ಬಿಜೆಪಿಯ ನಗರ ಸಭಾ ಸದಸ್ಯನ ವಿರುದ್ಧ ಕ್ರಮಕ್ಕೆ ಡಿಸಿ , ಎಸ್ಪಿಗೆ ಮನವಿ
ಕರ್ತವ್ಯದಲ್ಲಿದ್ದ ಸರಕಾರಿ ಅಧಿಕಾರಿಯ ಮೇಲೆ ಕ್ಷುಲಕ ಕಾರಣಕ್ಕೆ ವಡಬಾಂಡೇಶ್ವರ ವಾರ್ಡ್ ನ ಬಿಜೆಪಿ ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್ ನಡೆಸಿದ ಹಲ್ಲೆಯನ್ನ ಖಂಡಿಸಿ ಹಾಗು ಯೋಗೀಶ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್ ಪಿ ಹಾಗೂ ಡಿಸಿಯವರಿಗೆ ಮನವಿಯನ್ನ ಸಲ್ಲಿಸಿದರು .
ಇದೊಂದು ಅಮಾನವೀಯ ಘಟನೆ , ಈ ಹಿಂದೆ ಕೂಡ ಮಲ್ಪೆಯಲ್ಲಿ ಮೆಸ್ಕಾಂ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾಗಿತ್ತು , ನಂತರ ಮೆಸ್ಕಾಂ ನ ಇಂಜಿನಿಯರ್ ನ ಮೇಲೂ ಹಲ್ಲೆ ನಡೆಸಲಾಯಿತು ಆದರೆ ಅವರುಗಳು ದೂರು ನೀಡಲು ಭಯ ಪಟ್ಟಿದ್ದರು , ಸರಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸುವ ಅಧಿಕಾರವನ್ನ ಯಾರು ನೀಡಿದರು ? ಸರಕಾರಿ ಅಧಿಕಾರಿಯ ಮೇಲೆ ಒಬ್ಬ ಜನಪ್ರತಿನಿದಿಯಾಗಿ ಈ ರೀತಿಯ ವರ್ತನೆ ಖಂಡನೀಯ. ಹಾಗಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ಅರೋಗ್ಯ ಅಧಿಕಾರಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು .
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ಶೆಟ್ಟಿ ನಗರ ಸಭಾ ಸದಸ್ಯರಾದ ರಮೇಶ್ ಕಾಂಚನ್, ವಿಜಯ್ ಪೂಜಾರಿ , ಮಾಜಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ, ಹಾಗೂ ಜನಾರ್ದನ ಭಂಡಾರ್ಕರ್ , ಆರ್.ಕೆ ರಮೇಶ್ , ಹಬೀಬ್ ಆಲಿ, ಸಂಧ್ಯಾ ತಿಲಕ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.