ಉಡುಪಿ:ಡಿಎಲ್ ಇಲ್ಲದವನಿಗೆ ಬುಲೆಟ್ ನೀಡಿದಾತನಿಗೆ 5000 ರೂ.ದಂಡ!, 3.69 ಲಕ್ಷ ರೂ. ದಂಡ ವಸೂಲಿ
ಉಡುಪಿ: ಸಂಚಾರ ನಿಯಮ ಉಲ್ಲಂಘನೆಯ ಪರಿಷ್ಕೃತ ದಂಡ ವಸೂಲಿಗೆ ವಾಹನ ಸವಾರರು, ಮಾಲಿಕರು ಕೇಂದ್ರ ಸರಕಾರದ ನಿಯಮದ ವಿರುದ್ಧ ತೀವೃ ಅಸಮಾಧನ ವ್ಯಕ್ತ ಪಡಿಸುತ್ತಿದ್ದಾರೆ.
ಅಂಬಲಪಾಡಿ ಪರಿಸರದಲ್ಲಿ ಸೆ.7 ರಂದು ಹೆಲ್ಮೆಟ್ ಇಲ್ಲದೇ ಬುಲೆಟ್ ಓಡಿಸುತಿದ್ದ ಇಬ್ಬರನ್ನು ಅಡ್ಡಗಟ್ಟಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಬುಲೆಟ್ ಚಲಾಯಿಸುತಿದ್ದ ವ್ಯಕ್ತಿ ಬಳಿ ಡಿಎಲ್ ಇಲ್ಲದ ಕಾರಣ ಐದು ಸಾವಿರ ದಂಡ ವಿಧಿಸಿದ್ದಾರೆ.
ನಗರದ ಎಮ್ .ಜಿ.ಎಮ್ ಕಾಲೇಜಿನ ವಿದ್ಯಾರ್ಥಿಗಳು ಡಿ.ಎಲ್ ಹಾಗೂ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದ ಪರಿಣಾಮ ರೂ. 5000 , ದಂಡ ಹಾಕಲಾಗಿದೆ.
ಅಲ್ಲದೇ ಡಿಎಲ್ ಇಲ್ಲದ ವ್ಯಕ್ತಿಗೆ ಬೈಕ್ ನೀಡಿದ ಕಾರಣಕ್ಕಾಗಿ ಮಾಲಿಕನಿಗೆ ರೂ. 5 ಸಾವಿರ ದಂಡ ವಿಧಿಸಿದ್ದಾರೆ. ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ ಹಿಂಬದಿ ಸವಾರನಿಗೆ ಸೇರಿದಂತೆ 2 ಸಾವಿರ ರೂ., ದಂಡ ವಿಧಿಸಲಾಗಿದೆ. ಸವಾರನ ಬಳಿ ಡಿಎಲ್ ಇಲ್ಲದ ಹಿನ್ನೆಲೆಯಲ್ಲಿ ಬುಲೆಟ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ದಂಡ ಪಾವತಿ ಬಳಿಕ ಬೈಕ್ ಬಿಡಿಸಿಕೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸೆ.5ರಿಂದ ಜಾರಿಯಲ್ಲಿದೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಬಗ್ಗೆ752 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದು, 167 ಪ್ರಕರಣಗಳಿಗೆ ನೋಟಿಸ್ ನೀಡಲಾಗಿದೆ. ಉಳಿದ 585 ಪ್ರಕರಣಗಳಲ್ಲಿ 3.69,200 ರೂ. ಸ್ಥಳ ದಂಡವನ್ನು ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.