ಪರೀಕ್ಷೆ ಬಾಕಿ ಇದ್ದರೂ ನಾಳೆಯಿಂದ ರಜೆ ನೀಡಲು ಆದೇಶ: ಆಯುಕ್ತರು ಶಿಕ್ಷಣ ಇಲಾಖೆ

ಉಡುಪಿ: ಶಾಲೆಗಳಲ್ಲಿ ಪರೀಕ್ಷೆ ಬಾಕಿ ಇದ್ದರೂ ಅಂತಹ ಶಾಲೆಗಳಿಗೆ ರಜೆ ನೀಡಲು ಆದೇಶ ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ 1ನೇ ತರಗತಿಯಿಂದ 5ನೇ ತರಗತಿಗಳಿಗೆ ಮಾರ್ಚ್ 16 ಒಳಗೆ ಹಾಗೂ 6ನೇ ತರಗತಿಯಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮಾರ್ಚ್ 23ರ ಒಳಗೆ ಪರೀಕ್ಷೆ ಮುಗಿಸಲು ಸರಕಾರ ಆದೇಶ ನೀಡಿದೆ.

ಇಂದು ರಾಜ್ಯ ಸರಕಾರ ಕೊರೋನಾ(19) ವೈರಸ್ ಹರಡುವ ಭೀತಿಯಿಂದ ಶನಿವಾರದಿಂದ ಒಂದು ವಾರ ಶಾಲಾ, ಕಾಲೇಜ್‌ಗೆ ರಜೆ ಘೋಷಿಸಿದೆ. ಇದರಿಂದ ವಿದ್ಯಾರ್ಥಿಗಳು, ಪೋಷಕರು ಗೊಂದಲಕ್ಕೀಡಾಗಿದ್ದಾರೆ. ಈ ಬಗ್ಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣಾಧಿಕಾರಿ ಶೇಷಶಯನ ಅವರೊಂದಿಗೆ “ಉಡುಪಿ ಟೈಮ್ಸ್” ಮಾತನಾಡಿಸಿದಾಗ ಸರಕಾರಿ ಆದೇಶದಂತೆ ಪರೀಕ್ಷೆ ಬಾಕಿ ಇದ್ದರೂ ನಾಳೆಯಿಂದ ರಜೆ ನೀಡಲು ಆದೇಶ, ಹೈಸ್ಕೂಲ್‌ಗೆ ಮಾರ್ಚ್ 23ರ ಒಳಗೆ ಪರೀಕ್ಷೆ ಮುಗಿಸಲು ಆದೇಶ ಬಂದಿದೆ. ಅದರಂತೆ ಶಾಲೆಗಳಲ್ಲಿ ಪರೀಕ್ಷೆ ಬಾಕಿ ಇದ್ದರೂ ನಾಳೆಯಿಂದ ರಜೆ ಎಂಬುದಾಗಿ ತಿಳಿಸಿದರು.

1 thought on “ಪರೀಕ್ಷೆ ಬಾಕಿ ಇದ್ದರೂ ನಾಳೆಯಿಂದ ರಜೆ ನೀಡಲು ಆದೇಶ: ಆಯುಕ್ತರು ಶಿಕ್ಷಣ ಇಲಾಖೆ

Leave a Reply

Your email address will not be published. Required fields are marked *

error: Content is protected !!