ಕಲ್ಲಡ್ಕ ಶಾಲೆಯಲ್ಲಿ ತಾಲೂಕು ಮಟ್ಟದ ಕರಾಟೆ ಸ್ಪರ್ಧೆ

ಬಂಟ್ವಾಳ:   ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಬಂಟ್ವಾಳ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯು     ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಜಿತ ಭವನದಲ್ಲಿ  ನಡೆಯಿತು. ಸ್ಪಧೆ ೯ಯನ್ನು ಉದ್ಘಾಟಿಸಿ ಮಾತನಾಡಿದ.  ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್‌ರವರು ಕರಾಟೆ ಕೇವಲ ಪ್ರದರ್ಶನಕ್ಕಾಗಿ ಅಲ್ಲ, ಬದಲಾಗಿ ಅದೊಂದು ಆತ್ಮ ರಕ್ಷಣೆಯ ಕಲೆಯೂ ಆಗಿದೆ. ಕರಾಟೆ ತನ್ನ ಎದುರಾಳಿಯನ್ನು ಹೇಗೆ ಎದುರಿಸಬೇಕೆನ್ನುವುದನ್ನು ಕಲಿಸಿ ಕೊಡುತ್ತದೆ.

ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕ್ಕೆ ಸೀಮಿತವಾಗದೆ, ಆಟೋಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.೧೪ ಮತ್ತು ೧೭ ರ ವಯೋಮಿತಿಯ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾರ್ಥಿಗಳ ಕರಾಟೆ ಸ್ಪರ್ಧೆಯಲ್ಲಿ ವಿವಿಧ ಶಾಲೆಯಿಂದ ಒಟ್ಟು ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಅ ಪ್ರಥಮ ಸ್ಥಾನ ಪಡೆದ ಮಕ್ಕಳನ್ನು ಫಲಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು, ಪ್ರಥಮ ಸ್ಥಾನ ಪಡೆದ ಮಕ್ಕಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
   ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಲಕರಾದ ವಸಂತಮಾಧವ, ಸಹ ಸಂಚಲಕರಾದ ರಮೇಶ್ ಎನ್, ರಾಷ್ರೀಯ ಕರಾಟೆ ತೀರ್ಪುಗಾರರಾದ ಧರ್ನಪ್ಪ, ರಾಷ್ರೀಯ ಕರಾಟೆ ತೀರ್ಪುಗಾರರಾದ ದಿನೇಶ್, ಶ್ರೀರಾಮ ಪ್ರಾಥಮಿಕ ಶಾಲಾ ಸಮಿತಿ ಅದ್ಯಕ್ಷರಾದ ಚಂದ್ರಶೇಖರ್ ಸಾಲ್ಯಾನ್,ಕಾರ್ಯದರ್ಶಿ ಜಯರಾಮ ರೈ, ಬಾಳ್ತಿಲ ವಲಯದ ಸಂಪನ್ಮೂಲ ವ್ಯಕ್ತಿಯಾಗಿರುವ ಆರತಿ, ಶಾಲಾ ಮುಖ್ಯೋಪಾಧ್ಯಾಯರದ ರವಿರಾಜ್ ಕಣಂತೂರು ವೇದಿಕೆಯಲ್ಲಿದ್ದರು.
. ಶ್ರೀರಾಮ ಪ್ರಾಥಮಿಕ ಶಾಲೆಯ ಅಧ್ಯಾಪಕಿ  ರಕ್ಷಿತಾ ನಿರೂಪಿಸಿ, ರಾಧಿಕ ಸ್ವಾಗತಿಸಿದರು .ದಿವ್ಯ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!