ಬೈಂದೂರು : ಜುಗಾರಿ ನಿರತ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ 8 ಮಂದಿ ಬಂಧನ

ಕುಂದಾಪುರ: ಬೈಂದೂರು ರವರಿಗೆ ಶಿರೂರು ಗ್ರಾಮದ ಕರಾವಳಿ ಸಮುದ್ರ ತೀರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ 8 ಮಂದಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೈಂದೂರು ದೊಂಬೆ ಶೀರೂರು ನಿವಾಸಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಸಂಜೀವ ಮೊಗವೀರ(44), ಸಂದೇಶ ಮೊಗವೀರ (26), ನಾರಾಯಣ ಮೊಗವೀರ (55), ಬಾಬು ಪೂಜಾರಿ (47), ನಾರಾಯಣ (72), ಚಂದ್ರ ಮೊಗವೀರ (42), ಅಣ್ಣಪ್ಪ ಚಿಕ್ಕಯ್ಯ ಮೊಗವೀರ ಮತ್ತು ಬಾಬು ಮೊಗವೀರ (61) ಎಂದು ಗುರುತಿಸಲಾಗಿದೆ.

ಭಾನುವಾರ ಸಂಜೆ 4 ಗಂಟೆಗೆ ಬೈಂದೂರು ಉಪನಿರೀಕ್ಷಕ ತಿಮ್ಮೇಶ ಬಿ ಎನ್ ಅವರಿಗೆ ಶಿರೂರು ಗ್ರಾಮದ ಕರಾವಳಿ ಸಮುದ್ರ ತೀರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಜುಗಾರಿ ಆಟವಾಡುತ್ತಿದ್ದಾರೆಂದು ಖಚಿತ ಮಾಹಿತಿ ಬಂದಂತೆ ಮೇರೆಗೆ, ದಾಳಿ ನಡೆಸಲು ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸಂಜೆ 5:25 ಗಂಟೆಗೆ ದಾಳಿ ನಡೆಸಲಾಗಿದೆ .

ಆರೋಪಿತರನ್ನು ಸುತ್ತುವರಿದು ಹಿಡಿದು ವಿಚಾರಿಸಲಾಗಿ ಅವರುಗಳು ತಾವು ಹಣವನ್ನು ಪಣವಾಗಿಟ್ಟು ಅಂದರ್- ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದುದಾಗಿ ಒಪ್ಪಿಕೊಂಡಿದ್ದು ಅವರನ್ನು ವಶಕ್ಕೆ ಪಡೆದು ತಕ್ಷೀರು ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಅಜಮಾಯಿಸಲಾಗಿ 1) ಹಳೆಯ ದಿನಪತ್ರಿಕೆ 2) ಡೈಮಾನ್,ಆಟಿನ್. ಇಸ್ಪೀಟ್, ಕಳವಾರ್ ಚಿತ್ರಗಳಿರುವ 52 ಇಸ್ಪೀಟ್ ಎಲೆಗಳು 3) ನಗದು ರೂ 18480/-ನ್ನು ಪಂಚರುಗಳ ಸಮಕ್ಷಮ ಮಹಜರು ನಡೆಸಿ ಸ್ವಾಧೀನಪಡಿಸಿಕೊಂಡಿದ್ದಾರೆ.ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!