“ಅಂಜಲಿ ಭರ್ ಪಾನೀ” ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ

ಉಡುಪಿ: ನವಸುಮ ರಂಗಮಂಚ ಕೊಡವೂರು ತಂಡದ “ಅಂಜಲಿ ಭರ್ ಪಾನೀ” ರಾಜ್ಯದಲ್ಲಿಯೇ ಮೊದಲ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದೆ. ನವಸುಮ ರಂಗಮಂಚ ಕೊಡವೂರು ತಂಡ ಹಿಂದಿ ಭಾಷೆಯಲ್ಲಿ ಸ್ಪರ್ಧಿಸಿ ಗೆದ್ದ ಕರ್ನಾಟಕದ ಮೊದಲ ತಂಡ ಇದಾಗಿದೆ.

ಕಳೆದ 5 ವರ್ಷಗಳಿಂದ ಯಶಸ್ವಿಯಾಗಿ ಹೊಸ ಹೊಸ ನಾಟಕಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದು, ಒಂದು ಬೊಗಸೆ ನೀರು ಎಂಬ ಶೈಲೀಕೃತ ನಾಟಕವನ್ನು ಈ ಬಾರಿ ಸಿದ್ಧಪಡಿಸಿಕೊಂಡಿತ್ತು. ಮೊದಲ ಬಾರಿಗೆ ಅದನ್ನು ಹಿಂದಿಯಲ್ಲಿ “ಅಂಜಲಿ ಭರ್ ಪಾನೀ” ಸಿದ್ಧಪಡಿಸಿ ಹಿಮಾಚಲ ಪ್ರದೇಶದ ಶಿಮ್ಲಾದ ಗಯ್ಟಿ ಥಿಯೇಟರ್‌ನಲ್ಲಿ ನಡೆದ 64ನೇ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ಪ್ರದರ್ಶನ ಮಾಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

 ದೇಶದ ವಿವಿಧ ರಾಜ್ಯಗಳಿಂದ ಒಟ್ಟು 34 ನಾಟಕಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು,  ಕಲಾವಿದರು ಹಿಂದಿ ಭಾಷೆಯಲ್ಲಿ ನಾಟಕವನ್ನು ಅಭ್ಯಾಸ ಮಾಡಿ ಪ್ರದರ್ಶನ ಮಾಡಿ ಪ್ರಥಮ ಬಹುಮಾನ ಪಡೆದಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ.

ಬಹುಮಾನಗಳು: ನಮ್ಮ ತಂಡದ ಅಂಜಲಿ ಭರ್ ಪಾನೀ ನಾಟಕಕ್ಕೆ ಅತ್ಯುತ್ತಮ ನಾಟಕ ಸೇರಿದಂತೆ ಉತ್ತಮ ನಟ (ಅಲೆಕ್ಸಾಂಡರ್) ಪ್ರಶಸ್ತಿ ಹಾಗೂ ಉತ್ತಮ ನಿರ್ದೇಶನ (ಬಾಲಕೃಷ್ಣ ಕೊಡವೂರು), ಉತ್ತಮ ಬೆಳಕು ಮತ್ತು ರಂಗಸಜ್ಜಿಕೆ(ಜಯಶೇಖರ್ ಮಡಪ್ಪಾಡಿ), ಉತ್ತಮ ರಂಗವಿನ್ಯಾಸ ಮತ್ತು ಪ್ರಸಾಧನ (ವಿನೋದ್ ಕೊಡವೂರು), ಮತ್ತು ಎರಡು ಮೆಚ್ಚುಗೆಯ ನಟ(ಸುಶಾಂತ್, ವೈಶಾಖ್) ಹಾಗೂ ಒಂದು ಮೆಚ್ಚುಗೆ ನಟಿ ಪ್ರಶಸ್ತಿ (ಚಂದ್ರಾವತಿ) ಸೇರಿ ಎಂಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಮೂಲಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಹಿಂದಿ ಭಾಷೆಯಲ್ಲಿ ಪೂರ್ಣ ಪ್ರಮಾಣದ ನಾಟಕ ಪ್ರದರ್ಶನ ನೀಡಿದ ಮೊದಲ ಹವ್ಯಾಸಿ ರಂಗತಂಡವಾಗಿದ್ದು, ಇದು ರಂಗಭೂಮಿ ಇತಿಹಾಸದಲ್ಲಿಯೇ ದಾಖಲೆಯಾಗಿದೆ.

Leave a Reply

Your email address will not be published. Required fields are marked *

error: Content is protected !!