ಆಷಾಡ ಏಕಾದಶಿ

ಅಭೀರಾ ಗುಲಾಲಾ ಉಧಳಿತ ರಂಗ…..ಆಹಾ ಎಂಥಾ ಹಾಡು ಬರೆದಿದ್ದಾನೆ ಸಂತ ಚೋಖಾಮೇಳಾ…. ಮಾನವರ ಮಾನಕೆಟ್ಟ ಜಾತಿಯ ಪಿಡುಗಿಗೆ ಬಲಿಯಾದ  ಅಸ್ಪೃಷ್ಯ ಸಂತನೊಬ್ಬನ ಮುಗ್ಧ ಮನಸ್ಸು ಹೊರಡಿಸಿದ ಭಕ್ತಿ ಸುಧೆ….ಮಹಾರಾಷ್ಟ್ರದ ಭಕ್ತಿ ಸಾಮ್ರಾಜ್ಯದ ರಾಜಧಾನಿ ಪಂಡಾರಾಪುರ.. ವಿಠ್ಠಲನೇ ಅಲ್ಲಿಯ ಸರದಾರ. ಕಟಿಯಲ್ಲಿ ಕರವಿಟ್ಟು ಇಟ್ಟಿಗೆಯ ಮೇಲೆ ವಿರಾಜಮಾನನಾಗಿರುವ ಪಾಂಡುರಂಗ ವಿಠ್ಠಲನೆಂದರೆ ದೇಶದ ಸಂತ ಮಹಂತರಿಗೆ ಅದೇನೋ ವಿಶೇಷ ಮಮಕಾರ..ಆ ನಾದಬ್ರಹ್ಮನ ಗುಣಗಾನಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಬಹುದೊಡ್ಡ ಭಕ್ತ ಕೇಸರಿಗಳ ಪರಂಪರೆ ಮಹಾರಾಷ್ಟ್ರದಲ್ಲಿದೆ. ಭಾಷೆಯ ಹಂಗು ತೊರೆದು ರಾಜ್ಯಗಳ ಗಡಿಯನ್ನು ಮೀರಿ ದೇಶದಾದ್ಯಂತ ಇರುವ ದಾಸ ಶ್ರೇಷ್ಟರು ಪಾಂಡುರಂಗನ ಮೇಲೆ ಕೋಟ್ಯಾಂತರ ಪದ್ಯಗಳನ್ನು ರಚಿಸಿದ್ದಾರೆ. ಈ ಕ್ಷೇತ್ರದಲ್ಲಿ ಭಗವಂತನ ಮೂರ್ತಿಯನ್ನು ಎಲ್ಲರು ಮುಟ್ಟಿ ಭಜಿಸ ಬಹುದು.

 

ಇಲ್ಲಿನ ವಾರಕರಿ ಸಂಪ್ರಾದಾಯ ಸಾಮಾಜಿಕ ನ್ಯಾಯಕ್ಕೆ ವೇದಿಕೆ ಒದಗಿಸಿದ ಬಹುದೊಡ್ಡ ಆಚರಣೆ. ಸಹ್ಯಾದ್ರಿಯ ತಪ್ಪಲಲ್ಲಿ ಬ್ರಾಹ್ಮಣಶಾಹಿಗಳ ದಬ್ಬಾಳಿಕೆಗೆ ನಲುಗಿದ್ದ ಲಕ್ಷಾಂತರ ದೀನ ದಲಿತರಿಗೆ ಈ ವಾರಕರಿ ಸಂಪ್ರಾದಾಯ ಧಾರ್ಮಿಕ ಹಕ್ಕನ್ನು ಒದಗಿಸಿಕೊಟ್ಟಿದೆ.ಈ ಸಂಪ್ರದಾಯದ ಆತ್ಮವೆಂದರೆ ಈ ಸಂಪ್ರದಾಯದ ಹಿರಿಯ ಸಂತರು ರಚಿಸಿ ಕೊಟ್ಟ ಆಭಂಗಗಳು ಈ ಅಭಂಗಗಳನ್ನು ರಚಿಸಿದ ಸಂತ ಜ್ನಾನದೇವ್,ತುಕಾರಾಮ,ಸೋಪಾನ ಮುಕ್ತಾ ಭಾಯಿ, ಸಮರ್ಥ ರಾಮದಾಸ,ಸತಿ ಸಕ್ಕು ಭಾಯಿ,ಗೋರ ಕುಂಭಾರ,ಚೋಖಾಮೇಳಾ ಪುರಂದರ ದಾಸರು,ಕನಕದಾಸರು ಜಗನ್ನಾಥ ದಾಸರು ಹೀಗೇ ಪಟ್ಟಿ ಬೆಳೆಯುತ್ತಾ ಸಾಗುತ್ತದೆ.ಇವರಲ್ಲಿ ಬ್ರಾಹ್ಮಣರಿಂದ ಹಿಡಿದು ಚಮ್ಮಾರರವರೆಗೆ ಎಲ್ಲಾ ಜಾತಿ ಪಂಥಗಳ ಸತರು ಸೇರಿದ್ದಾರೆ.ಆದರೆ ಇವರು ಯಾರೂ ಕೂಡ ಇತಿಹಾಸದ ಪುಟಗಳಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಬಗ್ಗೆ ಇತಿಹಾಸಕಾರರು ಹೊಗಳಿ ಬರೆದಿಲ್ಲ ಕಾರಣವಿದೆ. ದಾಸಪಂಥದ ಚಳುವಳಿ ಎಡಪಂಥಿಯರಂತೆ  ಜನರ ನಂಬಿಕೆ ಎಂಬ ಊರುಗೋಲನ್ನು ಕಿತ್ತು ಕೊಳ್ಳಲಿಲ್ಲ ಬದಲಾಗಿ ಅ ಊರುಗೋಲನ್ನೇ ಬಲ ಪಡಿಸಿ ಅಗತ್ಯ ಬಿದ್ದಲ್ಲಿ ಬ್ರಾಹ್ಮಣಶಾಹಿಗಳನ್ನು ಅದರಿಂದಲೇ ತಿವಿಯುತ್ತಾ ಸಮಾಜದ ಅಂಕುಡೋಂಕುಗಳನ್ನು ತಮ್ಮ ಸಾಹಿತ್ಯರಚನೆಯಲ್ಲಿ ಬಿಚ್ಚಿಟ್ಟು ಸಮಾಜದ ಏಳಿಗೆಗೆ ಶ್ರಮಿಸಿದರು. ಅಲ್ಲದೆ ನಮ್ಮ ಮಾತು ಆಲಿಸಲು ಮಾತ್ರ ಪಾಲಿಸಲು ಅಲ್ಲ ಅನ್ನುವ ಇಂದಿನ ತಥಾಕಥಿತ ಬುದ್ದಿ ಜೀವಿಗಳಂತೆ ಅವರು ಭೂಮಿಗೆ ಭಾರವಾಗಿ ಬದುಕಲಿಲ್ಲ. ವಿದೇಶಿಗಳ ಎಂಜಲಿಗೆ ಬಾಯನ್ನೊಡ್ಡಿ ಸಮಾಜವನ್ನು misguide ಮಾಡಲಿಲ್ಲ.ಬದಲಾಗಿ ತಾವು ನುಡಿದಂತೆ ಬದುಕಿ ಇಡಿ ಸಮಾಜಕ್ಕೆ ಆದರ್ಶರಾದರು.

 

ಅಗರ್ಭ ಶ್ರೀಮಂತರಾಗಿದ್ದ ಪುರಂದರ ದಾಸರು ತನ್ನ ಸರ್ವಸ್ವವನ್ನು ಸಮಾಜಕ್ಕಾಗಿ ತ್ಯಾಗ ಮಾಡಿ ತನ್ನ ಇಡೀ ಜೀವನವನ್ನೇ ಸಾಮಾಜದ ಜಾಗೃತಿಗಾಗಿ ಮುಡಿಪಿರಿಸಿದರು.ಅವರ ಪ್ರತಿಯೊಂದು ಸಾಹಿತ್ಯದಲ್ಲೂ ಮಾನವ ಪ್ರೇಮ ಸ್ಪುರಿಸುತ್ತದೆ. ಆದರೆ ಇಂದಿನ ಕೆಲವು ಮಾನವ ಹಕ್ಕು ಹೋರಾಟಗಾರರಿದ್ದಾರೆ.ಗುಜರಾತ್ ದಂಗೆಯಲ್ಲಿ ಸತ್ತವರ ಹೆಣವನ್ನು ವಿದೇಶಿಯರಿಗೆ ತೋರಿಸಿ ಕೋಟಿಗಟ್ಟಲೆ ಹಣ ಮಾಡಿಕೊಂಡವರಿದ್ದಾರೆ. ತೀಸ್ತಾ ಸೆತಲ್ವಾಡ್ ಅನ್ನೋ ಮಾನವ ಪರ ಹೋರಾಟಗಾರ್ತಿಯೊಬ್ಬಳು ಯಾವ ಮಟ್ಟಕ್ಕೆ ಬಿಕರಿಯಾಗಿದ್ದಳೆಂದರೆ ಆಕೆಗೆ ಕೊನೆಗೆ ನ್ಯಾಯಾಲಯವೇ ಛೀಮಾರಿ ಹಾಕಿ ಹೊರಗಟ್ಟಿಸಿತ್ತು. ಇಂದು ಎಲ್ಲವೂ ವ್ಯಾಪಾರೀಕರಣಗೊಂಡಿದೆ ಅಂದಿನ ದಿನಗಳಲ್ಲಿ ಸಾಮಾಜಿಕ ಅಸಮಾನತೆ ಚರಮ ಸೀಮೆಯಲ್ಲಿದ್ದರೂ ಅಂದಿನ ವಿಚಾರವಾದಿಗಳು ತಮ್ಮ ಸ್ಥಿಮಿತ ಕಳೆದುಕೊಳ್ಳಲಿಲ್ಲ ಸಮಸ್ಯೆಯ ಮೂಲವನ್ನು ಕಂಡು ಹಿಡಿದು ಅದರ ರಿಪೇರಿಗೆ ಮುಂದಾದಾದರು. ಧಾರ್ಮಿಕ ಶೊಷಣೆಯ ಮೂಲವಾದ ದೇವಾಲಯಗಳನ್ನೇ ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡರು.ಆದರೆ ಭೊದನೆಗಳಲ್ಲಿ ಮಾತ್ರ ದೇವಾಲಯದಲ್ಲಿರುವ ದೇವರಿಗಿಂತ ನಮ್ಮೊಳಗಿರುವ ಮಾನವೀಯ ಕಳಕಳಿ ಹಾಗೂ ನಮ್ಮೊಳಗಿರುವ ಪರಬ್ರಹ್ಮ ತತ್ವದ ಸಾಕ್ಷಾತ್ಕಾರಕ್ಕೆ ಹೆಚ್ಚಿನ ಒತ್ತು ನೀಡಿದರು ಈ ಭಕ್ತಿ ಯಜ್ನಕ್ಕೆ ಸಮಿದೆಗಳಾಗಿ ಅರ್ಪಣೆಯಾದ ಸಂತರು ಸಾವಿರಾರು.ಅವರ ಆ ತ್ಯಾಗದಿಂದಾಗಿಯೇ ಇಂದು ಎಲ್ಲಾ ದೇವಾಲಯ, ಭಜನಾಮಂದಿರಗಳಲ್ಲಿ ಅವರ ಚಿತ್ರಪಟಗಳು ರಾರಾಜಿಸುತ್ತಿವೆ.

 

ಯಾವ ಸಂತರಿಗೆ ದಲಿತರು ಎಂಬ ಕಾರಣಕ್ಕಾಗಿ ಪ್ರವೇಶ ನಿರಾಕರಿಸಲಾಗಿತ್ತೋ ಆ ಸಂತಶ್ರೇಷ್ಠರ ಪೂಜೆ ಇಂದು ಎಲ್ಲಾ ದೇವಾಲಯಗಳಲ್ಲೂ ನಡೆಯುತ್ತವೆ.ಮೇಲೆ ಉಲ್ಲೇಖಿಸಿದ ಅಭೀರಾ ಗುಲಾಲ ಹಾಡಿನಲ್ಲಿ ಚೋಖಾಮೇಳಾ ತನ್ನ ಮುಗ್ದತೆಯನ್ನು ವ್ಯಕ್ತಪಡಿಸುತ್ತಾನೆ.  ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿದ್ದೇನೆ ಪಾಂಡುರಂಗ.. ನಿನ್ನನ್ನು ನೋಡುವ ಅವಕಾಶ ನನಗಿಲ್ಲ ಚಂದ್ರಭಾಗ ತೀರದ ಮರಳಿನ ಕಣ ಕಣದಲ್ಲಿ ಚಂದ್ರಭಾಗೆಯ ನೀರಿನ ಹನಿ ಹನಿಯಲ್ಲಿ ನಿನ್ನ ಅನುಭೂತಿ ನನಗೆ ಆಗುವಂತೆ  ಅನುಗ್ರಹಿಸು ಅನ್ನುತ್ತಾ ಪುರೋಹಿತ ಶಾಹಿಗಳ ಮೌಡ್ಯವನ್ನು ಕಳೆಯುವ ಪ್ರಯತ್ನ ಮಾಡುತ್ತಾನೆ.ದಾಸ ಸಾಹಿತ್ಯ್ದ ಇನ್ನೊಂದು ಮಗ್ಗುಲನ್ನು ವಿಮರ್ಷಿಸಿದರೆ ಅದು ರಾಷ್ಟ್ರ ಜಾಗೃತಿಯ ಶಂಖನಾದದಂತೆ ತೋರುತ್ತದೆ. ಮದ್ಯಯುಗದಲ್ಲಿ  ಮರಳುಗಾಡಿನಿಂದ ನುಗ್ಗಿದ ಅನಾಗರಿಕ  ಇಸ್ಲಾಮಿನ ಬಿರುಗಾಳಿಗೆ ಸಿಲುಕಿ ಇಲ್ಲಿನ ಧರ್ಮ ಸಂಸ್ಕೃತಿ ಸಭ್ಯತೆ ಪರಂಪರೆ ದೇವಾಲಯ ಗುಡಿಗೋಪುರಗಳು ತರಗೆಲೆಗಳಂತೆ ಚದುರಲು ಪ್ರಾರಂಭವಾಯಿತು.

 

ದೇವಾಲಯಗಳ ದ್ವಂಸ ಊರುಗಳ ಲೂಟಿ, ಗೋಹತ್ಯೆ, ಮಾನಭಂಗ ವ್ಯಾಪಕ ಮತಾಂತರ ಹೀಗೆ ಎಗ್ಗಿಲ್ಲದ ಬಲತ್ಕಾರ ಈ ದೇಶದ ಜನರ ಮೇಲೆ ನಡೆಯಿತು. ಹೆಣ್ಣನ್ನು ಕೇವಲ ಭೊಗದ ವಸ್ತುವೆಂದು ಮಾತ್ರ ತಿಳಿದಿದ್ದ ನಾಗರಿಕ ಮುಸಲರು ನಮ್ಮ ಮನೆ ಮನೆಯಿಂದ ತಾಯಿ ತಂಗಿಯರನ್ನು ಹೊತ್ತುಕೊಂಡು ಹೋಗಿ ಅಫಘಾನಿನ ಮಾರುಕಟ್ಟೆಗಳಲ್ಲಿ ಹರಾಜಿಗೆ ಇಡುತಿದ್ದರು.ಒಂದಲ್ಲ ಎರಡಲ್ಲ ಲಕ್ಷ ಲಕ್ಷ ಸಂಖ್ಯೆಯಲ್ಲಿ..ಅವರ ದೃಷ್ಟಿಯಲ್ಲಿ ನಮ್ಮ ತಾಯಂದಿರು ಅವರ ಕೊಳ್ಳೆಯ ಒಂದು ಬಾಗವಾಗಿದ್ದರು ಅಷ್ಟೆ..ಈ ದಾಳಿಗಳಿಂದ ತಪ್ಪಿಸಿಕೊಳ್ಳಲು ರಜಪೂತ ಸ್ತ್ರೀಯರು ಸಾವಿರ ಸಾವಿರ ಸಂಖ್ಯೆಯಲ್ಲಿ ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತಿದ್ದರು. ಈ ಬೆಂಕಿಯ ಜ್ವಾಲೆ ಮಹಾರಾಷ್ಟ್ರಕ್ಕೂ ಹಬ್ಬ ತೊಡಗಿತು.  ಇಸ್ಲಾಮಿನ ಕಾಡ್ಗಿಚ್ಚಿಗೆ ಇಡೀ ಹಿಂದೂ ಸಮಾಜ ತತ್ತರಿಸಿ ಹೋಯಿತು. ಸುಡುವ ಕಾಡ್ಗಿಚ್ಚಿಗೆ ಹೆಬ್ಬಲಸಿನ ಮರವೂ ಒಂದೇ ಕಾಸರಕ್ಕನ ಮರವೂ ಒಂದೆ ಸುಡುವ ಬೆಂಕಿ ಜಾತಿ ಕೇಳಿ ಸುಡಲಿಲ್ಲ ಅವರಿಗೆ ಬ್ರಾಹ್ಮಣ ಶೂದ್ರ ಎಂಬ ಭೇದ ಬೇಕಿರಲಿಲ್ಲ…ಆವರ ಉದ್ದೇಶವೊಂದೇ ಹಿಂದೂಗಳ ಸರ್ವನಾಶ ಮತ್ತು ಇಲ್ಲಿನ ಸಂಪತ್ತು. ಸಾವಿರ ವರ್ಷದ ನಮ್ಮವರ ಷಂಡತನಕ್ಕೆ ಇಡೀ ದೇಶ ಬೆಲೆ ತೆರಬೇಕಾಯಿತು. ೩೩೦೦೦ಕ್ಕೂ ಮಿಕ್ಕಿ ದೇವಾಲಯಗಳು ನೆಲಸಮಗೊಂಡವು. ದೇವತಾ ಮೂರ್ತಿಗಳು ಮಸೀದಿ ಮೆಟ್ಟಿಲು ಕಲ್ಲುಗಳಾದವು.ಧರ್ಮಗ್ಲಾನಿಯಾಗತೊಡಗಿತು. ಮಾನವೀಯತೆ ಮಣ್ಣುಪಾಲಾಯಿತು.ಹಿಂದೂ ಸಂಕುಲ ತನ್ನ ಅಂತ್ಯವನ್ನು ಎದುರು ನೋಡ ತೊಡಗಿತು.ಗ್ರೀಕ್ ರೋಮ್ ಮೆಸೆಪಟೋಮಿಯಾ,ಈಜಿಪ್ಟ್,ಪರ್ಶಿಯಾ, ಮಾಯಾ, ಇಂಕಾ ಹೀಗೆ ಸತ್ತು ಸಮಾದಿಯಾದ ನಾಗರೀಕತೆಗಳ ಸಾಲಿಗೆ ಸನಾತನಭಾರತೀಯ ಜೀವನದರ್ಶನವೂ ಸೇರಿಹೋಗುವ ಸಾದ್ಯತೆ ನಿಚ್ಚಳವಾಗತೊಡಗಿತು.

 

ಆಗ ಎಚ್ಚೆತ್ತು ಕೊಂಡವರೇ ಈ ಭಕ್ತಿಪಂಥದ ಹರಿಕಾರರು.೧೮೦೦೦ ಮತಪಂಥಗಳಲ್ಲಿ ಹರಿದುಹಂಚಿಹೋಗಿದ್ದ ಹಿಂದೂ ಸಮಾಜವನ್ನು ಮತ್ತೆ ಒಗ್ಗೂಡಿಸುವ ಕಾರ್ಯಕ್ಕೆ ಮುಂದಾದರು.ಮಣ್ಣುಪಾಲಾದ ದೇವಾಲಯಗಳ ಎದುರು ಕಣ್ಣಿರು ಸುರಿಸುತ್ತಾಭಾವುಕರಾಗಿದ್ದ ಭಕ್ತ ಜನತೆಗೆ ಮಾರ್ಗದರ್ಶನ ಮಾಡಿದರು    ದೇವರ ಭಕ್ತಿಗೆ ದೇವಸ್ತಾನದ ಹಂಗಿಲ್ಲ ಪರಿಶುದ್ದ ಭಕ್ತಿಯೊಂದೇ ಮೋಕ್ಷಕ್ಕೆ ಮಾರ್ಗ ಅನ್ನುವ ಮೂಲಕ ಕೈ ಚೆಲ್ಲಿ ಕುಳಿತಿದ್ದ ಹಿಂದೂ ಸಮಾಜಕ್ಕೆ ಧೈರ್ಯದ ನುಡಿಯನ್ನು ಹೇಳಿದರು. ಒಂದು ಕಡೆ ಸಹ್ಯಾದ್ರಿಯ ಸಿಂಹ ಛತ್ರಪತಿಯ ಖಡ್ಗದ ಹೋಳಪು ಹಿಂದು ಸಮಾಜಕ್ಕೆ ಆಶಾಕಿರಣವಾಗಿ ತೋರಿದ್ದರೆ ಇನ್ನೊಂದು ಕಡೆ ಮಾನಸಿಕವಾಗಿ ಜರ್ಜರಿತವಾಗಿ ಹೋಗಿದ್ದ ಹಿಂದು ಕುಲ ಕೋಟಿಗೆ ಸಂತರ ಈ ನುಡಿಗಳು ಸಾಂತ್ವಾನ ನೀಡಿದವು ಸಮರ್ಥರಾಮದಾಸರ ತಪಶಕ್ತಿ ಮಾವಳಿಪೋರರ ಮರಣಘಾತುಕ ಶೌರ್ಯ ವಿಜ್ರಂಬಿಸಿ ಮೊಘಲರ ಸಿಂಹಾಸನವನ್ನು ಪುಡಿಗಟ್ಟಿ ದಿಲ್ಲಿಯ ಸುಲ್ತಾನರ ರುಂಡ ಚೆಂಡಾಡಿ ತಮ್ಮ ಅಗಾಧ ಸೈನ್ಯವನ್ನು ಮುನ್ನುಗ್ಗಿಸಿ ಕಾಬೂಲ್ ನದಿಯ ತೀರದವರೆಗೆ ತಮ್ಮ ಸಾಮ್ರಾಜ್ಯ ವಿಸ್ತರಿಸಿದರು.ಉಪಗಣದ ಮರಳು ದಿಣ್ಣೆಗಳ ಮೇಲೆ ಅರಬ್ಬರನ್ನು ನಾಚಿಸುತ್ತಾ ನಮ್ಮ ಭಗವಾದ್ವಜ ಬಾನೆತ್ತರದಲ್ಲಿ ಹಾರಾಡಿತು. ಇದೆಲ್ಲಾ ಆಗಿರುವುದು ಸಂತರ ಪ್ರೇರಣೆಯಿಂದ ಶಿವಾಜಿಯ ಖಡ್ಗದ ಕಣಕಣ ನಾದ ಕುದುರೆಯಹೇಶಾರವದೊಂದಿಗೆ ಸಂತರ ತಾಳತಂಬೂರಿಗಳು ಮೊಳಗಿ ಇಡೀ ಹೋರಾಟಕ್ಕೆ ಒಂದು ದೈವಿಕ ಸ್ಪರ್ಶತೆಯನ್ನು ತಂದುಕೊಟ್ಟಿತು.ದಾಸ ಸಾಹಿತ್ಯದ ಬಗ್ಗೆ ಅದೇನೋ ಬಾಲ್ಯದಿಂದಲೂ ಒಲವು ಹೊಂದಿದ್ದವ ನಾನು. ಆ ಕಾಲದ ಜನ ಜೀವನದ ಕೆಲವು ಸೂಕ್ಷ್ಮ ಪರಿಚಯ ಮತ್ತು ಅಂದಿನ ವೈರಾಗಿಗಳ ಸಾಹಿತ್ಯ ಶ್ರೀಮಂತಿಕೆ ನಮ್ಮೊಳಗೆ ಒಂದಷ್ಟು ಕುತೂಹಲವನ್ನು ಹುಟ್ಟು ಹಾಕಿತ್ತು.

 

ಭೀಮಸೇನಜೋಶಿಯಂತ ಗಾನ ಗಂದರ್ವರು  ಸಾಹಿತ್ಯದ ಗಂಭೀರ್ಯಕ್ಕೆ ದಕ್ಕೆ ಯಾಗದಂತೆ ಸಂಗೀತದಲ್ಲೇ ಭಾವಲಹರಿ ಹರಿಸಿ ನಾವು ಇನ್ನಷ್ಟು ಸಂಗೀತವ್ಯಸನಿಗಳಾಗುವಂತೆ ಮಾಡಿ ಬಿಟ್ಟರು. ಆದರೆ ಇತ್ತೀಚೆಗೆ ಯಾಕೊ ದಾಸ ಸಾಹಿತ್ಯ ಬೇರೆಯದೇ ಕೆಲವು ಕಾರಣಗಳಿಗೆ ಇಷ್ಟವಾಗುತ್ತಿದೆ. ಪುರಂದರ ಕನಕಾದಿ ದಾಸರು ಸೇರಿದಂತೆ ಹೆಚ್ಚಿನ ದಾಸರುಗಳು  ಹದಿನೈದನೇ ಶತಮಾನದ ಆಸುಪಾಸಿನಲ್ಲಿ ಬಾಳಿ ಬದುಕಿದವರು. ಆ ಕಾಲಘಟ್ಟ ಭಾರತೀಯ ಸಂಸ್ಕೃತಿಯ ಅಳಿವು ಉಳಿವಿನ ಹೋರಾಟ ನಡೆಯುತಿದ್ದ ಸಮಯ.ಆಗಷ್ಟೆ ಹುಟ್ಟಿಕೊಂಡು ಜಗತ್ತೇ ಹುಬ್ಬೇರಿಸುವಂತೆ ಎದ್ದುನಿಂತು ದಕ್ಷಿಣ ಭಾರತವನ್ನು ೨೦೦ ವರ್ಷಗಳಕಾಲ ಆಳಿದ ವಿಜಯನಗರ ಸಾಮ್ರಾಜ್ಯದ ವೈಭವ, ಇಡೀ ದೇಶವನ್ನು ಕಾಡ್ಗಿಚ್ಚಿನಂತೆ ಆವರಿಸಿ ಮಾನವೀಯ ಮೌಲ್ಯಗಳನ್ನು ಮಣ್ಣುಮುಕ್ಕಿಸುತ್ತ ಸಾಗಿದ್ದ ಪರಕೀಯ ಮ್ಲೇಛ್ಚರ ಕ್ರೌರ್ಯ,ದೇಶದಾದ್ಯಂತ ಅವ್ಯಾಹತವಾಗಿ ನಡೆಯುತಿದ್ದ ಹಿಂದೂ ತೀರ್ಥ ಕ್ಷೇತ್ರಗಳ ದ್ವಂಸ. ಇದರ ಮದ್ಯೆ ನಮ್ಮೊಳಗೆ ಇದ್ದ ಮತಪಂಥಗಳ ಬಿನ್ನಭಿಪ್ರಾಯಗಳು ಇದೆಲ್ಲವನ್ನೂ ಬಹಳ ಹತ್ತಿರದಿಂದ ಈ ಹರಿದಾಸರು ಕಂಡಿದ್ದರು. ನಮಗರಿವಿಲ್ಲದಂತೆ ಅವರ ಸಾಹಿತ್ಯದಲ್ಲಿ ಆ ಕಾಲದ ಜನರಲ್ಲಿ ಮಡುಗಟ್ಟಿದ್ದ ಆಕ್ರೋಶ ಅಸಮಾದಾನ ಭವಿಷ್ಯದ ಬಗೆಗಿನ ಅವ್ಯಕ್ತ ಭಯ ತಮ್ಮಿಂದ ಏನೂ ಮಾಡಲಾಗದ ಹತಾಶೆ ಇದೆಲ್ಲಾ ಅವರ ರಚನೆಗಳಲ್ಲಿ ಅಲ್ಲಲ್ಲಿ ಇಣುಕಿ ತಮ್ಮ ಅಸ್ತಿತ್ವವನ್ನು ತೋರಿಸಿ ಮರೆಯಾಗುತ್ತವೆ.

 

ಐದು ಶತಮಾನಗಳ ಹಿಂದಿನ ಸಾಮಾಜಿಕ ಪರಿಸ್ಥಿತಿಗೆ ಕನ್ನಡಿ ಹಿಡಿಯುವ ಈ ದಾಸ ಸಾಹಿತ್ಯದಲ್ಲಿ ಇಂದಿನ ದಲಿತ ಚಳುವಳಿಯನ್ನೂ ಮೀರಿಸುವಷ್ಟು ಬಂಡಾಯವಿತ್ತು.ಶರಣರ ವಚನಗಳಂತೂ ಸಮಾಜದ ಕೊಂಕುಗಳನ್ನು ತಿದ್ದುವ ಏಕೈಕ ಉದ್ದೇಶದಿಂದಲೇ ರಚಿಸಲ್ಪಟ್ಟಿದೆ ಎಂದು ಕೆಲವೊಮ್ಮೆ ಅನಿಸುವುದುಂಟು. ಇದೆಲ್ಲಾ ಪ್ರಸ್ತಾಪಿಸೊದಿಕ್ಕೆ ಕೂಡ ಒಂದಷ್ಟು ಕಾರಣಗಳಿವೆ ಐದು ಶತಮಾನದ ಹಿಂದೆ ರಚನೆಯಾದ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲೂ ಸಾಮಾಜಿಕ ಕಳಕಳಿ ಕಡ್ಡಾಯವಾಗಿ ಅಳವಡಿಸಲ್ಪಡುತಿತ್ತು. ಅದರಲ್ಲೂ ದಾಸಸಾಹಿತ್ಯದಲ್ಲಿ ಬದುಕಿನ ನಶ್ವರತೆ ಮತ್ತು ವೈರಾಗ್ಯವನ್ನು ಕುಟ್ಟಿ ಕುಟ್ಟಿ ತುಂಬಲಾಗಿದೆ. ವೈರಾಗ್ಯ ಅನ್ನುವುದು ಒಂದು ಸಾಮಾಜಿಕ ಮೌಲ್ಯವಾಗಲು ಸಾದ್ಯವೇ?.. ವೈರಾಗ್ಯ ನಶ್ವರತೆಗಳು ಯಾವುದೇ ಸಾಮಾಜಿಕ ಮೌಲ್ಯಗಳಲ್ಲ ಅದು ಕೇವಲ ಬದುಕಿನಲ್ಲಿ ಸೋತು ಸಾಧಿಸಲಾಗದೆ ಕೈಚೆಲ್ಲಿ ಕುಳಿತವರ ಮನಸ್ಸಿಗೆ ಮುದ ನೀಡಲು ಹುಟ್ಟಿಕೊಂಡ ಒಂದಷ್ಟು ನಿರುಪಯೋಗಿ ಸರಕುಗಳು ಅನ್ನುವ ಹಾಗೂ ಇಲ್ಲ.

 

ವಿಜ್ಞಾನ ದಾಪುಗಾಲಿಡುತ್ತಾ ಅದೇನೋ ಗೊತ್ತುಗುರಿಯಿಲ್ಲದ ದಾರಿಯಲ್ಲಿ ಸಾಗುತಿದ್ದರೆ ಅದರ ಪರಿಣಾಮದಿಂದ  ಇಂದಿನ ಜೀವನ ವೈಭವೀಕರಣ ಮನುಷ್ಯನನ್ನು ಯಾವಾ ದಾರಿಯಲ್ಲಿ ಕೊಂಡು ಹೋಗುತ್ತಿದೆ ಅನ್ನೋದನ್ನು ಕಂಡಾಗ ನಿಜಕ್ಕೂ ವೈರಾಗ್ಯ ಯಾಕೆ ಬೇಕು ಅನ್ನೋದು ಸ್ಪಷ್ಟವಾಗುತ್ತದೆ. ಅಧನಿಕತೆ ನಮ್ಮ ಜೀವನದ ಪ್ರತಿಯೊಂದು ಭಾಗವನ್ನೂ ಆಕ್ರಮಿಸಿಕೊಂಡಿದೆ ಪಾಶ್ಚಾತ್ಯ ಪ್ರಭಾವ ನಮ್ಮನ್ನು ಈ ರೀತಿ ಮಾಡಿರಬಹುದೇ ಎಂಬ ಶಂಕೆ ಮೂಡುತ್ತದೆ. ಆದರೆ ಇದೇ ಪರಿಸ್ಥಿತಿ ೧೫ನೇ ಶತಮಾನದಲ್ಲೂ ಇತ್ತು.ಒದು ಕಡೆ ಶತಮಾನದ ಅತಿಕ್ರಮಣ ದಬ್ಬಾಳಿಕೆಯಿಂದ ನೊಂದು ಜೀವ ಭಯದಲ್ಲಿದ್ದ ಈ ದೇಶದ ಮೂಲ ನಿವಾಸಿಗಳು ಮತ್ತೊಂದು ಕಡೆ ಅದಿಕಾರ ಹಿಡಿದ ಪರಕೀಯರ ದಬ್ಬಾಳಿಕೆ ಇಲ್ಲಿನ ಮೂಲನಿವಾಸಿಗಳ ನಂಬಿಕೆಗಳ ಮೇಲಿನ ವೈಚಾರಿಕ ಹಾಗೂ ಸೈನಿಕ ಆಕ್ರಮಣ… ಆಗ ನಮ್ಮ ಸಮಾಜಕ್ಕೆ  ಸರಿಯಾದ ದಾರಿ  ತೋರಿಸಿದ್ದೇ ಈ ದಾಸ ಸಾಹಿತ್ಯ… ಅಂದು ಮಾತ್ರವಲ್ಲ ಇಂದು ಕೂಡತೋರಿಸುತ್ತದೆ. ಆದರೆ ಅವುಗಳಿಗೆ ನಾವು ತೆರೆದುಕೊಳ್ಳಬೇಕು ಅಷ್ಟೆ. ಎಲ್ಲರಿಗೂ ಆಷಾಡ ಏಕಾದಶಿಯ ಶುಭಾಶಯಗಳು   ಜೈ ಮಹಾಕಾಲ್…..

ಶ್ರೀಕಾಂತ್ ಶೆಟ್ಟಿ

ಕಾರ್ಕಳ

Leave a Reply

Your email address will not be published. Required fields are marked *

error: Content is protected !!