ಉಡುಪಿ: ರೋಡ್ ರೋಮಿಯೊಗೆ ಥಳಿಸಿದ ಯುವತಿಯರು

ಉಡುಪಿ:  ರೋಡ್ ರೋಮಿಯೊನೊಬ್ಬ ಬಟ್ಟೆಯಂಗಡಿಗೆ ಕೆಲಸಕ್ಕೆ ಹೋಗುವ ಯುವತಿಯರಿಗೆ ದಿನ ನಿತ್ಯ ನೀಡುತ್ತಿದ್ದ .ಈ ಕಿರುಕುಳ ತಾಳಲಾರದೆ ಯುವತಿಯರೇ ಸೇರಿ ರೋಡ್ ರೋಮಿಯೊನನ್ನು  ಹಣ್ಣುಗಾಯಿ ನೀರುಗಾಯಿ ಮಾಡಿದ ಘಟನೆ ಇಂದು ನಗರದಲ್ಲಿ ನಡೆದಿದೆ.

ಉಡುಪಿ ನಗರದ ಗೀತಾಂಜಲಿ ಚಿತ್ರ ಮಂದಿರ ರಸ್ತೆಯಲ್ಲಿ ದಿನ ನಿತ್ಯ ಬೈಕ್‌ನಲ್ಲಿ ಬರುವ ಕಟಪಾಡಿ ಮಟ್ಟುವಿನ ಯುವಕನೊರ್ವ ಬಟ್ಟೆ ಅಂಗಡಿಗೆ ಬರುವ ಯುವತಿಯರನ್ನು ತಡೆದು ನಿಲ್ಲಿಸಿ ನನಗೆ ನಿಮ್ಮ ಗಂಡನ ಪರಿಚಯವಿದೆ , ನನಗೆ ಬೋಟ್ ಇದೆ ಮೀನು ತಂದು ಕೊಡುವೆ ಬೇಕಾ ಎಂದು ಹೇಳುತ್ತ ಹಿಂಬಾಲಿಸುತ್ತಾನೆ. ಹೀಗೆ ಹೇಳುತ್ತ ಮತ್ತೂ ಮುಂದೆ ಹೋಗಿ ನಿನ್ನ ಮೊಬೈಲ್ ನಂಬರ್ ನೀಡೆಂದು ಯುವತಿಯರಿಗೆ ಪೀಡಿಸುತ್ತಿದ್ದ. ಈ ಕಾಮುಕನ ಉಪಟಳ ಸಹಿಸಿ ಸಹಿಸಿ ರೋಸಿ ಹೋದ ಬಟ್ಟೆ ಅಂಗಡಿ ಕಾರ್ಮಿಕರು ಇಂದು ಬೆಳಿಗ್ಗೆ ಈತ ಹಿಂಬಾಲಿಸಿ ಕೊಂಡು ಬಂದರೆ ಏನಾದರೂ ಮಾಡಿ ಬುದ್ಧಿಕಳಿಸಬೇಕೆಂದು ಪ್ಲಾನ್ ರೂಪಿಸಿದ್ದರು.

ಇಂದು 9 ಗಂಟೆಯಾಗುತ್ತಿದ್ದಂತೆ ಬೈಕ್ ಏರಿ ಬಂದ ರೋಮಿಯೋ ಸಿಟಿ ಬಸ್ ನಿಲ್ದಾಣ ಬಳಿಯ ಮಸೀದಿ ರಸ್ತೆ ಬಳಿ ಯುವತಿಯೊಬ್ಬಳಿಗೆ ಸೀಟಿ ಹಾಕಿ ಕರೆದೆ ಬಿಟ್ಟ. ತಕ್ಷಣ ಅಲ್ಲಿ ಸೇರಿದ ಬಟ್ಟೆಯಂಗಡಿಯ ಏಳೆಂಟು ಯುವತಿಯರು ಸೇರಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.ಇವರ ಸಿಟ್ಟಿನ ಕಟ್ಟೆಯೊಡೆದು ಯವಕನ ಮುಖ ಮೂತಿ ನೋಡದೆ ಚಚ್ಚಿದ್ದಾರೆ. ಇನ್ನೇನು ಬದುಕಿದರೆ ಮಲ್ಪೆಯಲ್ಲಿ ಮೀನು ಹೆಕ್ಕಿಯಾದರೂ ಬದುಕಿಕೊಳ್ಳುತ್ತೇನೆ ಎಂದು ಎದ್ದನೋ ಬಿದ್ದೆನೋ ಓಡಿದ ಕಾಮುಕ ತಾನು ಧರಿಸಿದ ಅಂಗಿಯು ಇಲ್ಲದೆ ಕಾಲ್ಕಿತ್ತಿದ್ದ. ಈ ಬಗ್ಗೆ ಬಟ್ಟೆಯಂಗಡಿ ಸಿಬಂದಿಗಳು ದೂರು ನೀಡಲು ಹಿಂಜರಿದಿದ್ದಾಗಿ ನಗರ ಪೊಲೀಸರು ತಿಳಿಸಿದ್ದಾರೆ

3 thoughts on “ಉಡುಪಿ: ರೋಡ್ ರೋಮಿಯೊಗೆ ಥಳಿಸಿದ ಯುವತಿಯರು

Leave a Reply to Sumith malpe Cancel reply

Your email address will not be published. Required fields are marked *

error: Content is protected !!