ಜೂನ್ 28ಕ್ಕೆ ಬೈಂದೂರಿನಲ್ಲಿ ಬೃಹತ್ ಪ್ರತಿಭಟನೆ

ಇತ್ತೀಚೆಗೆ ಬೈಂದೂರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಟ ಹಾಗೂ ಗೋಕಳ್ಳತನದ ಸರಣಿ ಪ್ರಕರಣಗಳಿಂದ ಬೇಸತ್ತು ವಿಶ್ವ ಹಿಂದೂಪರಿಷದ್ ಹಾಗೂ ಭಜರಂಗದಳ ಬೈಂದೂರು ಪ್ರಖಂಡ ಇದೇ ಜೂನ್ 28ರ ಬೆಳಿಗ್ಗೆ ಬೈಂದೂರು ತಾಲೂಕು ಕಚೇರಿಯ ಎದುರು ಬೃಹತ್ ಪ್ರತಿಭಟನಾ ಸಭೆಗೆ ಕರೆಕೊಟ್ಟಿದೆ.

ಏನೀದು ಪ್ರಕರಣ..?

ಬೈಂದೂರು ತಾಲೂಕಿನಲ್ಲಿ ಕಳೆದ ಕೆಲತಿಂಗಳುಗಳಿನಿಂದ ನಿರಂತರ ಅಕ್ರಮಗೋಸಾಗಟಗಳು ಎಡಬಿಡದೆ ನಡೆಯುತ್ತಿದ್ದು ಕೊಟ್ಟಿಗೆಗಳಿಗೆ ನುಗ್ಗಿ ಹೈನುಗಾರಿಕೆಯ ಬೆನ್ನೆಲುಬಾಗಿದ್ದ ದನಗಳನ್ನು ಕದ್ದೊಯ್ಯುತ್ತಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಬೈಂದೂರಿನ ಯಳಜಿತ್ ಎಂಬಲ್ಲಿ ದಾರು ಗೌಡ್ತಿ ಹಾಗೂ ಪಾರ್ವತಿ ಪೂಜಾರ್ತಿ ಎಂಬವರ ಮನೆಯ ಕೊಟ್ಟಿಗೆಗೆ ನುಗ್ಗಿ ದನಗಳನ್ನು ಕದ್ದೊಯ್ಯಲಾಯಿತು.

ತದನಂತರ ಎರಡೂ ರಾಜಕೀಯ ಪಕ್ಷಗಳು ಸೇರಿ ಹಿಂದೂ ಸಂಘಟನೆಗಳ ಒತ್ತಡದಿಂದ ಕಳವಾದ ದನಗಳನ್ನು ಪತ್ತೆಹಚ್ಚುವಲ್ಲಿ ಬೈಂದೂರು ಪೋಲಿಸರು ಯಶಸ್ವಿಯಾಗಿದ್ದಾರೆ.
ಸ್ಥಳೀಯ ಶಾಸಕರಾದ ಬಿ.ಎಮ್.ಸುಕುಮಾರ್ ಶೆಟ್ಟಿ ಹಾಗೂ ವಿಪಕ್ಷ ನಾಯಕ ಕೋಟಾ ನೊಂದ ಮನೆಗಳಿಗೆ ಧಾವಿಸಿ ಸಾಂತ್ವನದ ಮಾತನಾಡಿದ್ದಾರೆ

ಇದು ಕೇವಲ ಒಂದೆರಡು ಪ್ರಕರಣಗಳಿಗಷ್ಟೇ ಸೀಮಿತವಲ್ಲ

ಬೈಂದೂರು ತಾಲೂಕು ನಿರಂತರ ಈ ಗೋಕಳ್ಳತನದಿಂದ ನಲುಗಿಹೋಗಿದೆ,ಹೈನುಗಾರಿಕೆಯನ್ನೇ ಬದುಕು ಮಾಡಿಕೊಂಡವರು ದಿನನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ ಆದ್ದರಿಂದ ಜನಜಾಗೃತಿಗಾಗಿ ಇದೇ ಜೂನ್ 28ರ ಬೆಳಿಗ್ಗೆ 10ಗಂಟೆಗೆ ಬೈಂದೂರು ತಾಲೂಕು ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದೇವೆ” ಎಂದು ಬೈಂದೂರು ಭಾಗದ ಹಿಂದೂ ಸಂಘಟನೆಯ ಮುಖಂಡ ಶ್ರೀಧರ್ ಬೀಜೂರು ಉಡುಪಿ ಟೈಮ್ಸ್ ಗೆ ಹೇಳಿದ್ದಾರೆ

Leave a Reply

Your email address will not be published. Required fields are marked *

error: Content is protected !!