ಆಟೋರಿಕ್ಷಾಗಳಿಗೆ ವಲಯ ಸ್ಟಿಕ್ಕರ್ ಅಳವಡಿಕೆ ಕಡ್ಡಾಯ

ಉಡುಪಿ: ಉಚ್ಛ ನ್ಯಾಯಾಲಯದ ಆದೇಶ ಮತ್ತು ಪ್ರಾದೇಶಿಕ ಸಾರಿಗೆ
ಪ್ರಾಧಿಕಾರದ ನಿರ್ಣಯದಂತೆ ಉಡುಪಿ ಜಿಲ್ಲೆಯ ಉಡುಪಿ ಮತ್ತು ಕುಂದಾಪುರ ತಾಲೂಕಿನ ಎಲ್ಲಾ ಆಟೋರಿಕ್ಷಾ ಚಾಲಕ / ಮಾಲಕರು ಜೂನ್ 30 ರ ಒಳಗೆ ಆಟೋರಿಕ್ಷಾಗಳನ್ನು ಮೂಲ ದಾಖಲೆಗಳೊಂದಿಗೆ ಕಚೇರಿಗೆ ಹಾಜರುಪಡಿಸಿ ಕಡ್ಡಾಯವಾಗಿ ವಲಯ ಸ್ಟಿಕ್ಕರ್‍ಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.


ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಎ ರಾಮಕೃಷ್ಣ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!