ಲಕ್ಷ್ಮಣ ರೇಖೆ ದಾಟುತ್ತಿರುವ ಸೋಶಿಯಲ್ ಮೀಡಿಯಾಗಳನ್ನು ನಿಯಂತ್ರಿಸಬೇಕಾಗಿದೆ- ಸುಪ್ರೀಂ ಜಡ್ಜ್

ನವದೆಹಲಿ: ನ್ಯಾಯಮೂರ್ತಿಗಳ ಕುರಿತು ವೈಯಕ್ತಿಕವಾಗಿ ದಾಳಿ ನಡೆಸುತ್ತಿರುವ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳು ಲಕ್ಷ್ಮಣ ರೇಖೆ ದಾಟುತ್ತಿರುವುದು ಅಪಾಯಕಾರಿ ಎಂದಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜೆಬಿ ಪರ್ದಿವಾಲಾ, ಸಂವಿಧಾನದಡಿ ಕಾನೂನು ಸುವ್ಯವಸ್ಥೆ ಕಾಪಾಡಲು ದೇಶದಲ್ಲಿ ಇವುಗಳ ಕಡ್ಡಾಯವಾಗಿ ನಿಯಂತ್ರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಕ್ಷಮೆ ಕೇಳಬೇಕೆಂದು ತಾಕೀತು ಮಾಡಿದ್ದ ನ್ಯಾಯಪೀಠ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿರುವಂತೆಯೇ ನ್ಯಾಯಮೂರ್ತಿ ಪರ್ದಿವಾಲಾ ಕಾರ್ಯಕ್ರಮವೊಂದರಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಆ ನ್ಯಾಯಪೀಠದಲ್ಲಿ ಪರ್ದಿವಾಲಾ ಕೂಡಾ ಸದಸ್ಯರಾಗಿದ್ದರು.

ದೇಶದಲ್ಲಿ ಮಾಹಿತಿಯುಕ್ತ, ಪ್ರಬುದ್ದ ಪ್ರಜಾಪ್ರಭುತ್ವವನ್ನು ವರ್ಗೀಕರಿಸಲು ಸಾಧ್ಯವಿಲ್ಲ, ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳು ಆಗಾಗ್ಗೆ ಕಾನೂನಾತ್ಮಕ ಮತ್ತು ಸಂವಿಧಾನಿಕ ವಿಚಾರಗಳನ್ನು ರಾಜಕಾರಣಗೊಳಿಸುತ್ತಿವೆ, ನ್ಯಾಯದಾನ ವ್ಯವಸ್ಥೆಯಲ್ಲೂ ಅನಗತ್ಯವಾಗಿ ಮಧ್ಯಪ್ರವೇಶಿಸುವ ಪ್ರಯತ್ನ ಮಾಡುತ್ತಿವೆ ಎಂದು ಅವರು ಹೇಳಿದರು.

ಸೋಶಿಯಲ್ ಮೀಡಿಯಾಗಳು ಅನೇಕ ಸಂದರ್ಭಗಳಲ್ಲಿ ಲಕ್ಷ್ಮಣ ರೇಖೆಯನ್ನು ದಾಟುತ್ತಿರುವುದು ಹೆಚ್ಚಿನ ಅಪಾಯಕಾರಿಯಾಗಿದೆ. ಇವುಗಳನ್ನು ದೇಶದಲ್ಲಿ ಕಡ್ಡಾಯವಾಗಿ ನಿಯಂತ್ರಿಸಬೇಕಾದ ಅಗತ್ಯವಿದೆ. ತೀರ್ಪಿಗಾಗಿ ನಮ್ಮ ಜಡ್ಡ್ ಗಳ ಮೇಲಿನ ದಾಳಿಯಂತಹ ಪ್ರಯತ್ನಗಳು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗಲಿವೆ . ಜಡ್ಜ್ ಗಳು ಸೋಶಿಯಲ್ ಮೀಡಿಯಾ ಚರ್ಚೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!