ಅಗ್ನಿಪಥ್ ಯೋಜನೆಗೆ ವಿರೋಧ: ಪ್ರಧಾನಿಗೆ ಎಎಪಿ ಚೆಕ್ ಕಳುಹಿಸಿದ ಮೊತ್ತ ಎಷ್ಟು ಗೊತ್ತಾ..?
ಲಖನೌ: ಅಗ್ನಿಪಥ್ ಯೋಜನೆ ವಿರೋಧಿಸಿ ಆಮ್ ಆದ್ಮಿ ಪಕ್ಷ ಭಾನುವಾರ ಲಖನೌನಲ್ಲಿ ಪ್ರತಿಭಟನೆ ನಡೆಸಿತು. ನೂತನ ಮಿಲಿಟರಿ ನೇಮಕಾತಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಯುವಕರನ್ನು ವಂಚಿಸಿದೆ ಎಂದು ಆರೋಪಿಸಿ, ಪ್ರಧಾನಿ ನರೇಂದ್ರ ಮೋದಿಗೆ 420 ರೂ. ಚೆಕ್ ಕಳುಹಿಸಿರುವುದಾಗಿ ಎಎಪಿ ಹೇಳಿದೆ.
ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ಘಟಕ ಸಿವೈಎಸ್ ಎಸ್ ಸಾರ್ವಜನಿಕರಿಂದ ಹಣ ಕೋರಿತು. ಈ ಕುರಿತು ಟ್ವೀಟ್ ಮಾಡಿರುವ ಉತ್ತರ ಪ್ರದೇಶ ಎಎಪಿ ಉಸ್ತುವಾರಿ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಭಾರತೀಯ ಸೇನೆಗಾಗಿ ಹಣ ಇಲ್ಲ ಎಂದು ಮೋದಿ ಹೇಳುತ್ತಾರೆ.
ಯೋಧರಿಗೆ ಕೇವಲ ನಾಲ್ಕು ವರ್ಷಗಳ ವರಗೆ ಮಾತ್ರ ಉದ್ಯೋಗ ನೀಡಲಾಗುತ್ತದೆ. ಉತ್ತರ ಪ್ರದೇಶ ಎಎಪಿ ವಿದ್ಯಾರ್ಥಿ ಘಟಕ ರಾಜ್ಯಾದ್ಯಂತ ಬೇಡಿ, 420 ಮೋದಿ ಸರ್ಕಾರಕ್ಕೆ 420 ರೂ. ಚೆಕ್ ನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.