ಮಾಧವ ಮುದ್ರಾಡಿ ನಿಧನಕ್ಕೆ ಪ್ರಧಾನಿಯಿಂದ ಸಂತಾಪ ಪತ್ರ.

ಕಾರ್ಕಳ: ಬಿಜೆಪಿ ಐಟಿಸೆಲ್ ನ ಜಿಲ್ಲಾ ಸಂಚಾಲಕ ಮಾಧವ ಮುದ್ರಾಡಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಸಂತಾಪ .


ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದ ಮಾಧವ ಆಗಸ್ಟ್ ೧೨ ರಂದು ಚಿಕಿತ್ಸೆಗೆ ಸ್ಪಂದಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಈ ಬಗ್ಗೆ ಪ್ರಧಾನಿ ಕಛೇರಿಯಿಂದ ಮಾಧವ್ ಅವರ ತಂದೆ ಗಣಪತಿ ಅವರಿಗೆ ಸಂತಾಪ ಸೂಚಕ ಪತ್ರ ಬಂದಿದ್ದು , ಮೃತರು ತನ್ನ ಹೃದಯವಂತಿಕೆ ಹಾಗೂ ಬುದ್ಧಿವಂತಿಕೆಯನ್ನು ಸಮಾನವಾಗಿ ಸಮಾಜಕ್ಕಾಗಿ ನೀಡುತ್ತಿದ್ದರು, ಇದು ಅವರ ಸದ್ಗುಣವಾಗಿದ್ದು ಈ ದೇಶ ಅವರನ್ನು ಎಂದೂ ಮರೆಯಲ್ಲ.
ಮಗನ ನಿಧನದಿಂದ ಕುಟುಂಬಕ್ಕೆ ತುಂಬಾಲರಾದ ನಷ್ಟ ,ಈ ನೋವುವನ್ನು ಬರಿಸುವ ಶಕ್ತಿ ಭಗವಂತ ನಿಮಗೆ ನೀಡಲಿ . ಮಾಧವ್ ಸಮಾಜಕ್ಕೆ ಉತ್ತಮ ಮಾರ್ಗದರ್ಶಕನಾಗಿದ್ದರು ಎಂದು ಪ್ರಧಾನಿ ಕಾರ್ಯಲಯದಿಂದ ಬಂದ ಪತ್ರದಲ್ಲಿದೆ.

Leave a Reply

Your email address will not be published. Required fields are marked *

error: Content is protected !!