ಕೊರ್ಗಿ ಗ್ರಾಪಂ ವ್ಯಾಪ್ತಿಯಲ್ಲಿ ಉಳಿಗಮಾನ್ಯ ಪದ್ಧತಿ, ಪಾಳೆಗಾರಿಕೆ ಜೀವಂತ: ಮಂಜುನಾಥ ಗಿಳಿಯಾರು
ಕುಂದಾಪುರ: ದಲಿತರು, ಶೋಷಿತ ಸಮುದಾಯದ ಶೋಚನೀಯ ಬದುಕು ಬದಲಾಯಿಸಲು ಡಾ.ಬಿ. ಆರ್. ಅಂಬೇಡ್ಕರ್ ಬರೆದ ಸಂವಿಧಾನದ ಕಲ್ಪನೆಗಳನ್ನು ಬದಿಗೊತ್ತಿ ಕೆಲವು ಅಧಿಕಾರಿಗಳು ದಮನಿತರನ್ನು ಅಸಡ್ಡೆ ಮಾಡುತ್ತಿರುವುದು ಸರಿಯಲ್ಲ. ಕೊರ್ಗಿ ಗ್ರಾಪಂ ವ್ಯಾಪ್ತಿಯಲ್ಲಿ ಉಳಿಗಮಾನ್ಯ ಪದ್ಧತಿ, ಪಾಳೆಗಾರಿಕೆ ಜೀವಂತವಾಗಿರುವುದು ಕಂಡುಬರುತ್ತಿ ದೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಘಟನಾ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಆರೋಪಿಸಿದ್ದಾರೆ.
ಇತ್ತೀಚೆಗೆ ಅಧಿಕೃತವಾಗಿ ಕರೆದ ನಿಗದಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಶೇಷ ಗ್ರಾಮಸಭೆ ರದ್ದುಗೊಳಿಸಿದ ಕೊರ್ಗಿ ಗ್ರಾಪಂ ಬರ್ಕಾಸ್ತುಗೊಳಿಸು ವಂತೆ ಹಾಗೂ ಪಿಡಿಒ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಕೊರ್ಗಿ ಗ್ರಾಪಂ ಎದುರು ಮಂಗಳವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಈ ಗ್ರಾಪಂ ವ್ಯಾಪ್ತಿಯಲ್ಲಿ 56 ದಲಿತ ಕುಟುಂಬವಿದ್ದು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡದ ಪರಿಸ್ಥಿತಿ ನಿರ್ಮಾಣವಾಗಿದ್ದು ಇದಕ್ಕೆ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ಕಾರಣವಾಗಿದೆ. ಸ್ಮಶಾನಕ್ಕೆ ಜಾಗ ಕಾಯ್ದಿರಿಸಲಾಗದ ಹೊಣೆಗೇಡಿ ಪಂಚಾಯತ್ ಇದಾಗಿದೆ. ಡಿ.27ರಂದು ದಲಿತ ಸಮುದಾಯದ ವಿಶೇಷ ಸಭೆ ಕರೆದ ಬಳಿಕ ಅದೇ ದಿನ ವಿಕಸಿತ ಭಾರತ ಕಾರ್ಯಕ್ರಮ ನಡೆಸಿ ದಲಿತರ ಗ್ರಾಮಸಭೆ ಮೊಟಕುಗೊಳಿಸಿದರು ಎಂದು ಅವರು ದೂರಿದರು.
ಈ ರೀತಿ ಅಸಡ್ಡೆ ತೋರಿ ದಲಿತರ ಸ್ವಾಭಿಮಾನಕ್ಕೆ ಘಾಸಿ ಮಾಡುವುದು ಸರಿಯಲ್ಲ. ಗ್ರಾಪಂ ವ್ಯಾಪ್ತಿಯಲ್ಲಿ ಅಧಿಕಾರಿಗಳು ರಾಜಕೀಯ ಹಸ್ತಕ್ಷೇಪಕ್ಕೊಳಗಾಗುತ್ತಿ ದ್ದು ದಲಿತರು ಇಂತಹ ಅವಮಾನ ಸಹಿಸುವುದಿಲ್ಲ. ಅನ್ಯಾಯದ ವಿರುದ್ಧ ಧ್ವನಿಯೆ ತ್ತಲು ಹೋದವರನ್ನು ಗ್ರಾಪಂ ನಕ್ಸಲರಂತೆ ಕಾಣಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಪಾಳೆಗಾರಿಕೆ ಪದ್ಧತಿ ಸರಿಪಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಇದು ಸಾಂಕೇತಿಕ ಹೋರಾಟವಾಗಿದ್ದು ಮುಂದಿನ ದಿನದಲ್ಲಿ ಎಲ್ಲಾ ದಲಿತ ವಿರೋಧಿ ಪಂಚಾಯತಿಗಳಿಗೆ ಎಚ್ಚರಿಕೆ ಕರೆ ಗಂಟೆಯಾಗಿದೆ ಎಂದರು.
ದಸಂಸ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ ಮಾತನಾಡಿ, ಕೊರ್ಗಿ ಗ್ರಾಪಂ ವ್ಯಾಪ್ತಿಯಲ್ಲಿ ಪಾಳೆಗಾರಿಕೆ ನಡೆಯುತ್ತಿರುವುದು ಕಂಡುಬರುತ್ತಿದೆ. ಇಲ್ಲಿ ಹತ್ತು ಹಲವು ಜ್ವಲಂತ ಸಮಸ್ಯೆ ಕಾಡುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿದ್ದೆಯಲ್ಲಿದ್ದಾರೆ. ಎಸ್ಸಿ-ಎಸ್ಟಿ ನಿಧಿ ದುರುಪಯೋಗ ವಾಗುತ್ತಿದೆ. ಮೂಲನಿವಾಸಿಗರಿಗೆ ಮೂಲಸೌಕರ್ಯ ಒದಗಿಸಲಾಗದೆ ದಲಿತರನ್ನು ಕಡೆಗಣಿ ಸುವವರು ವಿಕಸಿತ ಭಾರತ ಮಾಡಲು ಹೊರಟಿದ್ದಾರೋ ವಿಕೃತ ಭಾರತ ಮಾಡಲು ಹೊರಟಿದ್ದಾರೋ ಎಂಬುದು ಪ್ರಶ್ನೆಯಾಗಿದೆ. ದಲಿತ, ಶೋಷಿತರ ಹಕ್ಕುಗಳನ್ನು ಪಡೆಯಲು ಕಾನೂನಾತ್ಮಕವಾಗಿ ಉಘ್ರ ಹೋರಾಟ ಮಾಡುವುದು ಅನಿವಾರ್ಯ ಎಂದರು.
ದಸಂಸ ವಿವಿಧ ಗ್ರಾಮ ಶಾಖೆಗಳ ಪದಾಧಿಕಾರಿಗಳಾದ ಚಂದ್ರ ಉಳ್ಳೂರು, ಸುರೇಶ್ ಮೂಡುಬಗೆ, ಸುರೇಶ್ ಹಕ್ಲಾಡಿ, ಮಂಜುನಾಥ ನಾಗೂರು, ರಾಜು ಕೊರ್ಗಿ, ಅಣ್ಣಪ್ಪ ಬೆಟ್ಟಿನಮನೆ, ಭಾಸ್ಕರ ಕಿರಗಾವ, ಗೋವಿಂದ ಹಳೆಗೆರೆ, ರಮೇಶ ನಾಡಗುಡ್ಡೆಯಂಗಡಿ, ಶ್ರೀಕಾಂತ ಹಿಜಾಣ, ಹುಲಿಯ ಹೊಸ್ಮಠ, ದಿನೇಶ್ ಹೊಸ್ಮಠ, ಚಂದ್ರ ಹೊಸ್ಮಠ, ಚಂದ್ರ ಕೊರ್ಗಿ, ಕೃಷ್ಣ ಕೊರ್ಗಿ, ಶೇಖರ್ ಕೊರ್ಗಿ, ಮಾಧವ, ಉಮೇಶ, ಪ್ರಭಾಕರ್ ಬಿ., ಪ್ರವೀಣ್ ಕುಮಾರ್ ಬಿ. ಅಮಾಸೆಬೈಲು, ಸ್ಥಳೀಯರಾದ ದುರ್ಗಿ ಕೊರ್ಗಿ, ಲಕ್ಷ್ಮೀ, ಚಂದು, ಮುದ್ದು ಮೊದಲಾದವರು ಉಪಸ್ಥಿತರಿದ್ದರು.