ಜ.22 ಅಯೋಧ್ಯೆಯಲ್ಲಿ ಶ್ರೀರಾಮಲಲ್ಲನಾ ಪ್ರಾಣಪ್ರತಿಷ್ಠೆ- ವಿಎಚ್ಪಿ ಮನವಿ
ಉಡುಪಿ: ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಲ್ಲಿ ಶ್ರೀ ರಾಮಲಲ್ಲನಾ ಪ್ರಾಣ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಉಡುಪಿ ಜಿಲ್ಲೆಯಾದ್ಯಂತ ನಡೆಯುವ ಧಾರ್ಮಿಕ ಕಾರ್ಯಕ್ರಮ ದಲ್ಲಿ ಭಾಗಿಯಾಗಲು ಜನರಿಗೆ ಅವಕಾಶ ಮಾಡಿ ಕೊಡುವಂತೆ ಖಾಸಗಿ ಸಂಸ್ಥೆಗಳು, ಮಾಲೀಕರಿಗೆ, ವಿವಿಧ ಕ್ಷೇತ್ರದ ಉದ್ಯಮಿಗಳಿಗೆ ವಿಶ್ವ ಹಿಂದು ಪರಿಷದ್ ಮನವಿಯೊಂದನ್ನು ಮಾಡಿದೆ.
ಸುಮಾರು 500ವರುಷಗಳ ಹೋರಾಟ, ಲಕ್ಷಾಂತರ ಜನರ ಬಲಿದಾನ, ಕೋಟ್ಯಂತರ ಹಿಂದುಗಳ ಅಸ್ಮಿತೆಯ ಸಂಕೇತ ಅಯೋಧ್ಯೆಯಲ್ಲಿ ಭವ್ಯವಾದ ರಾಮನ ಮಂದಿರ ನಿರ್ಮಾಣ ನಮ್ಮ ಕಾಲ ಘಟ್ಟದಲ್ಲಿ ನಡೆಯುವುತ್ತಿರುವುದು ಅತ್ಯಂತ ಸಂತೋಷ ಮತ್ತು ಪುಣ್ಯದ ಕಾರ್ಯ. ಅಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಜನರಿಗೆ ಸದ್ಯದ ಸ್ಥಿತಿಯಲ್ಲಿ ಅವಕಾಶ ಇಲ್ಲದೇ ಇರುವುದರಿಂದ ಅಲ್ಲಿ ನಡೆಯುವ ಕಾರ್ಯಕ್ರಮದ ಅಂಗವಾಗಿ ಉಡುಪಿ ಜಿಲ್ಲೆಯ ಎಲ್ಲಾ ದೇವಸ್ಥಾನ, ಭಜನಾ ಮಂದಿರಗಳಲ್ಲಿ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅಯೋಧ್ಯೆಯ ನೇರ ಪ್ರಸಾರದ ವ್ಯವಸ್ಥೆ ನಡೆಯಲಿದೆ.
ಈ ಪುಣ್ಯ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಳು ಜನರಿಗೆ ಅನುಕೂಲ ಆಗುವಂತೆ ಜಿಲ್ಲೆಯ ಎಲ್ಲಾ ಖಾಸಗಿ ಸಂಸ್ಥೆಗಳು, ಉದ್ಯಮಿಗಳು, ಮಾಲೀಕರು ಅವಕಾಶ ಮಾಡಿಕೊಡುವಂತೆ ವಿಶ್ವ ಹಿಂದು ಪರಿಷದ್ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ವಿನಂತಿಸಿಕೊಂಡಿದ್ದಾರೆ.