ನವಚೇತನ ಯುವಕ ಮಂಡಲ : ಮುದ್ದು ಕೃಷ್ಣ ಸ್ಪರ್ಧೆ


ಉಡುಪಿ : ನವಚೇತನ ಯುವಕ ಮಂಡಲ ಮತ್ತು ಯುವತಿ ಮಂಡಲ ಕಟ್ಟೆಗುಡ್ಡೆ ಕುತ್ಪಾಡಿ ಇವರ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪುಟಾಣಿಗಳಿಗಾಗಿ ಆರನೇ ವರ್ಷದ ಮಹಾಲಕ್ಷ್ಮಿ ವೆಂಚರ್ಸ್ “ಮುದ್ದು ಕೃಷ್ಣ ಸ್ಪರ್ಧೆ” ನವಚೇತನ ಯುವಕ ಮಂಡಲದ ಸಭಾಭವನದಲ್ಲಿ ಜರಗಿತು.


 ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ  ಯಶ್ ಪಾಲ್ ಸುವರ್ಣ ಉದ್ಘಾಟಿಸಿ, ಶುಭಹಾರೈಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ನವಚೇತನ ಯುವಕ ಮಂಡಲದ ಅಧ್ಯಕ್ಷ ಸುಪ್ರೀತ್ ಸುವರ್ಣ , ಕಾರ್ಯದರ್ಶಿ ಕಿಶೋರ್ ಕುಮಾರ್, ಯುವತಿ ಮಂಡಲದ ಉಪಾಧ್ಯಕ್ಷೆ ಸುಶೀಲಾ ಶ್ರೀನಿವಾಸ್, ಕಾರ್ಯದರ್ಶಿ ಸುಹಾಸಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಎರಡು ವಿಭಾಗಗಳಲ್ಲಿ ನಡೆದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಸ್ಥಳೀಯ 120 ಕ್ಕೂ ಅಧಿಕ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.


 ಮೂರು ವರ್ಷ ಒಳಗಿನ ಮಕ್ಕಳ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಶ್ರೀವಾರಿ, ದ್ವಿತೀಯ ಗಾನವಿ, ತೃತೀಯ ಪ್ರಣಯ್ ಮತ್ತು ಮೂರರಿಂದ ಐದು ವರ್ಷದ ಒಳಗಿನ ಮಕ್ಕಳ ಸೀನಿಯರ್ ವಿಭಾಗದಲ್ಲಿ ಪ್ರಥಮ ನಿಹಾಲಿ, ದ್ವಿತೀಯ ಆರಾಧ್ಯ, ತೃತೀಯ ಅಕ್ಷಯ ಕೊಡಂಚ ವಿಜೇತರಾದರು.ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.


ತೀರ್ಪುಗಾರರಾಗಿ ರವಿಕುಮಾರ್ ಕಡೆಕಾರ್, ಬಬಿತಾ, ಅನಿಲ್ ಕುಮಾರ್ ಸಹಕರಿಸಿದರು.
ನವಚೇತನ ಯುವಕ ಮಂಡಲದ ಅಧ್ಯಕ್ಷ ಸುಪ್ರೀತ್ ಸುವರ್ಣ ಸ್ವಾಗತಿಸಿದರೆ, ಕಾರ್ಯದರ್ಶಿ  ಕಿಶೋರ್ ಕುಮಾರ್ ವಂದಿಸಿದರು. ಸಚೀಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿದರು.

ReplyForward

Leave a Reply

Your email address will not be published. Required fields are marked *

error: Content is protected !!