ಸಹಕಾರಿ ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷರಾಗಿ ಸತತ 4ನೇ ಬಾರಿಗೆ ಯಶ್‌ಪಾಲ್ ಸುವರ್ಣ ಆಯ್ಕೆ

ಮಂಗಳೂರು: ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಹಕಾರಿ ರಂಗದ ಹಿರಿಯ ಸಂಸ್ಥೆಯಾದ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿಗೆ 2024-29ನೇ ಸಾಲಿಗೆ ಅಧ್ಯಕ್ಷರಾಗಿ ಸತತ 4ನೇ ಬಾರಿಗೆ ಅವಿರೋಧವಾಗಿ ಯಶ್‌ಪಾಲ್ ಎ ಸುವರ್ಣ ರವರು ಪುನರಾಯ್ಕೆಯಾಗಿದ್ದಾರೆ, ಉಪಾಧ್ಯಕ್ಷರಾಗಿ ದೇವಪ್ಪ ಕಾಂಚನ್ ರವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಾ.13ರಂದು ಫೆಡರೇಶನಿನ ಆಡಳಿತ ಮಂಡಳಿಯ ಸಭೆಯಲ್ಲಿ ರಿಟರ್ನಿಂಗ್ ಅಧಿಕಾರಿ ಸುಧೀರ್ ಕುಮಾರ್ ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಮಂಗಳೂರು ಇವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಯಶ್‌ಪಾಲ್ ಸುವರ್ಣ 2009 ರಲ್ಲಿ ಫೆಡರೇಶನಿನ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ಆಡಳಿತ ಮಂಡಳಿಯ ಸದಸ್ಯರು ಮತ್ತು ಸರ್ವಸದಸ್ಯರ ಸಹಕಾರದಿಂದ ತಮ್ಮ ವೈಯಕ್ತಿಕ ವರ್ಚಸ್ಸನ್ನು ಬಳಸಿ ಫೆಡರೇಶನಿನ ವ್ಯವಹಾರಗಳನ್ನು ವಿಸ್ತರಿಸಿ, ನೂತನ ಬ್ಯಾಂಕಿಂಗ್ ವಿಭಾಗವನ್ನು ಆರಂಭಿಸಿ ರಾಜ್ಯ ಸರಕಾರದ ಮತ್ತು ಕೇಂದ್ರ ಸರಕಾರದ ಹಲವಾರು ಯೋಜನೆಗಳನ್ನು ಸಂಸ್ಥೆಗೆ ಪಡೆದು ಅನುಷ್ಠಾನಗೊಳಿಸಿ 46 ಕೋಟಿಗಳಷ್ಟು ಇದ್ದ ಸಂಸ್ಥೆಯ ವ್ಯವಹಾರವನ್ನು ಸುಮಾರು 350 ಕೋಟಿ ಮೀರುವಂತೆ ಮಾಡಿದ ಕೀರ್ತಿ ಯಶ್‌ಪಾಲ್ ಸುವರ್ಣ ನೇತೃತ್ವದ ಆಡಳಿತ ಮಂಡಳಿಗೆ ಸಲ್ಲುತ್ತದೆ.

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಈ ಹಿಂದೆ ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಸಂದರ್ಭದಲ್ಲಿ ಯಶ್‌ಪಾಲ್ ಸುವರ್ಣ ಅಧ್ಯಕ್ಷರಾಗಿ ಸಂಸ್ಥೆಯ ನೇತೃತ್ವ ವಹಿಸಿಕೊಂಡ ಬಳಿಕ ನಿರಂತರವಾಗಿ ಲಾಭ ಗಳಿಸುತ್ತ 15 ವರ್ಷಗಳಲ್ಲಿ ಸುಮಾರು 60 ಕೋಟಿ ಲಾಭವನ್ನು ದಾಖಲಿಸಿದೆ. ಕಳೆದ 15 ವರ್ಷಗಳಲ್ಲಿ ಫೆಡರೇಷನ್ ಕಾರ್ಯಚಟುವಟಿಕೆಗಳಿಗೆ ಹಲವಾರು ರಾಷ್ಟç ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, 2023 ನೇ ಸಾಲಿನಲ್ಲಿ ಕೇಂದ್ರ ಸರಕಾರದ ಮೀನುಗಾರಿಕೆ ಇಲಾಖೆಯ ರಾಷ್ಟ್ರೀಯ ಅತ್ಯುತ್ತಮ ಮೀನುಗಾರಿಕಾ ಮಹಾಮಂಡಲ ಪ್ರಶಸ್ತಿ, 2020ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಮೀನುಗಾರಿಕಾ ಮಹಾಮಂಡಲ ಪ್ರಶಸ್ತಿ ಸಹಿತ ಸಹಕಾರ ಕ್ಷೇತ್ರದ ಸಾಧನೆಯನ್ನು ಗುರುತಿಸಿ 2022ನೇ ಸಾಲಿನ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿಗೆ ಯಶ್‌ಪಾಲ್ ಸುವರ್ಣ ಭಾಜನರಾಗಿದ್ದಾರೆ.

ಈಗಾಗಲೇ ಸಂಸ್ಥೆಯ ಲಾಭಾಂಶದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಂಸ್ಥೆಯ ಸದಸ್ಯರಿಗೆ ಉಚಿತ ಆರೋಗ್ಯಕಾರ್ಡ್ ವಿತರಣೆ, ಸದಸ್ಯ ಸಹಕಾರಿ ಸಂಸ್ಥೆಗಳಿಗೆ ಮತ್ತು ಗ್ರಾಹಕರಿಗೆ ಪ್ರೋತ್ಸಾಹಕ ಉಡುಗೊರೆಗಳನ್ನು ನೀಡುತ್ತಾ ಬಂದಿದ್ದು, ವಿಶಿಷ್ಟ ಕಾರ್ಯ ಚಟುವಟಿಕೆಯ ಮೂಲಕ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ದಿಗೊಳಿಸುವ ಜೊತೆ ಜೊತೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಮೀನುಗಾರಿಕೆ ಹಾಗೂ ಮೀನುಗಾರರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಟಾನಕ್ಕಾಗಿ ಸರಕಾರ ಹಾಗೂ ಮೀನುಗಾರರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸುವ ಉದ್ದೇಶ ನೂತನ ಆಡಳಿತ ಮಂಡಳಿಯ ಮುಂದಿದೆ.
ಪ್ರಸ್ತುತ ಉಡುಪಿ ಕ್ಷೇತ್ರದ ಶಾಸಕರಾಗಿ, ಕರಾವಳಿ ಕರ್ನಾಟಕದ ಪ್ರತಿಷ್ಟಿತ ಮಹಾಲಕ್ಷಿö್ಮ ಕೋ. ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾಗಿ, ಬಿಜೆಪಿ ಹಿಂದುಳಿದ ವರ್ಗಗಳ ಮೊರ್ಚಾದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯಾಗಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಯಶ್‌ಪಾಲ್ ಸುವರ್ಣ ತಮ್ಮ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುತ್ತಾರೆ.
ಫೆಡರೇಶನಿನ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ದೇವಪ್ಪ ಕಾಂಚನ್, ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ರಾಮಚಂದ್ರ ಕುಂದರ್, ಶಿವಾಜಿ ಎಸ್. ಅಮೀನ್, ಸುರೇಶ್ ಸಾಲ್ಯಾನ್, ಚಿದಾನಂದ, ಉಷಾರಾಣಿ ಡಿ.ಕೆ., ಹೇಮಚಂದ್ರ ಸಾಲ್ಯಾನ್, ಟಿ ನಾರಾಯಣ, ಜಯರಾಜ್ ಮೆಂಡನ್, ಬೇಬಿ ಹೆಚ್ ಸಾಲ್ಯಾನ್, ಇಂದಿರಾ, ಸುಧಾಕರ, ಸುಧೀರ್ ಶ್ರೀಯಾನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ದರ್ಶನ್ ಕೆ.ಟಿ. ಉಪಸ್ಥಿತರಿದ್ದರು.


2024-2029ನೇ ಸಾಲಿಗೆ ನಮ್ಮ ತಂಡವನ್ನು ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯ ಸಹಕಾರಿ ಸಂಘದ ಸದಸ್ಯರಿಗೂ, ಮೀನುಗಾರ ಮುಖಂಡರಿಗೆ ಹಾಗೂ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟ ಅಧಿಕಾರಿಗಳಿಗೆ ಹಾಗೂ ಸಂಸ್ಥೆಯ ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸಿ ಮುಂಬರುವ ದಿನಗಳಲ್ಲೂ ಸಂಸ್ಥೆಯ ಬೆಳವಣಿಗೆಗೆ ತಮ್ಮ ಸಲಹೆ ಸೂಚನೆಗಳ ಮೂಲಕ ಸದಸ್ಯರು ಸಂಪೂರ್ಣ ಸಹಕಾರ ನೀಡುವಂತೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯಶ್‌ಪಾಲ್ ಸುವರ್ಣ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!