ಬಿಜೆಪಿಯ ನಗರ ಸಭಾ ಸದಸ್ಯನ ವಿರುದ್ಧ ಕ್ರಮಕ್ಕೆ ಡಿಸಿ , ಎಸ್ಪಿಗೆ ಮನವಿ

ಕರ್ತವ್ಯದಲ್ಲಿದ್ದ ಸರಕಾರಿ ಅಧಿಕಾರಿಯ ಮೇಲೆ  ಕ್ಷುಲಕ ಕಾರಣಕ್ಕೆ  ವಡಬಾಂಡೇಶ್ವರ ವಾರ್ಡ್ ನ ಬಿಜೆಪಿ  ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್ ನಡೆಸಿದ ಹಲ್ಲೆಯನ್ನ ಖಂಡಿಸಿ ಹಾಗು ಯೋಗೀಶ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್ ಪಿ ಹಾಗೂ ಡಿಸಿಯವರಿಗೆ ಮನವಿಯನ್ನ ಸಲ್ಲಿಸಿದರು .

ಇದೊಂದು ಅಮಾನವೀಯ ಘಟನೆ , ಈ ಹಿಂದೆ ಕೂಡ ಮಲ್ಪೆಯಲ್ಲಿ ಮೆಸ್ಕಾಂ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾಗಿತ್ತು , ನಂತರ ಮೆಸ್ಕಾಂ ನ ಇಂಜಿನಿಯರ್ ನ ಮೇಲೂ  ಹಲ್ಲೆ ನಡೆಸಲಾಯಿತು ಆದರೆ ಅವರುಗಳು ದೂರು ನೀಡಲು ಭಯ ಪಟ್ಟಿದ್ದರು , ಸರಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸುವ ಅಧಿಕಾರವನ್ನ ಯಾರು ನೀಡಿದರು ? ಸರಕಾರಿ ಅಧಿಕಾರಿಯ ಮೇಲೆ  ಒಬ್ಬ ಜನಪ್ರತಿನಿದಿಯಾಗಿ ಈ ರೀತಿಯ ವರ್ತನೆ  ಖಂಡನೀಯ. ಹಾಗಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ಅರೋಗ್ಯ ಅಧಿಕಾರಿಗೆ ನ್ಯಾಯ ಕೊಡಿಸಬೇಕು ಎಂದು  ಮನವಿ ಮಾಡಿದರು .

ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್  ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ  ನಗರ ಸಭಾ ಸದಸ್ಯರಾದ  ರಮೇಶ್ ಕಾಂಚನ್, ವಿಜಯ್ ಪೂಜಾರಿ , ಮಾಜಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಹಾಗೂ  ಜನಾರ್ದನ  ಭಂಡಾರ್ಕರ್ , ಆರ್.ಕೆ ರಮೇಶ್ , ಹಬೀಬ್ ಆಲಿ, ಸಂಧ್ಯಾ ತಿಲಕ್ ರಾಜ್  ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!