಸೌಧ ಕನ್ನಡ ಭವನದ ನಿರ್ಮಾಣ.

೨೦೦೮-೦೯ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಬಹರೈನ್‌ಗೆ ಆಗಮಿಸಿದ ಸಂಧರ್ಭದಲ್ಲಿ ಕರ್ನಾಟಕ ಸರಕಾರದಿಂದ ೧ ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಹುರುದುಂಬಿಸಿದ್ದರು. ಕಳೆದ ನವೆಂಬರ್ ತಿಂಗಳಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದ್ದರು.

ವರ್ಷದೊಳಗೆ ನಿರ್ಮಾಣ ಕಾರ್ಯ ಮುಗಿಯಲಿದ್ದು, ಕೇವಲ ಬಹರೈನ್ ಕನ್ನಡಿಗರಷ್ಟೆ ಅಲ್ಲದೇ ಕೊಲ್ಲಿ ರಾಷ್ಟ್ರದಲ್ಲಿರುವ ಕನ್ನಡಿಗರಿಗೂ ಕಲೆ ಮತ್ತು ಸಂಸ್ಕೃತಿಕ ಕೇಂದ್ರವಾಗಲಿರುವ ಕನ್ನಡ ಭವನ.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಡಿ.ರಮೇಶ್ , ಕಟ್ಟಡ ಸಮಿತಿಯ ಸಂಚಾಲಕ ಆಸ್ಟೀನ್ ಸಂತೋಷ್, ಕಟ್ಟಡ ನಿಧಿ ಸಂಗ್ರಹ ಸಮಿತಿ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!