ಸೋಲನ್ನು ಸವಾಲಾಗಿ ಸ್ವೀಕರಿಸಿ -ಮಾಜಿ ಸಚಿವ ರೈ ಕಿವಿಮಾತು

ಬಂಟ್ವಾಳ: ಸೋಲನ್ನು ಸವಾಲಾಗಿ ಸ್ವೀಕರಿಸಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಮಂಗಳವಾರ ಕಂದೂರು ಗೌರಿಗಣೇಶ ಸಭಾಭವನದಲ್ಲಿ ನಡೆದ ಸಜೀಪಮುನ್ನೂರು ಗ್ರಾಪಂ ವ್ಯಾಪ್ತಿಗೊಳಪಟ್ಟ ಚುನಾಯಿತ ಜನಪ್ರತಿನಿಧಿಗಳ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಪಂಚಾಯತ್ ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಂiiತ್ ಮಟ್ಟದಲ್ಲಿ ಪ್ರತಿಯೊಂದು ಅಭಿವೃದ್ದಿ ವಿಷಯಕ್ಕೂ ವಿಶೇಷ ಗಮನ ನೀಡಿ ಶಕ್ತಿ ಮೀರಿ ಜನರ ಸೇವೆ ಮಾಡಿದರೂ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ  ವೀರೋಚಿತ ಸೋಲುಂಟಾಗಿದೆ ಎಂದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಬಿ.ಎಂ. ಅಬ್ಬಾಸ್ ಅಲಿ, ಸದಸ್ಯರಾದ ನಸೀಮ ಬೇಗಂ, ಸಜೀಪಮುನ್ನೂರು ಪಂಚಾಯತ್ ಅಧ್ಯಕ್ಷರಾದ ಶರೀಫ್ ಆಲಾಡಿ, ಹರೀಶ್ ಗಟ್ಟಿ ಮಾರ್ನಬೈಲು, ಎನ್ ದೇವರಾಯರ್ ಬೊಕ್ಕಸ, ಬಶೀರ್ ನಂದಾವರ, ಅಝೀಝ್ ಕೊಪ್ಪಳ ಧನಂಜಯ ಶೆಟ್ಟಿ ಪರಾರಿ, ಇಕ್ಬಾಲ್ ಮಲಾಯಿಬೆಟ್ಟು, ಹೇಮಾವತಿ, ಜನಾರ್ಧನ ಮಾರ್ನಬೈಲು, ಫಾತಿಮಾ ಝೊಹರಾ, ಕರೀಂ ನಂದಾವರ, ಇಬ್ರಾಹಿಂ ಮಲಾಯಿಬೆಟ್ಟು, ಬದುದ್ದಿನ್ ಮುನ್ನೂರು ಮೊದಲಾದವರು ಭಾಗವಹಿಸಿದ್ದರು. ಸಜೀಪಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಯೂಸೂಫ್ ಕರಂದಾಡಿ ಸ್ವಾಗತಿಸಿ ಕಬೀರ್ ಆಲಾಡಿ ವಂದಿಸಿದರು. ಇದೇ ವೇಳೆ ಮಾಜಿ ಸಚಿವ ರಮಾನಾಥ ರೈ ಅವರ ನೇತ್ರತ್ವದಲಿ ಸಜೀಪಮುನ್ನೂರು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಯೂಸೂಫ್ ಕರಂದಾಡಿ ಅವರನ್ನು ಮುಂದಿನ ಅವಧಿಗೆ ಸರ್ವಾನುಮತದಿಂದ ಮರು ಆಯ್ಕೆಗೊಳಿಸಲಾಯಿತು.                

Leave a Reply

Your email address will not be published. Required fields are marked *

error: Content is protected !!