ಅಕ್ರಮ ಗೋಸಾಗಟ ಹಿನ್ನೆಲೆ: ಜುಲೈ 3ರಂದು ಹಿಂದೂ ಸಂಘಟನೆಗಳ ಪ್ರತಿಭಟನೆ

ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಗೋಸಾಗಟ ನಡೆಯುತ್ತಿದ್ದು ಜುಲೈ 3ರಂದು ಭಜರಂಗದಳ ಹಾಗೂ ಹಿಂದು ಜಾಗರಣವೇದಿಕೆ ಜಂಟಿಯಾಗಿ ಜಿಲ್ಲೆಯ ಐದು ಕೇಂದ್ರಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸುವುದಾಗಿ  ಭಜರಂಗದಳದ ರಾಜ್ಯ ಸಂಚಾಲಕರಾದ ಸುನೀಲ್. ಕೆ .ಆರ್  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು ಗೋಕಳ್ಳತನ ಸಾಮಾಜಿಕ ಪಿಡುಗಾಗಿದ್ದು, ತಡೆಯಲು ಹೋದ ಕಾರ್ಯಕರ್ತರ ಮೇಲೆ ಬೇಕಾಬಿಟ್ಟಿ ಕೇಸುಗಳನ್ನು ಹಾಕಲಾಗುತ್ತಿದೆ, ಸರಕಾರ ಮತ್ತು ಪೋಲಿಸ್ ಇಲಾಖೆ ಈ ಅಕ್ರಮ ಗೋಸಾಗಟದ ವಿಚಾರದಲ್ಲಿ ಪಾರದರ್ಶಕವಾಗಿ ತನಿಖೆ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಸಿದರು.

 ಜುಲೈ ೩ ರಂದು ಬೆಳಿಗ್ಗೆ 10:30 ರಿಂದ 12 ಗಂಟೆಯವರೆಗೆ ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪುವಿನ ತಹಶಿಲ್ದಾರರ ಕಚೇರಿಯೆದುರು ಧರಣಿ ಮಾಡಲಾಗುವುದು ಎಂದು ಈ ಸಂಧರ್ಭ ತಿಳಿಸಿದರು. ಈ ವೇಳೆ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಪ್ರಕಾಶ್ ಕುಕ್ಕೆಹಳ್ಳಿ, ಭಜರಂಗದಳದ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ವಿಶ್ವ ಹಿಂದೂ ಪರಿಷದ್ ಮುಖಂಡರಾದ ದಿನೇಶ್ ಶೆಟ್ಟಿ ಹೆಬ್ರಿ, ಪ್ರಮೋದ್ ಶೆಟ್ಟಿ ಮಂದಾರ್ತಿ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!