ಪಕ್ಷಿಕೆರೆ: ಹುಟ್ಟೂರಲ್ಲಿ ಬೆಳ್ಳಿ ಕಿರೀಟ ತೊಡಿಸಿ ಪೇಜಾವರ ಶ್ರೀಗಳಿಗೆ ಗೌರವ

ಮಂಗಳೂರು: ಅರುವತ್ತರ ಅಭಿವಂದನೆ ಸ್ವೀಕರಿಸಿದ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಪಕ್ಷಿಕೆರೆಯ ಗ್ರಾಮಸ್ಥರು ಬೆಳ್ಳಿ ಕಿರೀಟ ಸಹಿತ ವೈಭವದ ಅಭಿನಂದನೆ ಸಲ್ಲಿಸಲಾಯಿತು.

ಶ್ರೀಗಳು ಹುಟ್ಟಿದ ಮನೆಯಲ್ಲಿ ಪೂರ್ವಾಶ್ರಮದ ಕುಟುಂಬಸ್ಥರು ವಿದ್ವಾನ್ ದೇವೇಶ ಭಟ್ ವಿದ್ವಾನ್ ವಿಶ್ವೇಶ ಭಟ್ಅರ ನೇತೃತ್ವದಲ್ಲಿ ಧನ್ವಂತರಿ ಯಾಗ ನೆರವೇರಿಸಿದರು. ಪಟ್ಟದ ದೇವರಾದ ರಾಮವಿಠಲ ದೇವರ ಪೂಜೆ ನಡೆಸಿ ಶ್ರೀಗಳು ಭಿಕ್ಷೆ ಸ್ವೀಕರಿಸಿದ ಬಳಿಕ ಸಭಾ ಕಾರ್ಯಕ್ರಮ ನೆರವೇರಿತು. ಶ್ರೀಗಳಿಗೆ ಬೃಹತ್ ಹೂವಿನ ಮಾಲೆ ಬೆಳ್ಳಿ ಕಿರೀಟ ಶಾಲು ಫಲಪುಷ್ಪ ಗುರುಕಾಣಿಕೆ ಅರ್ಪಿಸಿದರು. ಈ ಸಂದರ್ಭ ಸುದೀರ್ಘ ವಾಗಿ ಮಾತನಾಡಿ ಸಂದೇಶ ನೀಡಿದ ಶ್ರೀಗಳು ಪಕ್ಷಿಕೆರೆಯ ಗ್ರಾಮ ಅಲ್ಲಿನ ಪರಿಸರ ಜನತೆ, ಅಲ್ಲಿ ನಡೆಸಿದ ಜೀವನ ತಮ್ಮ ಮೇಲೆ ಬೀರಿದ ಪ್ರಭಾವವನ್ನು ಭಾವಪೂರ್ಣವಾಗಿ ಸ್ಮರಿಸಿಕೊಂಡರು.

ಹುಟ್ಟೂರ ಜನತೆ ತೋರಿದ ಅಭಿಮಾನ ಪ್ರೀತಿಯಿಂದ ಸಂತಸವಾಗಿದೆ. ಮುಂದೆಯೂ ಶ್ರೀಮಠದೊಂದಿಗೆ ಇದೇನಂಟು ಬಾಂಧವ್ಯವನ್ನು ಹೊಂದಿರುವಂತೆ ತಿಳಿಸಿದರು.

ಪಕ್ಷಿಕೆರೆಯ ಸರ್ವಧರ್ಮೀಯ ಮುಖಮಡರು ಜನಪ್ರತಿನಿಧಿಗಳು, ಪ್ರದೀಪ್ ಕುಮಾರ್ ಕಲ್ಕೂರ ಹರಿಕೃಷ್ಣಪುನರೂರು, ಭುವನಾಭಿರಾಮ ಉಡುಪ ಪಟೇಲ್ ವಾಸುದೇವ ರಾವ್ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!